ಅಂತರಾಷ್ಟ್ರೀಯ ಮಟ್ಟ ಟೆಕ್ನೋಕಲ್ಚರಲ್ ಫೆಸ್ಟ

ಲೋಕದರ್ಶನ ವರದಿ

ಬೆಳಗಾವಿ 09:  21ನೇ ಶತಮಾನದಲ್ಲಿ ಇಂಜೀನಿಯರಿಂಗ್ ಹಾಗೂ ಮೆನೆಜಮೆಂಟ್ ವಿದ್ಯಾಥರ್ಿಗಳಿಗೆ "ಓಡಿಸ್ಸೀ" 19 ಹಾಗೂ " ಅಧ್ಯಾಯ" 19 ಗಳ ಎರಡು ದಿನಗಳ ಅಂತರಾಷ್ಟ್ರೀಯ ಮಟ್ಟ ಟೆಕ್ನೋಕಲ್ಚರಲ್ ಫೆಸ್ಟ ಹಾಗೂ ಮೆನೆಜಮೆಂಟ್ ಫೆಸ್ಟಗಳು ಬೆಳಗಾವಿ ಜೈನ್ ಇಂಜಿನೀಯರಿಂಗ ಕಾಲೇಜಿನಲ್ಲಿ ಮಾರ್ಚ 8ರಂದು ಜರುಗಿದವು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಆರ್.ಎಂ.ಜಿ.ಟಿ.ಸಿ.ಎಸ್. ಗ್ಲೋಬಲ್ ಮುಖ್ಯಸ್ಥ ಇ.ಎಸ್ ಚಕ್ರವತರ್ಿ, ಸಮ್ಮೇಳನದಲ್ಲಿ ಭಾಗಿಯಾದವರನ್ನುದ್ದೇಶಿಸಿ ಮಾತನಾಡುತ್ತ, ವಿದ್ಯಾಥರ್ಿಗಳು ಜೀವನದಲ್ಲಿ  ನಾಲ್ಕು  ಮುಖ್ಯ  ಸಂಗತಿಗಳನ್ನು  ತಿಳಿದಿರಬೇಕೆಂದರು, ಶಿಕ್ಷಣದ ಉದ್ದೇಶ,  ಇಂಜಿನೀಯರಿಂಗ್ ಹಾಗೂ ಮೆನೆಜಿರಿಯರ್ ಶಿಕ್ಷಣದ ಮಹತ್ವ, ತಂತ್ರಜ್ಞಾನ ಹಾಗೂ ನಾವಿನ್ಯತೆ, 21ನೇ ಶತಮಾನದಲ್ಲಿನ ಅವಕಾಶಗಳು. ಶಿಕ್ಷಣ ವಿದ್ಯಾಥರ್ಿಗಳಲ್ಲಿ ಆತ್ಮ ವಿಶ್ವಾಸವನ್ನುಂಟುಮಾಡಿ, ಸಮಾಜಕ್ಕೆ ಕೊಡುಗೆ ನೀಡಲು ಕಾರ್ಯಶೀಲರನ್ನಾಗಿ ಮಾಡುತ್ತದೆ ಎಂದರು. ಮುಂಬರುವ ದಿನಗಳಲ್ಲಿ ನಮಗೆ ಬರಲಿರುವ ಅವಕಾಶಗಳು ಊಹಾತೀತವಗಿವೆ ಎಂದು ಅಭಿಪ್ರಾಯ ಪಟ್ಟರು.

ಬೆಂಗಳೂರಿನ ಟಿ.ಸಿ.ಎಸ್ ಅಕಾಡೆಮಿಕ್ ರಿಲೇಶನಶೀಪ್ದ ಮೇನೆಜರರಾದ ಶ್ರೀನಿವಾಸ ರಾಮಾನುಜ ಗೌರವ ಅತಿಥಿಗಳಾಗಿ ಆಗಮಿಸಿದ್ದರು. ಓಡಿಸ್ಸೀ ಹಾಗೂ ಅಧ್ಯಾಯಗಳಂತಹ ಸಂಗತಿಗಳು ವಿದ್ಯಾಥರ್ಿಗಳ ಸವರ್ಾಂಗೀಣ ವಿಕಾಸಕ್ಕೆ ಸಹಾಯಕವಾಗುತ್ತವೆ ಎಂದು ಅಭಿಪ್ರಾಯಪಟ್ಟರು. 

