ಸಂಭ್ರಮದಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ
ಬೆಳಗಾವಿ 11: ಭಾರತ ವಿಕಾಸ ಪರಿಷತ್ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅಪೂರ್ವ ಸಂಭ್ರಮದಿಂದ ಜಿಜಿಸಿ ಸಭಾಂಗಣದಲ್ಲಿ ಆಚರಿಸಲಾಯಿತು. ಬೆಳಗಾವಿಯ ಮೂವರು ಸಾಧಕಿಯರಾದ ಡಾ. ಮಾಧುರಿ ಹೆಬ್ಬಾಳಕರ, ಶಿಕ್ಷಣ ಸಾಧಕ ಹಾಗೂ ನಾಟ್ಯಕಲಾವಿದೆ ಪ್ರಾ. ಪದ್ಮಾ ಕುಲಕರ್ಣಿ, ಪ್ರಾಚಾರ್ಯ್ ನೀಶಾ ರಾಜೇಂದ್ರನ್ ಅವರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆರಂಭದಲ್ಲಿ ಅಕ್ಷತಾ ಮೋರೆ ಅವರು ಸಂಪೂರ್ಣ ವಂದೇ ಮಾತರಂ ಪ್ರಸ್ತುತಪಡಿಸಿದರು. ಬಳಿಕ ಗಣ್ಯರು ಭಾರತಮಾತೆ ಹಾಗೂ ಸ್ವಾಮಿ ವಿವೇಕಾನಂದರ ಪ್ರತಿಮೆಗಳಿಗೆ ಪೂಜೆ ಸಲ್ಲಿಸಿ ದೀಪ ಬೆಳಗಿಸಿದರು. ಪರಿಷತ್ತಿನ ಅಧ್ಯಕ್ಷ ವಿನಾಯಕ ಮೋರೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಪಾಂಡುರಂಗ ನಾಯಕ ಭಾರತ ವಿಕಾಸ ಪರಿಷತ್ ನ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಪ್ರಾಂತ ಅಧ್ಯಕ್ಷೆ ಸ್ವಾತಿ ಘೋಡೇಕರ ಸನ್ಮಾನಿತರನ್ನು ಪರಿಚಯಿಸಿದರು. ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಡಾ. ಮಾಧುರಿ ಹೆಬ್ಬಾಳಕರ, ಪದ್ಮಾ ಕುಲಕರ್ಣಿ, ನೀಶಾ ರಾಜೇಂದ್ರನ್ ಕೃತಜ್ಞತೆ ಸಲ್ಲಿಸಿದ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ನಂತರ ಮಹಿಳೆಯರಿಗೆ ವಿಶೇಷ ಆಕರ್ಷಣೆ ಹೋಮ್ ಮಿನಿಸ್ಟರ್ ಆಟಗಳು ಜರುಗಿತು. ಮಹಿಳೆಯರೆಲ್ಲರೂ ಇದರಲ್ಲಿ ಸಂತಸದಿಂದ ಭಾಗ ವಹಿಸಿದರು. ವಿನಾಯಕ ಮೋರೆ ಇದು ಸ್ಪರ್ಧೆ ಸಂಯೋಜಿಸಿದರು. ಅಂತಿಮವಾಗಿ ಜ್ಯೋತ್ಸ್ನಾ ಗಿಲಬಿಲೆ ಸ್ಪರ್ಧೆಯಲ್ಲಿ ಗೆದ್ದು ಹೋಮ್ ಮಿನಿಸ್ಟರ್ ಗೌರವ ಪಡೆದರು. ಅತಿಥಿಗಳು ಅವರಿಗೆ ಸುಂದರವಾದ ಸೀರೆಯನ್ನು ಉಡಿಸಿ ಸನ್ಮಾನಿಸಿದರು. ಪ್ರೊ. ಅರುಣಾ ನಾಯಕ ನಿರೂಪಣೆ ಹಾಗೂ ಜಯಾ ನಾಯಕ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಉಷಾ ದೇಶಪಾಂಡೆ, ಉಮಾ ಯಲಬುರ್ಗಿ, ಶುಭಾಂಗಿ ಮಿರಾಶಿ, ಲಕ್ಷ್ಮೀ ತಿಗಡಿ, ಯೋಗಿತಾ ಹಿರೇಮಠ, ಪ್ರಿಯಾ ಪಾಟೀಲ್, ಸ್ಮಿತಾ ಭುಜಗುರವ, ತೃಪ್ತಿ ದೇಸಾಯಿ, ನಂದಿನಿ ಪಾಟೀಲ, ಕಾಂಚನ ಕಲಘಟಗಿ, ನಂದಿತಾ ಗಿಲಬಿಲೆ, ಅನಿತಾ ಹಿಡದುಗ್ಗಿ, ಶಾಲಿನಿ ನಾಯಕ, ಅಮಿತಾ ಕೇಕರೆ, ಪ್ರಾಚಾರ್ಯ ವಿ. ಎನ್. ಜೋಶಿ, ಎನ್. ಬಿ. ದೇಶಪಾಂಡೆ, ಡಾ. ವಿ. ಬಿ. ಯಲಬುರ್ಗಿ, ಡಾ. ಅರವಿಂದ ಕುಲಕರ್ಣಿ, ವಿನಾಯಕ ಘೋಡೇಕರ್, ಡಿ. ವೈ. ಪಾಟೀಲ, ಸುಭಾಷ ಮಿರಾಶಿ, ವಿಜಯೇಂದ್ರ ಗುಡಿ, ರಾಮಚಂದ್ರ ತಿಗಡಿ, ಜಯಂತ ಜೋಶಿ, ವಿನೋದ ದೇಶಪಾಂಡೆ, ಕಿಶೋರ ಕಾಕಡೆ, ಶುಭಕಾಂತ ಕಲಘಟಗಿ, ಸಚಿನ್ ಜವಳಿ, ಪಿ. ಜೆ. ಘಾಡಿ, ವಿಜಯ ಹಿಡದುಗ್ಗಿ ಮೊದಲಾದವರು ಉಪಸ್ಥಿತರಿದ್ದರು.