ಅಂತರರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ
ರಾಯಬಾಗ 23 : ಮಗು ತಾಯಿಯ ಗರ್ಭಾವಸ್ಥೆಯಿಂದ ಹಿಡಿದು ವ್ಯಕ್ತಿ ಸಾವಿನವರೆಗೂ ಕಾನೂನು ಅನ್ವಯವಾಗುತ್ತದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಜಗದೀಶ ಬಿಸೇರೊಟ್ಟಿ ಹೇಳಿದರು.ಶನಿವಾರ ರಾತ್ರಿ ರಾಯಬಾಗ ಗ್ರಾಮೀಣದ ಖೈರಕೊಡಿ (ಬಸವೇಶ್ವರನಗರ) ಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ರಾಷ್ಟ್ರೀಯ ಮಾನವ ಹಕ್ಕುಗಳ ತನಿಖಾ ಸಮಿತಿ ರಾಯಬಾಗ, ವಕೀಲರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ವ್ಯಕ್ತಿ ಕಾನೂನುಗಳ ಬಗ್ಗೆ ಅರಿತುಕೊಳ್ಳಬೇಕೆಂದರು.ಪ್ರಧಾನ ದಿವಾಣಿ ನ್ಯಾಯಾಧೀಶೆ ಪ್ರಿಯಾ ಭಟ್ಟಡ, ತಹಶೀಲ್ದಾರ ಸುರೇಶ ಮುಂಚೆ, ರಾಷ್ಟ್ರೀಯ ಮಾನವ ಹಕ್ಕುಗಳ ತನಿಖಾ ಸಮಿತಿ ಜಿಲ್ಲಾ ಕಾರ್ಯಾಧ್ಯಕ್ಷ ಸುಭಾಷ ನಾಯಿಕ, ತಾಲೂಕು ಅಧ್ಯಕ್ಷ ಬಾಹಾಸಾಹೇಬ ಖವಟಕೋಪ್ಪ, ಉಪಾಧ್ಯಕ್ಷ ಬಸವರಾಜ ಮಡಿವಾಳ, ವಕೀಲರ ಸಂಘದ ಅಧ್ಯಕ್ಷ ಪಿ.ಎಮ್.ದರೂರ, ಸಿಡಿಪಿಒ ಭಾರತಿ ಕಾಂಬಳೆ, ಎಪಿಪಿ ಹನುಮಂತ ಅಚಮಟ್ಟಿ, ಡಿ.ಎಚ್.ಯಲ್ಲಟ್ಟಿ, ಪಿ.ಎಸ್.ಕುರಬೆಟ್ಟ, ಅಜಿತ ಕುಡಚೆ, ಮಲ್ಲಿಕಾರ್ಜುನ ಜೇಡರ, ರಾಜು ಮಡಿವಾಳ, ಪ್ರಕಾಶ ಮಾಳಿ, ಹನುಮಂತ ಭಜಂತ್ರಿ, ಕೃಷ್ಣಾ ಪುಜಾರಿ, ಮಂಜುನಾಥ ವೇರಣೇಕರ, ದತ್ತಾ ಭಜಂತ್ರಿ, ರಾಜು ಕಾಂಬಳೆ, ಲಕ್ಷ್ಮಣ್ ಕೊರೆ, ಭೀಮಣ್ಣ ಜಾಗನೂರೆ, ಗೈಬಿಸಾಬ ನದಾಫ, ಅಬ್ದುಲ ಡಾಂಗೆ, ರಮೇಶ ಕುಂಬಾರ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ತನಿಖಾ ಸಮಿತಿ ಸದಸ್ಯರು, ರಾಯಬಾಗ ಗ್ರಾಮೀಣ ಗ್ರಾಮೀಣ.ಪಂ. ಅಧ್ಯಕ್ಷರು, ಸದಸ್ಯರು ಇದ್ದರು.ಫೋಟೊ: 23 ರಾಯಬಾಗ 2ಫೋಟೊ ಶೀರ್ಷಿಕೆ: ರಾಯಬಾಗ: ಗ್ರಾಮೀಣದ ಖೈರಕೊಡಿ (ಬಸವೇಶ್ವರನಗರ) ಯಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿರುವ ಹಿರಿಯ ದಿವಾಣಿ ನ್ಯಾಯಾಧೀಶ ಜಗದೀಶ ಬಿಸೇರೊಟ್ಟಿ.