ಸ್ಟೇನಲೇಸ್ ಸ್ಟೀಲ್ ಬಳಕೆಯ ಕುರಿತು ಅಂತರಾಷ್ಟ್ರೀಯ ಮಟ್ಟದ ವಿಚಾರ ಸಂಕಿರ್ಣ ಕಾರ್ಯಕ್ರಮ
ಬೆಳಗಾವಿ 23: ವಾಸ್ತು ಶಿಲ್ಪ, ಕಟ್ಟಡ, ನಿರ್ಮಾಣ ಹಾಗೂ ನೀರಾವರಿ ಕಾಮಗಾರಿಗಳಲ್ಲಿ ಸ್ಟೇನಲೇಸ್ ಸ್ಟೀಲ್ ಬಳಕೆಯ ಕುರಿತು ಒಂದು ದಿನದ ಅಂತರಾಷ್ಟ್ರೀಯ ಮಟ್ಟದ ವಿಚಾರ ಸಂಕಿರ್ಣವನ್ನು ಐ.ಎಸ್.ಎಸ್.ಡಿ.ಏ, ಇವರು, ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆ ಹಾಗೂ ಇನ್ಸ್ಟಿಟ್ಯೂಷನ್ ಆಫ್ ಇಂಜನೀಯರ್ಸ ಲೋಕಲ್ ಸೆಂಟರ್ ಬೆಳಗಾವಿ. ಇವರ ಸಹಯೋಗದಲ್ಲಿ ದಿ.19-12-2024 ರಂದು ಹೋಟೆಲ್ ಪೇಯರ್ೀಲ್ಡ್ ಮ್ಯಾರಿಯಟ್ ನಲ್ಲಿ ಎರಿ್ಡಸಲಾಗಿತ್ತು.
ಸದರೀ ವಿಚಾರ ಸಂಕಿರ್ಣವನ್ನು ಮಾನ್ಯ ಸತೀಶ ಜಾರಕಿಹೊಳಿಯವರು, ಸಚಿವರಾದ ಲೋಕೋಪಯೋಗಿ ಇವರು ಉದ್ಘಾಟಿಸಿ, ತುಕ್ಕು ಹಿಡಿಯುವ ಪರಿಸರದಲ್ಲಿ ಸ್ಟೇನಲೇಸ್ ಸ್ಟೀಲ್ ಬಳಕೆ ಮಾಡಬೇಕೆಂದು ಅಭಿಪ್ರಾಯ ವ್ಯಕ್ತ ಪಡಿಸಿದರು. ಡಾ. ಎಸ್. ಸೆಲ್ವ್ಕುಮಾರ, ಪ್ರಧಾನ ಕಾರ್ಯದರ್ಶಿಗಳು, ಲೋಕೋಪಯೋಗಿ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ರಾಜಮನಿ ಕೃಷ್ಣಮೂರ್ತಿ, ಅಧ್ಯಕ್ಷರು ಐ.ಎಸ್.ಎಸ್.ಡಿ.ಏ, ಇವರು ಸ್ಟೇನಲೇಸ್ ಸ್ಟೀಲ್ ಬಳಕೆಯ ಬಗೆಗೆ ಮಾತನಾಡಿದರು, ಪ್ರಧಾನ ಕಾರ್ಯದರ್ಶಿಗಳು, ಸಲಹೆಗಳನ್ನು ಆಧರಿಸಿ, ಕಾಮಗಾರಿಗಳಲ್ಲಿ ಸ್ಟೇನಲೇಸ್ ಸ್ಟೀಲ್ ಬಳಸುವ ಕುರಿತು ಪರೀಶೀಲಿಸುವುದಾಗಿ ತಿಳಿಸಿದರು.
ನಿರ್ಮಾಣದ ವಿವಿಧ ಕ್ಷೇತ್ರಗಳಲ್ಲಿ, ಸ್ಟೇನಲೇಸ್ ಸ್ಟೀಲ್ ಬಳಕೆ ಕುರಿತು, ತಾಂತ್ರಿಕ ದೃಷ್ಟಿಕೋನಗಳ ಬಗೆಗೆ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿಗಳು ತಾಂತ್ರಿಕ ವಿವರಗಳನ್ನು ಪ್ರಸ್ತುತ ಪಡಿಸಿದರು. ಎಸ್. ಎಫ್. ಪಾಟೀಲ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಕೆ. ಶಿ. ಪ್. ಕರ್ನಾಟಕ ಸರ್ಕಾರ, ಅಧ್ಯಕ್ಷರಾದ ಎಸ್. ವಾಯ್, ಕುಂದರಗಿ, ಐ.ಇ.ಐ, ಪಿ.ಕೆ. ಸರಕಾರ, ತರುನ ಖುಲ್ಬೆ,.ಡಿ.ಕೆ. ಗೌರ, ಅಭಿಷೇಕ ಮದನ ಮುಂತಾದ ತಜ್ಞರು ವೇದಿಕೆಯಲ್ಲಿದ್ದರು. 200 ಜನ ಪ್ರತಿನಿಧಿಗಳು ಭಾಗವಹಿಸಿದ್ದರು.