ಶಿರೂರ ಗ್ರಾ.ಪಂ.ನಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ: ಆನ್-ಲೈನ್ ಕೆಲಸಗಳಿಗೆ ವ್ಯತ್ಯಯ

ಸಂಬರಗಿ 16: ಆಧುನಿಕ ತಂತ್ರಜ್ಞಾನದಿಂದ ಎಲ್ಲಾ ಕಡೆ ಇಂಟರ್ನೆಟ್ ಮುಖಾಂತರ ಕೆಲಸ ನಡೆಯುತ್ತಿವೆ. ಅಥಣಿ ತಾಲೂಕಿನ ಎಲ್ಲಾ ಗ್ರಾ.ಪಂ. ಗಳಲ್ಲಿ ಸಕರ್ಾರಿ ಕೆಲಸವನ್ನು ಆನ್-ಲೈನ್ ಮುಖಾಂತರ ಪ್ರಾರಂಭಿಸಲಾಗಿದೆ. ಆದರೆ ಗಡಿ ಭಾಗದ ಗ್ರಾಮದ ಕೆಲವು ಗ್ರಾ.ಪಂ.ಗಳಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಂಡಿದೆ. ಸದ್ಯದಲ್ಲಿ ಸಕರ್ಾರಿ ಕೆಲಸಗಳನ್ನು ಆನ್-ಲೈನ್ ಮೂಲಕ ಮಾಡಲು ವ್ಯತ್ಯಯವಾಗುತ್ತಿದೆ. ಅಥಣಿ ಪಟ್ಟಣಕ್ಕೆ ಹೋಗಿ ಆನ್-ಲೈನ್ ಮಾಡುವ ಪರಿಸ್ಥಿತಿ ಎದುರಿಸಬೇಕಾಗುತ್ತ್ತಿದೆ. ಗಡಿ ಭಾಗದ ಕೆಲ ಪಂಚಾಯತಗಳಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಂಡ ಪರಿಣಾಮ ಈ ಸೇವೆ ಆನ್-ಲೈನ್ ಹೋಗಿ ಆಫ್-ಲೈನ್ ಆಗಿದೆ.

ಗಡಿ ಭಾಗದಲ್ಲಿರುವ ಗ್ರಾ.ಪಂ.ಗಳಲ್ಲಿ ಎಲ್ಲಾ ಕೆಲಸವನ್ನು ಆನ್-ಲೈನ್ ಹಾಕಬೇಕಾಗುತ್ತದೆ. ಅದರಲ್ಲಿ ಉದ್ಯೋಗ ಖಾತ್ರಿ ಕೆಲಸಗಾರರ ಹಾಜರಾತಿ ಶೌಚಾಲಯ ಕಟ್ಟಡ, ಬಸವವಸತಿ ಯೋಜನೆಯ ಮನೆಗಳ ಬಿಲ್ಲು ಸೇರಿದಂತೆ ಹಲವರು ಮಾಹಿತಿಗಳನ್ನು ಆನ್-ಲೈನ್ ಮುಖಾಂತರ ಮಾಹಿತಿಯನ್ನು ಸಂಬಂಧಪಟ್ಟ ಇಲಾಖೆಗಳಿಗೆ ತಲುಪಿಸಬೇಕಾಗುತ್ತದೆ. ಗಡಿಭಾಗದ ಜಂಬಗಿ, ಸಂಬರಗಿ, ಶಿರೂರ, ಖಿಳೇಗಾಂವ, ಅನಂತಪೂರ, ಮಲಾಬಾದ, ಬಳ್ಳಿಗೇರಿ, ಜಕ್ಕಾರಟ್ಟಿ ಸೇರಿದಂತೆ ಈ ಭಾಗದ ಹಲವಾರು  ಗ್ರಾ.ಪಂ.ಗಳಿಗೆ ಬಿ.ಎಸ್.ಎನ್.ಎಲ್ ನಿಂದ ಇಂಟರ್ನೆಟ್ ಸೇವೆ ಪ್ರಾರಂಭಿಸಿದ್ದಾರೆ. ಆದರೆ ಈ ಭಾಗದ ಯಾವುದೇ ಪಂಚಾಯತಿಗೆ ಸರಿಯಾಗಿ ನೆಟವಕರ್್ ಬರುತ್ತಿಲ್ಲ. ಕೆಲ ಪಂಚಾಯತಿಗಳಲ್ಲಿ ಸೇವೆಯು ಸ್ಥಗಿತಗೊಂಡಿದೆ. ಸದ್ಯದಲ್ಲಿ ಇಂಟರ್ನೆಟ್ ಸೇವೆ ಇದ್ದೂ ಇಲ್ಲದಂತಾಗಿದೆ. ಕಳೆದ 5 ವರ್ಷಗಳಿಂದ ಇಂಟರ್ನೆಟ್ ಸೇವೆಯನ್ನು ಗ್ರಾಮೀಣ ಪ್ರದೇಶಗಳಿಗೆ ಒದಗಿಸಿದ್ದಾರೆ. ಸರಿಯಾಗಿ ಇಲ್ಲದ ಕಾರಣ ಸಮಸ್ಯೆ ಹೆಚ್ಚಾಗುತ್ತಿದೆ.

