ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಡಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

International Women's Day celebration under the District Kannada Sahitya Parishad

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಡಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ 

ಹುಬ್ಬಳ್ಳಿ, 16;  ಅವ್ವ ಸೇವಾ ಟ್ರಸ್ಟ ದತ್ತಿ ಕಾರ್ಯಕ್ರಮ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಡಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಅವರ 14ನೇ ಪುಣ್ಯಸ್ಮರಣೆ ಹಾಗೂ ಮಹಿಳಾ ದಿನಾಚರಣೆ ನಿಮಿತ್  ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಅವರ ಭಾವಚಿತ್ರಕ್ಕೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ  ವತಿಯಿಂದ ಪುಷ​‍್ಾರೆ್ಪಣ ಮಾಡಿ ಶ್ರದ್ಧಾ ಭಕ್ತಿಯಿಂದ ನಮನಗಳನ್ನು ಸಲ್ಲಿಸಿದರು. ಅವರ ಸೇವಾ ಕಾರ್ಯಗಳನ್ನು ಸ್ಮರಿಸಿದರು. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ವಸಂತ ಲದ್ವಾ, ಡಾ. ಎಚ್‌.ವಿ.ಬೆಳಗಲಿ, ಕಸಾಪದ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಹಿರಿಯರಾದ ಎಸ್‌.ಕೆ.ಆದಪ್ಪನವರ, ಚನ್ನಬಸಪ್ಪ ಧಾರವಾಡಶೆಟ್ಟರ, ಶಿಕ್ಷಕಿ ಶಕುಂತಲಾ ಧರಮಪ್ಪ ಹೊರಕೇರಿ (ಶಕುಂತಲಾ ಶಾಂತಪ್ಪ ಹೂಗಾರ), ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ,  ಪ್ರಾಚಾರ್ಯ ಡಾ. ಮಹೇಶ ಧರಮಪ್ಪ ಹೊರಕೇರಿ, ರತ್ನಮಾಲಾ ಬದ್ದಿ, ವಿದ್ಯಾ ಕಾಟವೆ, ಪ್ರಭಾವತಿ ಪೂಜಾರಿ, ಸಂಗೀತಾ ಮೆಣನಿ, ರತ್ನಮಾಲಾ ಇರಕಲ್, ರಾಜೇಶ್ವರಿ ಮೇತ್ರಾಣಿ, ವಿದ್ಯಾ ಜಿತೂರಿ, ಶೋಭಾ ಜಾಬಿನ, ಅನಸೂಯಾ ಪಾಟೀಲ, ಜಿಶಾನ್ ಶಿರಸಂಗಿ, ಮುಂತಾದವರು ಇದ್ದರು. ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ಸತತವಾಗಿ ಎಂಟನೇ ಬಾರಿ ವಿಜಯ ಸಾಧಿಸಿ ವಿಶ್ವ ದಾಖಲೆ ಮಾಡಿದ, ಶಿಕ್ಷಕರ ಹಿರಿಯ ನಾಯಕರು, ಮಾಜಿ ಸಚಿವರು, ಸೊಲಿಲ್ಲದ ಸರದಾರ, 44 ವರ್ಷ ವಿಧಾನ ಪರಿಷತ್‌ನ ಸದಸ್ಯರಾದ, ಅವ್ವ ಸೇವಾ ಟ್ರಸ್ಟನ ಅಧ್ಯಕ್ಷರು, ಕರ್ನಾಟಕ ಸರಕಾರ, ವಿಧಾನ ಪರಿಷತ್ತು, ಮಾನ್ಯ ಸಭಾಪತಿಗಳಾದ  ಶ್ರೀ ಬಸವರಾಜ ಎಸ್ ಹೊರಟ್ಟಿ ಅವರು ತಮ್ಮ ತಾಯಿಯವರ ಸ್ಮರಣಾರ್ಥ ಅವ್ವ ಸೇವಾ ಟ್ರಸ್ಟನ್ನು ಸ್ಥಾಪನೆ ಮಾಡಿ ಹಲವಾರು ವರ್ಷಗಳಿಂದ ಸಮಾಜ ಮುಖಿ ಕಾರ್ಯಗಳನ್ನು, ಸಮಾಜದಲ್ಲಿ ತಾಯಿಯ ಮಹತ್ವ ತಿಳಿಸುವ ಕಾರ್ಯ ಮಾಡುತ್ತಿರುವುದು ತುಂಭಾ ವಿಶೇಷ. ಶ್ಲಾಘನೀಯವಾದದ್ದು. ಸಮಾಜದಲ್ಲಿ ಅಮೋಘ ಸೇವೆ ಸಲ್ಲಿಸಿದ ಮಹಿಳೆಯರನ್ನು ಗುರುತಿಸಿ ಸನ್ಮಾನಿಸುವ ಕಾರ್ಯವನ್ನು ಅವ್ವ ಸೇವಾ ಟ್ರಸ್ಟ ನಿರಂತರವಾಗಿ ಮಾಡುತ್ತಾ ಸಾಗಿದೆ. ಈ ಕಾರ್ಯಗಳು ಹೀಗೆ ಸಾಗಲಿ ಎಂದು ಶುಭ ಹಾರೈಸೋಣ.