ಉಚಿತ ಹಾಲು ವಿತರಣೆ ಭಾಗ್ಯ ನಗರ ಪ್ರದೇಶಕ್ಕೆ ಮಾತ್ರ ಸೀಮಿತವೇ?

ಶಶಿಧರ ಶಿರಸಂಗಿ

ಶಿರಹಟ್ಟಿ 10: ಕೆಎಂಎಫ್ ನಿತ್ಯ ಸಂಗ್ರಹಿಸುವ ಹಾಲಿನಲ್ಲಿ ಮಾರಾಟವಾಗದೆ ಉಳಿಯುವ ಹೆಚ್ಚುವರಿ 7.5 ಲಕ್ಷ ಲೀಟರ್ ಹಾಲನ್ನು ರಾಜ್ಯ ಸರಕಾರವೇ ಖರೀದಿಸಿ ಬಡವರಿಗೆ ಉಚಿತವಾಗಿ ಪೂರೈಸುತ್ತಿದೆ. 

ರಾಜ್ಯದಲ್ಲಿ ನಿತ್ಯ 49.50 ಲಕ್ಷ ಲೀಟರ್ ಹಾಲನ್ನು ಕೆಎಂಎಫ್ ಮೂಲಕ ಮಾರಾಟ ಮಾಡಲಾಗುತ್ತದೆ. ಆದರೆ 42 ಲಕ್ಷ ಲೀಟರ್ ಮಾತ್ರ ಮಾರಾಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಉಳಿಯುವ 7.5 ಲಕ್ಷ ಲೀಟರ್ ಹಾಲನ್ನು ಸರಕಾರವೇ ಖರೀದಿ ಮಾಡಿ ಪಟ್ಟಣ ಪ್ರದೇಶಗಳಲ್ಲಿ ವಾಸಿಸುವ ಬಡವರಿಗೆ, ಕಾಲೊನಿಗಳು, ಕೊಳೆಗೇರಿ ನಿವಾಸಿಗಳಿಗೆ ಅರ್ಧ ಹಾಗೂ ಒಂದು ಲೀಟರ್ನಂತೆ ಉಚಿತವಾಗಿ ಹಂಚಲಾಗುತ್ತಿದೆ.

ಆದರೆ ಸದ್ಯಕ್ಕೆ ಸರ್ಕಾರ ಪಟ್ಟಣ ಪ್ರದೇಶದಲ್ಲಿ ವಾಶಿಸುವ ಜನರಿಗೆ ಮಾತ್ರ ಉಚಿತ ಹಾಲು ವಿತರಣೆ ಮಾಡುತ್ತಿದ್ದು, ಈ ಯೋಜನೆಯು ಗ್ರಾಮ ಪಂಚಾಯಿತಿ ಮಟ್ಟದ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರಿಗೆ ಏಕಿಲ್ಲ ಎಂಬುದು ಮಾತ್ರ ಪ್ರಶ್ನೆಯಾಗಿ ಉಳಿದಿದೆ. 

ಸರ್ಕಾರ ಪೂರೈಸುವ ಹಾಲು ಅರ್ಹ ಬಡ ಕುಟುಂಬದ ಫಲಾನುಭವಿಗಳಿಗೆ ತಲುಪಬೇಕು. ವಲಸೆ ಕಾರ್ಮಿಕರಿಗೆ ಅಲೆಮಾರಿ ಕಾರ್ಮಿಕರಿಗೆ, ಅಸಂಘಟಿತ ಕಾರ್ಮಿಕರಿಗೆ ಹಾಗೂ ಗ್ರಾಮೀಣ ಮಟ್ಟದಲ್ಲಿ ವಾಶಿಸುವರಿಗೆ 2 ತಿಂಗಳ ಅವಶ್ಯಕ ಪಡಿತರ ಆಹಾರ ಧಾನ್ಯಗಳನ್ನು ಪೂರೈಸುವ ರೀತಿಯಲ್ಲಿ ಹಾಲನ್ನೂ ಸಹ ಪ್ರತಿನಿತ್ಯ ಪೋರೈಸುವ ಯೋಜನೆ ಜಾರಿಯಾಗಬೇಕು.