ಈಶ್ವರ ಭೂತೆ ಅಭಿಮತ; ಚಿಣ್ಣರ ಚಿಲಿಪಿಲಿ ಮಕ್ಕಳ ಕಲರವ
ಮಕ್ಕಳ ರಕ್ಷಣೆ, ಪೋಷಣೆ ಪವಿತ್ರ ಕಾರ್ಯ
ಧಾರವಾಡ 23 : ಮಕ್ಕಳನ್ನು ಪವಿತ್ರಭಾವನೆಯಿಂದ ಪೋಷಿಸುವ, ಬೆಳೆಸುವ ಕಾರ್ಯ ಮಹತ್ವದ್ದು, ಬಾಲಮಂದಿರ, ತೆರೆದ ತಂಗುದಾಣ ಮತ್ತು ವೀಕ್ಷಣಾಲಯದ ಮಕ್ಕಳ ಆರೈಕೆ ಪುಣ್ಯದ ಕೆಲಸವಾಗಿದೆ. ಅವರ ಭವಿಷ್ಯ ರೂಪಿಸಲು ಸಕರ್ಾರ ಮತ್ತು ಸಕರ್ಾರೇತರ ಸಂಸ್ಥೆಗಳು ಶ್ರಮಿಸಬೇಕು ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಈಶಪ್ಪ ಭೂತೆ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ 2019-20 ನೇ ಸಾಲಿನ ಮಕ್ಕಳ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಚಿಣ್ಣರ ಚಿಲಿಪಿಲಿ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.
ನಮ್ಮ ಮನೆಯ ಮಕ್ಕಳಿಗೆ ನೀಡುವ ಪ್ರೀತಿಯನ್ನೇ ಬಾಲಮಂದಿರದ ಮಕ್ಕಳಿಗೂ ನೀಡುವುದು ಮುಖ್ಯವಾಗಿದೆ. ಹೆತ್ತವರು ಮಾಡಿದ ತಪ್ಪಿಗೆ ಎಳೆಯ ಮಕ್ಕಳು ಶಿಕ್ಷೆ ಅನುಭವಿಸುವಂತಾಗಬಾರದು. ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಅವರ ಭವಿಷ್ಯ ಉಜ್ವಲಗೊಳಿಸಬೇಕು ಎಂದರು.
ಕನರ್ಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಅಶೋಕ ಯರಗಟ್ಟಿ ಮಾತನಾಡಿ, ಸಕರ್ಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣ ಘಟಕ ನಿರಂತರವಾಗಿ ಮಕ್ಕಳ ಏಳ್ಗೆಗೆ ಶ್ರಮಿಸುತ್ತಾ ಪ್ರತಿದಿನ ಮಕ್ಕಳ ದಿನಾಚರಣೆ ಆಚರಿಸುತ್ತಿವೆ. ಈ ಕಾರ್ಯದಲ್ಲಿ ಆಯೋಗವೂ ಕೂಡ ಜವಾಬ್ದಾರಿ ನಿರ್ವಹಿಸುತ್ತಿದೆ ಎಂದರು.
ಹಿರಿಯ ಸಾಹಿತಿ, ಬಾಲ ವಿಕಾಸ ಅಕಾಡೆಮಿ ಮಾಜಿ ಅಧ್ಯಕ್ಷ ಶಂಕರ ಹಲಗತ್ತಿ ಮಾತನಾಡಿ,ಮಕ್ಕಳು ದೇಶದ ಸಂಪತ್ತು, ಗೌರವ, ಶಕ್ತಿಯಾಗಿದ್ದಾರೆ.ಪೋಷಣೆಯ ಅಗತ್ಯವಿರುವ ಮಕ್ಕಳಿಗೆ ಬಾಲಮಂದಿರದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಬಾಲಮಂದಿರದಲ್ಲಿ ಇರುವ ಮಕ್ಕಳು ದೇವರಿಗೆ ಸಮಾನ, ಅವರಲ್ಲಿರುವ ಪ್ರತಿಭೆಯನ್ನು ಸಾಮಾನ್ಯ ಮಕ್ಕಳ ಜೊತೆಗೆ ಒರೆಗೆ ಹಚ್ಚಿ ಬಾಲ ಮಂದಿರದ ಮಕ್ಕಳ ಆತ್ಮಸ್ಥೈರ್ಯ ಹೆಚ್ಚಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಬಾಲಮಂದಿರದ ಮಕ್ಕಳು ಉತ್ತಮ ವಿದ್ಯಾಭ್ಯಾಸ ಮಾಡಿ ವೇದಿಕೆಯಲ್ಲಿ ಇರುವ ಗಣ್ಯರ ಹಾಗೆ ಐಎಎಸ್, ಐಪಿಎಸ್ ಅಧಿಕಾರಿಗಳು, ನ್ಯಾಯಾಧೀಶರು, ಸಾಮಾಜಿಕ ಚಿಂತಕರು, ಹೋರಾಟಗಾರರಾಗಿ ರೂಪುಗೊಂಡು ಸಮಾಜಕ್ಕೆ ಆಸ್ತಿಯಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಉತ್ತಮ ಅಂಕಗಳಿಸಿದ ಬಾಲಮಂದಿರದ ಮಕ್ಕಳಿಗೆ ಬಹುಮಾನ ನೀಡಿ, ಗೌರವಿಸಲಾಯಿತು.
ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಆರ್.ಎಸ್. ಚಿಣ್ಣನ್ನವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವತರ್ಿಕಾ ಕಟಿಯಾರ್, ಜೆಎಂಎಫ್ಸಿ 4 ನೇ ಹೆಚ್ಚುವರಿ ದಿವಾಣಿ ನ್ಯಾಯಾಧೀಶ ನಿತಿನ್ ಯಶವಂತರಾವ್, ಡಿವೈಎಸ್ಪಿ ರವಿ ನಾಯಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿದರ್ೇಶಕ ಶ್ರೀಕಾಂತ್ ಕುಲಕಣರ್ಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ, ಜಿಲ್ಲಾ ವಾತರ್ಾಧಿಕಾರಿ ಮಂಜುನಾಥ ಡೊಳ್ಳಿನ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನ್ನಪೂರ್ಣ ಸಂಗಳದ ಮತ್ತಿತರರು ವೇದಿಕೆಯಲ್ಲಿ ಇದ್ದರು.
ಶ್ವೇತಾ ಕಿಲ್ಲೇದಾರ, ಮಹ್ಮದ ಅಲಿ ತಹಸೀಲ್ದಾರ ಕಾರ್ಯಕ್ರಮ ನಿರೂಪಿಸಿದರು. ಅಶ್ವಿನಿ ಮೊರಬ ವಂದಿಸಿದರು.
ಮನಸೆಳೆದ ಮಕ್ಕಳ ವೇಷಭೂಷಣ;
ಶಿಶುಗೃಹ, ಬಾಲಮಂದಿರ, ತೆರೆದ ತಂಗುದಾಣ, ವೀಕ್ಷಣಾಲಯದ ಮಕ್ಕಳು ಪತಂಗ, ಶಿವತಾಂಡವ, ಕೃಷ್ಣ ರುಕ್ಮಿಣಿ, ರೈತ, ಆಂಜನೇಯ, ಶಾಕುಂತಲೆ-ದುಶ್ಯಂತ ಮುಂತಾದ ಆಕರ್ಷಕ ವೇಷಭೂಷಣ ಧರಿಸಿದ್ದ ಎಳೆಯ ಪುಟಾಣಿಗಳು ಗಣ್ಯರ ಮುಂದೆ ನಿರ್ಭಯವಾಗಿ ವೇದಿಕೆಯೇರಿ ಪ್ರದರ್ಶನ ನೀಡಿ ಗಮನಸೆಳೆದರು. ಗಣ್ಯರು ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಸಿಹಿ ಹಂಚಿದ್ದು ವಿಶೇಷವಾಗಿತ್ತು. ಘಂಟಿಕೇರಿಯ ಸಕರ್ಾರಿ ಬಾಲಕರ ಬಾಲಮಂದಿರ, ಉಣಕಲ್ ಸಕರ್ಾರಿ ಬಾಲಮಂದಿರ, ಸಕರ್ಾರಿ ಮನೋವಿಕಲ ಬಾಲಕಿಯರ ಬಾಲಮಂದಿರ, ನವನಗರದ ಸ್ನೇಹಾ ತೆರೆದ ತಂಗುದಾಣ, ಧಾರವಾಡದ ದರ್ಶನ ತೆರೆದ ತಂಗುದಾಣದ ನೂರಾರು ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಆಕರ್ಷಕ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.