ಭಾರತ ಹಿಂದೂ ರಾಷ್ಟ್ರವೆಂದು ಘೋಷಿಸದಿರುವುದೇ ದುರಂತ: ಗುರುಪ್ರಸಾದಗೌಡ
It is a tragedy that India was not declared a Hindu Rashtra: Guruprasad Gowda
ಮಹಾಲಿಂಗಪುರ 22 : ಮತಾಂತರ, ಲವ್ ಜಿಹಾದ್ ನಂತಹ ಕುಕೃತ್ಯಗಳಿಂದ ಹಿಂದೂ ಧರ್ಮ ತುಂಬಾ ಸಂಕಷ್ಟದಲ್ಲಿದೆ.ಈಗ ಹಿಂದುಗಳು ಎಚ್ಚೆತ್ತುಕೊಳ್ಳದೇ, ಧರ್ಮ ರಕ್ಷಣೆಯಲ್ಲಿ ತೊಡಗದೆ ಇದ್ದರೆ ಮುಂದೆ ನಮಗಾಗಿ ಎಲ್ಲಿಯೂ ಜಾಗವಿರುವುದಿಲ್ಲ ನಾವು ಬಂಗಾಳ ಕೊಲ್ಲಿ ಅಥವಾ ಅರಬ್ಬಿ ಸಮುದ್ರವನ್ನೇ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಭಾರತವನ್ನು ಇದುವರೆಗೂ ಹಿಂದೂ ರಾಷ್ಟ್ರವೆಂದು ಘೋಷಣೆ ಮಾಡದಿರುವುದು ದೊಡ್ಡ ದುರಂತ ಎಂದು ಸನಾತನ ಹಿಂದೂ ಜನಜಾಗೃತಿ ಸಂಸ್ಥೆಯ ಗುರುಪ್ರಸಾದಗೌಡ ಹೇಳಿದರು.
ಸ್ಥಳೀಯ ಸಿದ್ಧಾರೂಢ ಮಠದಲ್ಲಿ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಜರುಗಿದ ಧರ್ಮ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ರೈಸ್ತ ರಾಷ್ಟ್ರದಲ್ಲಿ ಹೋಗಿ ಕ್ರೈಸ್ತ ಧರ್ಮದ ವಿರುದ್ಧ, ಮುಸ್ಲಿಂ ರಾಷ್ಟ್ರದಲ್ಲಿ ಮುಸ್ಲಿಂ ಧರ್ಮದ ವಿರುದ್ಧ ಮಾತನಾಡಲು ಸಾಧ್ಯವಿಲ್ಲ ಆದರೆ ಭಾರತದಲ್ಲಿ ಹಿಂದೂ ಧರ್ಮದ ವಿರುದ್ಧ ಮತ್ತು ಹಿಂದೂ ದೈವಗಳ ವಿರುದ್ಧ ಮಾತನಾಡುವುದು ಬಹಳ ಸುಲಭ ಇದರ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ , '
ಹಿಂದುಗಳಿಗೆ ಧರ್ಮ ಶಿಕ್ಷಣದ ಕೊರತೆ ಇರುವುದೇ ಇದಕ್ಕೆ ಕಾರಣ ಬಹುಸಂಖ್ಯಾತರಾದ ಹಿಂದೂ ದೇಶ ಭಾರತದಲ್ಲಿ ಹಿಂದೂ ಧರ್ಮ ಸಂಕಷ್ಟದಲ್ಲಿದೆ ಕಾರಣ ಕೇವಲ ಶೇ. ಹತ್ತರಷ್ಟು ಜನ ಧರ್ಮಾಚರಣೆ ಮತ್ತು ರಕ್ಷಣೆಯಲ್ಲಿ ತೊಡಗಿದ್ದರೆ, ಶೇ. ಹತ್ತರಷ್ಟು ಜನ ಧರ್ಮ ಹಾಳು ಮಾಡುವವರಿದ್ದಾರೆ ಆದರೆ ಶೇಕಡ 80ರಷ್ಟು ಹಿಂದುಗಳು ಧರ್ಮದ ಬಗ್ಗೆ ಯಾವುದೇ ಕಾಳಜಿ ಇಲ್ಲದೆ ಸ್ವಾರ್ಥದಲ್ಲಿ ಬದುಕುತ್ತಿದ್ದಾರೆ ಹೀಗಾದರೆ ಧರ್ಮ, ದೇಶ ಉಳಿಯಲಾರದು, ಧರ್ಮಕ್ಕೆ ಮೊದಲೇ ಆದ್ಯತೆ ನೀಡಿದರೆ ಧರ್ಮ, ದೇಶ ಉಳಿಯುತ್ತದೆ.
ಅಲ್ಪಸಂಖ್ಯಾತರ ಧಾರ್ಮಿಕ ಶಿಕ್ಷಣಕ್ಕೆ ಸಿಗುವ ಸವಲತ್ತುಗಳು ಹಿಂದೂ ಧರ್ಮಕ್ಕೆ ಸಿಗಬೇಕು, ಬರೀ ಅರ್ಥ,ಕಾಮ ಸಂಪಾದನೆಯಲ್ಲಿ ತೊಡಗಿರುವ ಹಿಂದುಗಳು ಧರ್ಮ ಮತ್ತು ಮೋಕ್ಷ ಸಂಪಾದನೆಯತ್ತ ಗಮನಹರಿಸಬೇಕು. ಉತ್ತಮ ಸಮಾಜ ನಿರ್ಮಾಣ, ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಭಗವಂತನ ಉಪಾಸನೆಯಿಂದ ಶಕ್ತಿ ವೃದ್ಧಿಸಿಕೊಳ್ಳಬೇಕು. ಕೃಷ್ಣ ಮಂತ್ರ, ಕುಲದೈವ ಮತ್ತು ಗುರುದೇವ ದತ್ತ ಮಂತ್ರಗಳ ಜಪದಿಂದ ಸಾತ್ವಿಕ ಶಕ್ತಿಯ ಆವಾಹನೆಯಾಗಿ ಧರ್ಮ,ದೇಶ ಉಳಿಸಲು ಸಾಧ್ಯ ಆದ್ದರಿಂದ ಪ್ರತಿಯೊಬ್ಬ ಹಿಂದೂ ದಿನಕ್ಕೆ ಒಂದೆರಡು ಗಂಟೆಯಾದರೂ ನಾಮ ಜಪದಲ್ಲಿ ತೊಡಗಬೇಕು ಎಂದರು.
ರಾಜೇಶ್ವರಿ ಆಸಂಗಿ, ರವಿ ಜವಳಗಿ, ಮಹಾಲಿಂಗಪ್ಪ ಕಂಕಣವಾಡಿ, ಸಪನಾ ಅನಿಗೋಳ, ವಿಜಯಲಕ್ಷ್ಮಿ ಕುಳ್ಳೊಳ್ಳಿ, ಸುವರ್ಣ ಆಸಂಗಿ, ಗೌರಿ ಮಣ್ಣಯ್ಯನವರಮಠ, ಅರ್ಜುನ ಪವಾರ, ಪವನ ಶಿರೋಳ, ರಾಘು ಪವಾರ, ಬಸವರಾಜ ಮುರಾರಿ, ಹನುಮಂತ ಮಾದರ, ಮಹೇಶ ಹುಬ್ಬಳ್ಳಿ, ಪ್ರಜ್ವಲ ಯಾದವಾಡ, ಮಲ್ಲಪ್ಪ ಚಿಚಖಂಡಿ, ಮಹಾಲಿಂಗ ಜಮಖಂಡಿ ಇತರರಿದ್ದರು
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 