ವಿಶ್ವ ಮಹಿಳೆಯರ ಕಾರ್ಮಿಕರ ದಿನಾಚರಣೆ

ವಿಶ್ವ ಮಹಿಳೆಯರ ಕಾರ್ಮಿಕರ ದಿನಾಚರಣೆ  International Women's Workers' Day

ಲೋಕದರ್ಶನ ವರದಿ 

ಜಮಖಂಡಿ 04: ನಗರದಲ್ಲಿ ಎಐಯುಟಿಯುಸಿ ಸಂಘಟನೆ ಸಹಯೋಗದಲ್ಲಿ ವಿಶ್ವ ಮಹಿಳೆಯರ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಯಿತು. ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಮಾತನಾಡಿ, ಕಾರ್ಮಿಕರಿಗೆ ಜಾತಿ-ಮತ-ಪಂತ ಎಂದು ಬೇಧ-ಭಾವ ಇರುವುದಿಲ್ಲ. ಎಲ್ಲ ಕಾರ್ಮಿಕರು ಒಂದೇ ಕುಟುಂಬದಂತೆ ಕೆಲಸವನ್ನು ಮಾಡುತ್ತಾರೆ. ಕಾರ್ಮಿಕರಿಗೆ ಸೂಕ್ತ ಭದ್ರತೆಗಳು ಬೇಕಾಗಿರುತ್ತದೆ. ನಾಲ್ಕು ಲೇಬರ್ ಕೋಡ್‌ಗಳು ರದ್ದಾಗಲಿ. ದುಡಿಮೆಯ ಅವಧಿ 8 ಗಂಟೆಗೆ ಸೀಮಿತವಾಗಬೇಕು. ಜೀವನಯೋಗ್ಯ ಕನಿಷ್ಠ ವೇತನ ಜಾರಿಯಾಗಬೇಕಾಗಿದೆ ಎಂದರು.  ಅಂಜನಾ ಕುಂಬಾರ ಸ್ವಾಗತಿಸಿದರು. ಸುನೀತಾ ಜಂಬಗಿ ನಿರೂಪಿಸಿ. ಪ್ರಾಸ್ತಾವಿಕ ಮಾತನಾಡಿದರು. ಮಹಿಳೆಯರು ಇದ್ದರು.