ಲೋಕದರ್ಶನ ವರದಿ
ಯಲ್ಲಾಪುರ,15: ಕಾನೂನಿನ ಕುರಿತು ಇರುವ ಭಯವನ್ನು ಹೋಗಲಾಡಿಸಿ, ಮಕ್ಕಳು ಶೋಷಣೆಗೊಳಗಾಗದಂತೆ ಅವರಲ್ಲಿ ಕಾನೂನಿನ ಅರಿವು ಮೂಡಿಸುವದು ಇಂದು ಅಗತ್ಯವಾಗಿದೆ. ಎಂದು ಹಿರಿಯ ನ್ಯಾಯಾಧೀಶ ವಿ.ವಿ ಜೋಶಿ ಹೇಳಿದರು.ಅವರು ಬುಧವಾರ ಸಂಜೆ ಪಟ್ಟಣದ ಸಬಗೇರಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಶ್ರಾಯದಲ್ಲಿ ಮಕ್ಕಳ ದಿನಾಚಾರಣೆ ನಿಮಿತ್ತ ಹಮ್ಮಿಕೊಂಡಿದ್ದ ಬಾಲಾಪರಾಧವಿರೋಧಿ ಕಾಯ್ದೆ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್ ಹೆಗಡೆ ಮಾತನಾಡಿ ನಾವು ಬೇರೆಯವರಿಗೆ ಮೋಸ ಮಾಡಬಾರದು ಹಾಗೂ ನಾವು ಸಮಸ್ಯೆಯ ಸುಳಿಗೆ ಸಿಗದಂತೆ ನೆಮ್ಮದಿಯ ಜೀವನಕ್ಕೆ ಪ್ರತಿಯೊಬ್ಬರಿಗೂ ಕಾನೂನಿನ ತಿಳುವಳಿಕೆ ಅವಶ್ಯವಾಗಿ ಪಡೆಯಬೇಕು.ವಿದ್ಯಾಥರ್ಿದೆಸೆಯಿಂದಲೆ ಶೋಷಣೆಯನ್ನು ಪ್ರತಿಭಟಿಸುವ ಮನೋಭಾವನೆ ಬೆಳೆಸಲು ಶಾಲೆಗಳಲ್ಲಿ ಕಾನೂನು ಅರಿವು ಕಾರ್ಯಕ್ರಮ ಮೂಲಕ ಮಕ್ಕಳಲ್ಲಿ ಕಾನೂನಿನ ಕುರಿತ ತಿಳುವಳಿಕೆ ನೀಡಲಾಗುತ್ತಿದೆ. ಮಕ್ಕಳು ತಮ್ಮ ಸುತ್ತ ಮುತ್ತ ಯಾರೇ ಶೋಷಣೆಗೊಳಗಾಗುತ್ತಿರುವದು ತಮ್ಮ ಗಮನಕ್ಕೆ ಬಂದ ಕೂಡಲೇ ಹಿಂಜರಿಯದೇ ಶಿಕ್ಷಕರ,ಪಾಲಕರ ಅಥವಾ ಹಿರಿಯರ ಗಮನಕ್ಕೆ ತಂದು ಕಾನೂನಿನ ನೆರವು ಕೊಡಿಸುವಲ್ಲಿ ಮುಂದಾಗಬೇಕು ಎಂದರು. ಹಿರಿಯ ವಕೀಲ ಎನ್.ಟಿ ಗಾಂವ್ಕರ್ ಉಪನ್ಯಾಸ ನೀಡಿ ಬಾಲಾಪರಾಧವಿರೋಧಿ ಕಾಯ್ದೆ ಕುರಿತು ವಿವರವಾದ ಮಾಹಿತಿ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಟಿ.ಜಿ ಕೋಮಾರ ಮಾತನಾಡಿದರು. ದೈಹಿಕ ಶಿಕ್ಷಣ ಪರಿವೀಕ್ಷಕ ರವೀಂದ್ರ ಕಾಪ್ಸೆ, ಶಂಕರಮ್ಮಾ ಬೋವಿ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಪಕಿ ಶಾಲಿನಿ ಪಾಲೇಕರ್ ಸ್ವಾಗತಿಸಿದರು. ಶಿಕ್ಷಕಿಯರಾದ ಭಾರತಿ ನಾಯಕ ನಿರ್ವಹಿಸಿದರು. ಸರಸ್ವತಿ ಭಟ್ಟ ವಂದಿಸಿದರು.