ಆಧುನಿಕ ವಚನಗಳ ಸ್ಪರ್ಧೆಗೆ ವಚನಗಳ ಆಹ್ವಾನ
ಕೊಪ್ಪಳ 23: ಅಖಿಲ ಭಾರತ ವಚನ ಸಾಹಿತ್ಯ ಪರಿಷತ್ತು ತಾಲೂಕ ಮತ್ತು ಜಿಲ್ಲಾ ಘಟಕ ಕೊಪ್ಪಳ ದಿಂದ ಆಧುನಿಕ ವಚನಗಳ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಕೊಪ್ಪಳ ಜಿಲ್ಲೆಯ ಕವಿಗಳು, ಬರಹಗಾರರು, ಚಿಂತಕರು, ಮತ್ತು ಆಧುನಿಕ ವಚನ ರಚನೆಕಾರರು. ತಮ್ಮ ಸ್ವರಚಿತ ಮೂರು ಆಧುನಿಕ ವಚನಗಳನ್ನು ಕಳಿಸಲು ಈ ಮೂಲಕ ಕೋರಲಾಗಿದೆ.
ಆಧುನಿಕ ವಚನ ಸ್ಪರ್ಧೆಯಲ್ಲಿ ತೀರ್ುಗಾರರಿಂದ ಆಯ್ಕೆಯಾದ ಆಧುನಿಕ ವಚನಗಳಿಗೆ ಪ್ರಥಮ, ದ್ವಿತೀಯ, ತೃತೀಯ, ಬಹುಮಾನ ಮತ್ತು ಪ್ರಮಾಣ ಪತ್ರ ಕೊಡಲಾಗುವುದು. ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಚನಕಾರರಿಗೂ ಪ್ರಮಾಣ ಪತ್ರವನ್ನು ವಚನ ಸಾಹಿತ್ಯ ಪರಿಷತ್ತಿನ ತಾಲೂಕ ಮತ್ತು ಜಿಲ್ಲಾ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೊಡಲಾಗುವುದು.
ಸ್ಪರ್ಧೆಯಲ್ಲಿ ಭಾಗವಹಿಸುವ ಕವಿಗಳು ತಮ್ಮ ಸ್ವರಚಿತ ಮೂರು ಆಧುನಿಕ ವಚನಗಳನ್ನು ಮತ್ತು ತಮ್ಮ ಭಾವಚಿತ್ರ, ವಿಳಾಸ ಹಾಗೂ ಮೊಬೈಲ್ ಸಂಖ್ಯೆಯೊಂದಿಗೆ ಜನೇವರಿ 04ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ಕಳಿಸಿಕೊಡಲು ವಿನಂತಿಸಲಾಗಿದೆ.
ಜಿ.ಎಸ್. ಗೋನಾಳ್, ಅಧ್ಯಕ್ಷರು, ಅಖಿಲ ಭಾರತ ವಚನ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ. ಶ್ರೀ ಬಸವ ಸದನ ಪದಕಿ ಕಾಲೋನಿ. 21ನೇ ವಾರ್ಡ್ ಶಾರದಾ ಸ್ಕೂಲ್ ಹತ್ತಿರ, 6ನೇ ಕ್ರಾಸ್, ಕೊಪ್ಪಳ. ಅಥವಾ ಡಾ. ಶಿವಬಸಪ್ಪ ಮಸ್ಕಿ, ಪ್ರಧಾನ ಕಾರ್ಯದರ್ಶಿ,
ಅಖಿಲ ಭಾರತ ವಚನ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ. ಬಿ.ಟಿ.ಪಾಟೀಲ ನಗರ, 2ನೇ ಕ್ರಾಸ್, ಗಣೇಶ ದೇವಸ್ಥಾನದ ಹತ್ತಿರ, ಕೊಪ್ಪಳ. ಇಲ್ಲಿಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9448025067, 9449916156.