ಅಂತರಾಷ್ಟ್ರೀಯ ಕುಸ್ತಿಪಟು: ಕಿರಣ್ಕುಮಾರ ಸನ್ಮಾನ

ಲೋಕದರ್ಶನವರದಿ

ರಾಣೇಬೆನ್ನೂರು26:  ಪ್ರತಿಭೆ ಎನ್ನುವುದು ದೇವರು ಕೊಟ್ಟ ವರ. ಅಂಥಹ ವರವನ್ನು ಸಮರ್ಥವಾಗಿ ಬಳಸಿಕೊಂಡು ಮುನ್ನಡೆದರೆ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ|| ಬಸವರಾಜ ಕೇಲಗಾರ ಹೇಳಿದರು.

    ತಾಲೂಕಿನ ತುಮ್ಮಿನಕಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಕಬಡ್ಡಿ ಹಾಗೂ ಕುಸ್ತಿ ಪಟು ಕಿರಣಕುಮಾರ ಉಪ್ಪಾರವರಿಗೆ ಸನ್ಮಾನಿಸಿ ಮಾತನಾಡಿದರು. ಎಷ್ಟೋ ಪ್ರತಿಭೆಗಳು ಬಡತನದ ಬೇಗೆಯಲ್ಲಿ ಕಮರಿ ಹೋಗುವುದೇ ಜಾಸ್ತಿ ಮಕ್ಕಳಲ್ಲಿನ ಪ್ರತಿಭೆಯನ್ನು ಪಾಲಕರಾದವರು ಮತ್ತು ಸಕರ್ಾರವು ಗುತರ್ಿಸಿ ಪ್ರೋತ್ಸಾಹಿಸುವಂತಾಗಬೇಕು ಎಂದರು.

   ಪ್ರತಿಭೆ ಎಂಬುದು ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ ಅಂತಹ ಪ್ರತಿಭೆಯನ್ನು ದೇಶದ ಅಭಿವೃದ್ಧಿಗೆ ವಿನಿಯೋಗಿಸಿಕೊಂಡು ಮುನ್ನಡೆದರೆ ದೇಶದ ಘನತೆ ವೃದ್ಧಿಸಿ ವೈಯಕ್ತಿಕವಾಗಿಯೂ ಕೀತರ್ಿ ಪಡೆದುಕೊಳ್ಳಲು ಮುಂದಾಗಬೇಕು ಎಂದರು.

    ಪ್ರತಿಭೆ ಬಡತನದಲ್ಲಿ ಹುಟ್ಟಿ ಶ್ರೀಮಂತಿಕೆಯಲ್ಲಿ ಸಾಯುತ್ತದೆ ಎಂಬ ಮಾತಿನಂತೆ ಅವಕಾಶ ಸಿಕ್ಕಾಗಲೇ ಚಿಂತನ-ಮಂಥನ ಮೂಲಕ ಪರರ ಕಲ್ಯಾಣಕ್ಕಾಗಿ ಮಿಡಿಯಬೇಕು ಆಗ ಮಾತ್ರ ಸಮಾಜದ ಋಣ ತೀರಿಸಲು ಸಾಧ್ಯವಾಗುವುದು ಎಂದರು.

         ಗ್ರಾ.ಪಂ ಅಧ್ಯಕ್ಷೆ ದೇವಿರಮ್ಮ ಗುಂಡೇರ, ಎಚ್.ಎಸ್.ನಂದಿಹಳ್ಳಿ, ಬೈಲಪ್ಪ ಶೆಹಪೂರ, ಪವನ ಮಲ್ಲಾಡದ, ಬಸವರಾಜ ಕೇಲಗಾರ, ಗದಿಗೆಪ್ಪ ಬುಡಮಣ್ಣನವರ, ರಮೇಶ ಪಾಟೀಲ, ಮಾರುತಿ ಬೆನಕನಕೊಂಡ, ನಾಗರಾಜ ದಾಸಪ್ಪನವರ, ದಿನೇಶ ಉಪ್ಪಾರ ಸೇರಿದಂತೆ ಮತ್ತಿತರ ಗಣ್ಯರು, ಗ್ರಾಮದ ನಾಗರೀಕರು ಉಪಸ್ಥಿತರಿದ್ದರು.