"ಓಡಿಸ್ಸೀ" 19 ಹಾಗೂ " ಅಧ್ಯಾಯ" 19 ಗಳು ಅಸಾಧಾರಣವಾದ, ಮನಮೋಹಕವಾದ ಸಾಂಸ್ಕೃತಿಕ ಪ್ರದರ್ಶನಗಳಾಗಿದ್ದು, ನಾವಿನ್ಯಪೂರ್ಣವಾದ ತಾಂತ್ರಿಕ ಹಾಗೂ ಮೆನೆಜಿರಿಯರ್ ವಿಷಯಗಳ ಪ್ರತಿಫಲನದಾಯನ ಮೋಹಕ ಪ್ರಸಂಗಗಳಾಗಿದ್ದು, ಮೋಜು ಹಾಗೂ ಭವ್ಯತೆಗಳಿಂದೊಡಗೂಡಿದ ಸಂದರ್ಭಗಳಾಗಿದ್ದವು. ಈ ಎರಡು ದಿನಗಳ ತಾಂತ್ರಿಕ ಹಾಗೂ ಮೆನೆಜಿರಿಯರ್ (ಎಂಬಿಎ) ತಾಂತ್ರಿಕತೆಯಲ್ಲದ ತಾಂತ್ರಿಕ ಅಂಶಗಳನ್ನೊಳಗೊಂಡಿದ್ದು, ಹಲವಾರು ಕಾಲೇಜುಗಳಿಂದ ಆಗಮಿಸಿದ ವಿದ್ಯಾಥರ್ಿಗಳ ಸೃಜನಾತ್ಮಕತೆಗೆ ಮಾರ್ಗದರ್ಶಕವಾಗಿದ್ದವು. 

ಓಡಿಸ್ಸೀ ಹಾಗೂ ಅಧ್ಯಾಯ ಸಂದರ್ಭಗಳ ಮೇಳದಲ್ಲಿ ಜೆ.ಜಿ.ಐ ದ ನಿದರ್ೇಶಕರ ಪ್ರೊ. ಆರ್.ಜಿ. ಧಾರವಾಡಕರ ಉಪಸ್ಥಿತರಿದ್ದರು. ಜೈನ ಸಮೂಹ ಸಂಸ್ಥೆಗಳ ಉತ್ತರ ಕನರ್ಾಟಕ ವಲಯದ ಚೇರಮನ್ ರಾಧೆಶ್ಯಾಂ ಹೇಡಾ ಈ ಸಮ್ಮೇಳನದಲ್ಲಿ ಭಾಗಿಯಾದ ವಿದ್ಯಾಥರ್ಿಗಳನ್ನು ಪ್ರೋತ್ಸಾಹಿಸಿ, ಇವರುಗಳು ಭಾಗವಹಿಸುವಿಕೆ ತುಂಬಾ ಫಲಕಾರಿ ಹಾಗೂ ಯಶಸ್ವಿಕಾರ್ಯ ಎಂದು ಹೇಳಿದರು.

ಪ್ರಾರಂಭೋತ್ಸವವು ಆಗಮಿಸಿದ ಎಲ್ಲ ಗೌರವಾನ್ವಿತ ಮಹನೀಯರು ದೀಪ ಬೆಳಗಿಸುವುದರ ಮೂಲಕ ಜರುಗಿತು. ಜೈನ್ ಇಂಜಿನೀಯರಿಂಗ್ ಕಾಲೇಜಿನ ಪ್ರಾಂಶುಪಾಲ ಹಾಗೂ ನಿದರ್ೇಶಕರಾಗಿರುವ ಡಾ. ಕೆ.ಜಿ. ವಿಶ್ವನಾಥ ಸಮ್ಮೇಳನದ  ಮುಖ್ಯ ಅತಿಥಿಗಳನ್ನು  ಸ್ವಾಗತಿಸಿದರು.

