ಮೂರು ತಿಂಗಳಾದ್ರೂ ಜನಪ್ರತಿನಿಧಿಗಳಿಗೆ ಸಿಗದ ಅಧಿಕಾರ ಭಾಗ್ಯ


ಸುಧೀರ ನಾಯರ್, 

ಮೂಡಲಗಿ: ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು ಮೂರು ತಿಂಗಳ ಕಳೆದಿದೆ. ಆದರೆ ಈವರೆಗೂ ಚುನಾವಣೆ ಆಡಳಿತ ವ್ಯವಸ್ಥೆ ಆಸ್ತಿತ್ವಕ್ಕೆ ಬಂದಿಲ್ಲ. ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳ ಆಕಾಂಕ್ಷಿಗಳಿಗೆ ಈವರೆಗೂ ಅಧಿಕಾರದ ಭಾಗ್ಯ ಸಿಕ್ಕಿಲ್ಲ. ಇದರಿಂದ ಪಟ್ಟಣದ ಅಭಿವೃದ್ಧಿ ಕೆಲಸಗಳಿಗೆ ಗ್ರಹಣ ಹಿಡಿದಂತಾಗಿದೆ.

       ಪಟ್ಟಣದ 23ವಾರ್ಡಗಳಿಗೆ ಚುನಾವಣೆಯೆನೋ ನಡೆದು ಮೂರು ತಿಂಗಳು ಕಳೆದಿದೆ. ಆದರೆ ಚುನಾಯಿತರಿಗೆ ಅಧಿಕೃತ ಅಧಿಕಾರ ಮಾತ್ರ ಇನ್ನು ದೊರೆತಿಲ್ಲ ಇದರಿಂದ ಆಯ್ಕೆಯಾದ ಸದಸ್ಯರು ನಿರಾಶಾದಾಯಕರಾಗಿದ್ದಾರೆ. ಮೀಸಲಾತಿ ಗೊಂದಲದಿಂದ ಕೆಲ ವಾರಗಳು ಕಳೆದವು. ಇದೀಗ ಮತ್ತೆ 

 ಮೀಸಲಾತಿ ಬರದಿರುವುದರಿಂದ ಈವರೆಗೂ ಸ್ಥಳೀಯ ಆಡಳಿತ ಅಸ್ತಿತ್ವಕ್ಕೆ ಬಂದಿಲ್ಲ.

        ಸೆ.3ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಪ್ರಕಟವಾದ ದಿನವೇ ಸರಕಾರ ಮೀಸಲಾತಿ ಪ್ರಕಟಿಸಿತ್ತು. ಆದರೆ ಮೀಸಲಾತಿ ಬದಲಾಯಿಸಿದನ್ನು ಪ್ರಶ್ನಿಸಿ ಸಾರ್ವಜನಿಕರು ನ್ಯಾಯಲಯದ ಮೆಟ್ಟಿಲೇರಿದ್ದರು. ನ್ಯಾಯಲಯವೂ ಅ.9ರಂದು  ತೀಪರ್ು ನೀಡುವ ಮುನ್ನವೇ ಸರಕಾರ ಅಜರ್ಿಯನ್ನು ಹಿಂಪಡೆದು ಮೊದಲ ಮೀಸಲಾತಿ ಪಟ್ಟಿಯನ್ನು ಮುಂದುವರೆಸಲಾಗುವುದು ಎಂದು ಹೇಳಿತು. ಇದನ್ನು ಪ್ರಶ್ನಿಸಿ ಮತ್ತೆ ಕೋರ್ಟ ಮೇಟ್ಟಿಲೇರಿದ ಪರಿಣಾಮ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಆಯ್ಕೆಗೆ ಬ್ರೇಕ್ ಬಿದ್ದಂತಾಗಿದೆ.

ಪುರಸಭೆ ಚುನಾವಣೆ ಮುಗಿದು ಮೂರು ತಿಂಗಳು ಕಳೆದಿದೆ. ಆಡಳಿತ ವ್ಯವಸ್ಥೆ ಮಾತ್ರ ಅಸ್ತಿತ್ವಕ್ಕೆ ಬಾರದ ಹಿನ್ನೆಲೆಯಲ್ಲಿ ಪುರಸಭೆ ವ್ಯಾಪ್ತಿಯ ಅಭಿವೃದ್ದಿ ಕೆಲಸಗಳು ಸ್ಥಗಿತಗೊಂಡಿವೆ. ಆದರೆ ಮೀಸಲಾತಿ ನ್ಯಾಯಲಯ ಮೆಟ್ಟಿಲೇರಿರುವುದರಿಂದ ತೀಪರ್ು ಬರುವವರೆಗೂ     ಕಾಯಬೇಕಾದ ಸ್ಥಿತಿ ನಿಮರ್ಾಣವಾಗಿದೆ.  

ಅಧಿಕಾರಿಗಳ ದಬರ್ಾರ್

ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪಟ್ಟಿ ಹೈಕೋರ್ಟನಲ್ಲಿ ಇತ್ಯರ್ಥವಾಗಬೇಕಿರುವುದರಿಂದ ಕಛೇರಿಗಳ ಅಧಿಕಾರವನ್ನು ಆಡಳಿತಾಧಿಕಾರಿಗಳನ್ನು ನೇಮಿಸಿದೆ. ಚುನಾಯಿತ ಪ್ರತಿನಿಧಿಗಳ ಆಡಳಿತ ಇಲ್ಲದ ಕಾರಣ ಸದ್ಯ ಪುರಸಭೆಯಲ್ಲಿ ಅಧಿಕಾರಿಗಳದ್ದೆ ದಬರ್ಾರ ನಡೆಯುತ್ತಿದ್ದು ಸಾರ್ವಜನಿಕರ ಗೋಳು ಕೇಳದಂತಾಗಿದೆ.  

ಅಭಿವೃದ್ಧಿ ಕುಂಠಿತ 

ಮೀಸಲಾತಿಯ ಗೊಂದಲದಿಂದಾಗಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ. ಚುನಾಯಿತ ಆಡಳಿತ ವ್ಯವಸ್ಥೆ ಇಲ್ಲದೆ ಪುರಸಭೆಯಲ್ಲಿ ಅಭಿವೃದ್ಧಿ ಕೆಲಸಕ್ಕೆ ಗ್ರಹಣ ಹಿಡಿದಂತಾಗಿ ಇದರಿಂದ ಆಡಳಿತ ವ್ಯವಸ್ಥೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ಮೇಲೆ ಪರಿಣಾಮ ಬೀರುತ್ತಿದೆ. 

ಜನಪ್ರತಿನಿಧಿಗಳಿಗೆ ನಿರಾಶೆ

ಮೀಸಲಾತಿ ಪ್ರಶ್ನಿಸಿ ಕೋರ್ಟನಲ್ಲಿರುವ ಪ್ರಕರಣ ಈವರೆಗೂ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಇನ್ನೂ ವಿಳಂಬವಾಗುತ್ತಿದೆ. ಈಗಾಗಲೇ ಮೂರು ತಿಂಗಳು ಕಳೆದು ನಾಲ್ಕನೇ ತಿಂಗಳು ಸಮಿಪಿಸುತ್ತಿದ್ದರೂ ಸಹ ಅಧಿಕಾರ ಭಾಗ್ಯ ದೊರೆಯದಿರುವುದು ಜನಪ್ರತಿನಿಧಿಗಳಿಗೆ ನಿರಾಶೆಯನ್ನುಂಟು ಮಾಡಿದೆ.