ಸದ್ಯದಲ್ಲಿ ಲೋಕಸಭಾ ಚುನಾವಣೆ ಘೋಷಣೆ ಆಗಿದೆ. ಚುನಾವಣಾ ಆಯೋಗ ಕ್ಷಣ ಕ್ಷಣ ಮಾಹಿತಿಯನ್ನು ಆನ್-ಲೈನ್ ಮೂಲಕ ಗ್ರಾ.ಪಂ.ಗಳಿಗೆ ಕೇಳುತ್ತಾರೆ. ಕೆಲ ಗ್ರಾ.ಪಂ.ಗಳು ನೆಟ್ವಕರ್್ ಎಲ್ಲಿ ಬರುತ್ತದೆ ಅಲ್ಲಿ ಸ್ವಂತ ಮೋಬೈಲ ಮುಖಾಂತರ ನೆಟ್ವಕರ್್ ಪಡೆಯಬೇಕಾಗಿದೆ. ಸದ್ಯದಲ್ಲಿ ಸಮಸ್ಯೆ ಹೆಚ್ಚಾಗುತ್ತಿದ್ದು, ಅಲ್ಲಿನ ಅಧಿಕಾರಿಗಳು ಆನ್-ಲೈನ್ ಮಾಡಲು ಅಥಣಿಗೆ ಹೋಗಬೇಕಾಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನಹರಿಸಿ ಗ್ರಾ.ಪಂ.ಗಳು ಹಾಗೂ ಗ್ರಾಮದಲ್ಲಿ ಇಂಟರ್ನೆಟ್ ಸೌಲಭ್ಯವನ್ನು ಸರಿಯಾಗಿ ಕಲ್ಪಿಸಬೇಕೆಂದು ಗಡಿ ಭಾಗದ ಜನರು ಆಗ್ರಹಿಸಿದ್ದಾರೆ.

ಈ ಕುರಿತು ಶಿರೂರ ಗ್ರಾ.ಪಂ. ಅಧ್ಯಕ್ಷೆ ಗೋಕುಳಾ ಶ್ರೀಮಂತ ಕಾರಕೆ ಇವರನ್ನು ಸಂಪಕರ್ಿಸಿದಾಗ ನಮ್ಮ ಗಾಮ ಪಂಚಾಯತಿಯ ಇಂಟರ್ನೆಟ್ ಸೇವಾ ಸ್ಥಗಿತಗೊಂಡಿರುವ ಬಗ್ಗೆ ಮಾಹಿತಿಯನ್ನು ಈಗಾಗಲೆ ನಾವು ಇಲಾಖೆಗೆ ತಿಳಿಸಿದ್ದೇವೆ. ಇನ್ನೂವರೆಗೆ ಬಂದು ಸೇವೆಯನ್ನು ಪ್ರಾರಂಭಿಸಿಲ್ಲ. ಆಕಾರಣ ಸಮಸ್ಯೆಯಾಗಿದೆ. ಸದರಿ ಇಲಾಖೆಯ ಅಧಿಕಾರಿಗಳು ಬಂದು ಇಂಟರ್ನೆಟ್  ಸೌಲಭ್ಯ ಪ್ರಾರಂಭಿಸಬೇಕೆಂದು ಅವರು ಆಗ್ರಹಿಸಿದರು. 

ಈ ಕುರಿತು ಬಿಎಸ್.ಎನ್.ಎಲ್ ಅಧಿಕಾರಿಗಳಾದ ಸುನೀಲ ಬಾಗೇವಾಡಿ ಇವರನ್ನು ಸಂಪಕರ್ಿಸಿದಾಗ ಕೆಲ ಗ್ರಾ.ಪಂ.ಗಳು ಬಾಕಿ ಹಣವನ್ನು ಪಾವತಿಸಿಲ್ಲ. ಯಾವ ಗ್ರಾ.ಪಂ. ಹಣವನ್ನು ಪಾವತಿಸಿದ್ದಾರೆ ಅಲ್ಲಿ ಸೇವೆ ಸ್ಥಗಿತಗೊಂಡಿದ್ದರೆ ಆ ಕುರಿತು ನಮಗೆ ಮಾಹಿತಿ ನೀಡಿದರೆ ನಾವು ದುರಸ್ತಿ ಮಾಡಿ ಸೇವೆಯನ್ನು ಪುನರ್ಚಾಲನೆಗೊಳಿಸಲಾಗುವದೆಂದು ಅವರು ಹೇಳಿದರು.

ಪೋಟೋ ಶಿಷರ್ಿಕೆ: ಶಿರೂರ ಗ್ರಾ.ಪಂ.ನಲ್ಲಿ ಬಿ.ಎಸ್.ಎನ್.ಎಲ್ ನೆಟ್ವಕರ್್ ಇಲ್ಲದ ಕಾರಣ ಪಂಚಾಯತಿಯ ಬಾಗಿಲಿನ ಮೇಲೆ ಮೋಬೈಲ ಹಿಡಿದು ನಿಂತಿರುವ