ಶಿಕ್ಷಣ ಹಾಗೂ ಉದ್ಯಮದಲ್ಲಿ ಸಾಕಷ್ಟು ಅಂತರವಿರುತ್ತದೆ. ಟೆಕ್ನೋಕಲ್ಚರಲ್ ಹಾಗೂ ಮೆನೆಜಮೆಂಟ್ ಸಂದರ್ಭಗಳನ್ನು ಆಯೋಜಿಸಿದ ಎಲ್ಲ ವಿದ್ಯಾಥರ್ಿಗಳನ್ನು ಸಿಬ್ಬಂದಿ ವರ್ಗವನ್ನು ಅಭಿನಂದಿಸಿದರು.

ಜೆ.ಸಿ.ಇ. ದ ಪ್ರಾಂಶುಪಾಲ ಹಾಗೂ ನಿದರ್ೇಶಕರಾದ ಡಾ.ಕೆ.ಜಿ. ವಿಶ್ವನಾಥ ಮಾತನಾಡುತ್ತಾ, ಇಂಥ ಸಂದರ್ಭದ ಮೇಳಗಳು ಭಾಗಿಯಾದವರಲ್ಲಿ ಹಾಗೂ ಪ್ರೇಕ್ಷಕರ ಮೇಲೆ ಬಹಳೇ ಪ್ರಭಾವ ಬೀರುತ್ತದೆ ಎಂದರು. "ಓಡಿಸ್ಸೀ" 19 ಹಾಗೂ "ಅಧ್ಯಾಯ 19" ವಿದ್ಯಾಥರ್ಿಗಳನ್ನು ಪ್ರೇರೆಪಿಸಿ ಅವರ ದೃಷ್ಟಿಕೋನವನ್ನು ಶ್ರೀಮಂತಗೊಳಿಸಿ ಸಂಪ್ರದಾಯದ ಬಾಗಿಲು ಮುಚ್ಚಿ ಜ್ಞಾನೋದಯದ ಕ್ಷಿತಿಜದತ್ತ ಸಾಗಿಸಿ, ಜ್ಞಾನ ಹಾಗೂ ನಾವಿನ್ಯತೆಯ ಬೀಡಿನಲ್ಲಿ ಒಯ್ಯುತ್ತದೆ ಎಂದರು. ವಿರಳವಾದ ತಾಂತ್ರಿಕತೆಯ ಮಹತ್ವವನ್ನು ತಿಳಿಪಡಿಸುವುದೇ ಈ ಸಂದರ್ಭ ಆಯೋಜಿಸಿದ ಮುಖ್ಯ ಉದ್ದೇಶವಾಗಿತ್ತು.

ಬೆಳಗಾವಿಯ ಜೈನ್ ಇಂಜಿನೀಯರಿಂದ ಕಾಲೇಜಿನ ಡೀನ್ ಪ್ರೊ. ಪ್ರವೀಣ ಚಿಟ್ಟಿ ವಂದನಾರ್ಪನೆ ಮಾಡಿದರು, ಬೆಂಗಳೂರಿನ ಜೆ,.ಜಿ. ಐ. ಡಾ. ಚೆನರಾಜ ರೋಯಚಂದ, ಈ ಮೆಗಾ ಸಂದರ್ಭ ಯಶಸ್ಸಿಗೆ ತನ್ನ ಶುಭಾಷಯ ಹೇಳಿದರು. ಪ್ರೊ. ಆರ್.ಜಿ ಧಾರವಾಡಕರ ಹಾಗೂ ಪ್ರೊ. ಉದಯಚಂದ್ರ ಜೆ.ಜಿ.ಐ ದ ನಿದರ್ೇಶಕರುಗಳ ಈ ಸಂದರ್ಭದ ಯಶಸ್ಸಿಗೆ ಅತಿಯಾದ ಬೆಂಬಲ ನೀಡಿದ್ದರು.