'ಈಶ್ವರೀಯ ವಿಶ್ವ ವಿದ್ಯಾಲಯ ಆತ್ಮ ಜ್ಞಾನದಿಂದ ಬಂಧನ ಮುಕ್ತಿ'

ಲೋಕದರ್ಶನ ವರದಿ

ಗದಗ 13: ರೂಢಿಯಲ್ಲಿ ಬಳಕೆಯಲ್ಲಿರುವ ಸತ್ತ ಎಂಬ ಪದವು ಆತ್ಮ ವಾಚಕವಾಗಿದೆ. ಅದರಿಂದಲೇ ಶರೀರವನ್ನು ಆತ್ಮ ಬಿಟ್ಟುಹೋಗುವ ಸಾವಿರ ಪ್ರಕ್ರಿಯೆಯನ್ನು ಸತ್ತ ಹೋದರು ಎಂದು ಹೇಳಲಾಗುತ್ತದೆ. ಈ ಪದವು ಒಳ್ಳೆಯದು, ಶಕ್ತಿಶಾಲಿ, ಶಾಶ್ವತ ಎಂಬ ಅರ್ಥವನ್ನು ಕೊಡುತ್ತದೆ. ಇಂತಹ ಆತ್ಮವು ಮೂಲತಹ ಒಳ್ಳೆಯ ಗುಣಗಳಿಂದ ಕೊಡಿದೆ ಶಾಂತಿ,ಪವಿತ್ರತೆ, ಆನಂದ ಮೋದಲಾದ ದೈವಿ ಗುಣಗಳು ಆತ್ಮನಿಗೆ ಸಹಜವಾದದ್ದು. ಆತ್ಮ ಸ್ವರೂಪವನ್ನು ತಿಳಿದುಕೊಂಡು ನೆನಪು ಮಾಡಿದಾಗ ಆತ್ಮದ ಸಹಜ ಗುಣಗಳು  ಅನುಭವಕ್ಕೆ ಬರುವುದು. ಹೀಗೆ ಒಳ್ಳೇಯ ಗುಣಗಳು ಆತ್ಮ ಜ್ಞಾನದಿಂದ ಸಹಜವಾಗುತ್ತದೆ ಆಗ ಅದಕ್ಕೆ  ಸರಿಯಾಗಿ ಮನಸ್ಸಿನ ಆಲೋಜನೆ, ದೃಷ್ಠಿ, ಮಾತು, ಕರ್ಮ ಇತ್ಯಾದಿಗಳು ಇದಕ್ಕೆ ಅನುಗುಣವಾಗಿ ಇರುವುದು. ಮನುಷ ಆತ್ಮರಿಂದ ಒಳ್ಳೇಯ ಕರ್ಮಗಳೇ ಆದಾಗ ಅವನು ದುಃಖ, ಅಶಾಂತಿ ಮೊದಲಾದ ಬಂಧನಗಳಿಂದ ಮುಕ್ತನಾಗುತ್ತಾನೆ. ಕಾರಾಗೃಹದಲ್ಲಿರುವ ಬಂಧಿಗಳಲ್ಲಿ ಒಳ್ಳೇಯ ನಡವಳಿಕೆ, ಒಳ್ಳೇಯ ಪರಿವರ್ತನೆ ಆದಾಗ ಅವರ ಶಿಕ್ಷೆಯು ಕಡಿಮೆಯಾಗುತ್ತದೆ. 

ನಮ್ಮ ದೇಶದ ಅನೇಕ ಕಾರಾಗೃಹಗಳಲ್ಲಿ ಬ್ರಹ್ಮ ಕುಮಾರಿ ಸಹೋದರಿಯರು ರಾಜಯೋಗ ಶಿಕ್ಷಣದ ತರಬೇತಿಯನ್ನು ನೀಡಿ ಅನೇಕ ಕೈದಿಗಳ ಬಂಧನ ಮುಕ್ತಿಗೆ ಕಾರಣರಾಗಿದ್ದಾರೆ. ಮೈಸೂರಿನ ಕಾರಾಗೃಹದೊಳಗೆ ಒಂದು ರಾಜಯೋಗ ಶಿಕ್ಷಣ ಕೇಂದ್ರವನ್ನೆ ನಿಮರ್ಿಸಿದ್ದಾರೆ. ಅಲ್ಲಿ ಕೈದಿಗಳು ಪ್ರತಿನಿತ್ಯ ಈ ಆಧ್ಯಾತ್ಮ ಜ್ಞಾನದ ಶಿಕ್ಷಣವನ್ನು ಪಡೆದು ಯೋಗದ ಅಭ್ಯಾಸವನ್ನು ಮಾಡಿ ಬಂಧನ ಮುಕ್ತರಾಗಿದ್ದಾರೆ. ಎಂದು ಉದಾಹರಣೆ ಸಹಿತ ವಿವರಿಸುತ್ತಾ" ಡಾ.ಬಿ.ಕೆ.ವಾದಿರಾಜ ಭಟ್ಟ ಅಣ್ಣನವರು ಹೆಸರಾಂತ ದರೋಡೆಕೋರ ಪಂಚಮಸಿಂಗ್ ರಾಜಯೋಗ ಅಭ್ಯಾಸದಿಂದ ಪರಿವರ್ತನೆಯಾದ, ತನ್ನ ಮಗಳನ್ನೇ ಬ್ರಹ್ಮಕುಮಾರಿಯನ್ನಾಗಿ ಮಾಡಿ ತನ್ನ ಮನೆಯನ್ನೇ ರಾಜಯೋಗದ ಕೇಂದ್ರವನ್ನಾಗಿ ಮಾಡಿ ಸೇವೆ ಮಾಡುತ್ತೀರುವ ಘಟನೆಯನ್ನು ಉಲ್ಲೇಖಿಸಿದರು. 

ಕಾರಾ ಅಧಿಕ್ಷಕರು ಕೈದಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಪರಿವರ್ತನೆಯಾಗಲು ಈಗ ತಾನೇ ವಿವರಿಸಿದ ವಿಚಾರಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು ಬ್ರಹ್ಮ ಕುಮಾರಿ ಜ್ಯೋತಿ ಅಕ್ಕನವರು ಪ್ರಾರ್ಥನ ಗೀತೆ ಹಾಡಿದರು ಅದನ್ನು ಕೈದಿಗಳು ಪುನರಾವತರ್ಿಸಿದರು. ಬಿ.ಕೆ.ಸಾವಿತ್ರಿ ಅಕ್ಕನವರು ವಂದನಾರ್ಪಣೆ ಮಾಡಿದರು.