ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಇಬ್ರಾಹಿಂ ಭವಿಷ್ಯ

ಲೋಕದರ್ಶನ ವರದಿ

ಕೊಪ್ಪಳ 03: ರಾಜ್ಯದಲ್ಲಿರುವ ಸದ್ಯದ ರಾಜಕೀಯ ಪರಿಸ್ಥಿತಿಯನ್ನು ನೋಡಿದರೆ ಮುಂಬರುವ ಒಂದೆ ವರ್ಷದಲ್ಲಿ ಮತ್ತೊಮ್ಮೆ ವಿಧಾನಸಭೆ ಸಾರ್ವತ್ರಿಕ ಚುನಾವಣೆಯನ್ನು ಎದುರಿಸುವ ಅನಿವಾರ್ಯತೆ ಬರಲಿದೆ ಎಂದು ಕೇಂದ್ರ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ತಿನ ಸದಸ್ಯ ಸಿ.ಎಂ.ಇಬ್ರಾಹಿಂ ಅವರು ಭವಿಷ್ಯ ನುಡಿದರು. 

ಅವರು ಶನಿವಾರದಂದು ಇಲ್ಲಿನ ಖಾಸಗಿ ಹೋಟೆಲ್ ಉದ್ಘಾಟನೆ ಹಾಗೂ ಶಾದಿ ಮಹಲ್ ಖಾಸಗಿ ಕಟ್ಟದ ಕಾಮಗಾರಿಗೆ ಶಂಕು ಸ್ಥಾಪನೆ ನೆರೆವೇರಿಸಿದ ಬಳಿಕ ಮಾಧ್ಯಮದೊಂದಿಗೆ ಅವರು ಮಾತನಾಡತ್ತಿದ್ದರು. 

ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಹೊಸ ಸಕರ್ಾರ ರಾಜ್ಯದಲ್ಲಿ ರಚನೆ ಯಾಗಿದೆ. ಆದರೆ ಇವರಿಗೂ ಪೂರ್ಣ ಪ್ರಮಾಣದ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಿಲ್ಲ. ಆದರೆ ಮುಖ್ಯಮಂತ್ರಿ ಒಬ್ಬರೆ ಸಕರ್ಾರ ನಡಿಸಲು ಹೇಗೆ ಸಾಧ್ಯ. ಇದನ್ನು ಗಮನಿಸಿದರೆ ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆ ನಡೆಯಬಹುದು ಎಂದರೆ.

ಸಕರ್ಾರ ರಚನೆ ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪಗೆ ಶುಭವಾಗಲಿ ಎಂದು ಹೇಳಿದ ಅವರು ಜನರಿಗೆ ಅವಶ್ಯವಿಲ್ಲದ ತೀಮರ್ಾರ ಕೈಗೊಳ್ಳಬಾರದು ಇನ್ನೂ ಸಚಿವ ಸಂಪುಟ ರಚನೆಯಾಗಿಲ್ಲ ಆದರೂ ಹಲವು ಪ್ರಕಾರ ಪ್ರಮುಖ ನಿರ್ಣಯಗಳನ್ನು ಕೈಗೊಂಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು ಕಾಂಗ್ರೆಸ್ ಜೆಡಿಎಸ್ ಬಿಟ್ಟು ಹೋದವರ ಅನುಮತಿಗಾಗಿ ಕಾಯುತ್ತಿದ್ದಾರೆ. ಅವರನ್ನು ಬಿಟ್ಟು ಉಳಿದ ಬಿಜೆಪಿಯವರನ್ನಾದರೂ ಮಂತ್ರಿ ಮಾಡಬಹುದಿತ್ತು. ಆದರೆ ಅತೃಪ್ತರನ್ನು ಸಂತೃಪ್ತ ಪಡಿಸಲು ಸಂಪುಟ ರಚನೆ ಮಾಡಿಲ್ಲ ಎಂದು ಟೀಕಿಸಿದರು. 

ರಾಜ್ಯಕ್ಕೆ ಈ ಸ್ಥಿತಿ ಇರಬಾರದಿತ್ತು ಇದು ದುದರ್ೈವ ಇನ್ನೂ ಅನರ್ಹರರ ಬಗ್ಗೆ ಯಾವುದೇ ತೀಮರ್ಾನ ಆಗಿಲ್ಲ ಜನರ ತೀಮರ್ಾನವೇ ಅಂತಿಮ ಅದಕ್ಕೆ ಕಾಯ್ದು ನೋಡಬೇಕಾಗಿದೆ ಅಷ್ಟೆ ಎಂದ ಅವರು ಯಡಿಯೂರಪ್ಪ ಅವರು ಸ್ವ ಇಚ್ಛೆಯಿಂದ ಈ ಕೆಲಸ ಮಾಡಿಲ್ಲ. ಬೇರೆಯವರು ಯಡಿಯೂರಪ್ಪ ಅವರಿಂದ ಈ ಕೆಲಸ ಮಾಡಿಸುತ್ತಿದ್ದಾರೆ. ಲಿಂಗಾಯತ ಬಸವ ಕುಲದಿಂದ ಬಂದವರು ಈ ಜಗದೀಶ್ ಶೆಟ್ಟರ ಜೊತೆ ಟಿಪ್ಪು ಜಯಂತಿ ಆಚರಣೆ ಮಾಡಿದ್ದಾರೆ. ಇಸ್ಲಾಂ ಧರ್ಮದಲ್ಲಿ ಜಯಂತಿ ಆಚರಣೆ ಇಲ್ಲ. ನಾನು ಹಿಂದಿನಿಂದಲೂ ವಿರೋಧಿಸಿದ್ದೆ ಜಯಂತಿಗೆ ಶೃಂಗೇರಿ ಪೀಠದ ಶ್ರೀಗಳನ್ನು ಕರೆಯಿಸಿ ಎಂದು ಹೇಳಿದ್ದೆ ಆ ಪೀಠ ಉಳಿಸಿದ್ದೇ ಟಿಪ್ಪು. ತಾಮ್ರ ಪತ್ರದಲ್ಲಿ ಇದರ ಉಲ್ಲೇಖ ಇದೆ. ರಾಜಕೀಯಕ್ಕಾಗಿ ಅಸ್ತ್ರ ಬಳಿಸಿದ್ದಾರೆ ಎಂದರು.

ಗೋ ಹತ್ಯ ಕಾನೂನು ತಂದಿದ್ದು ಸಂತೋಷ ಅದರಂತೆ ಬಿಜೆಪಿ ಅಧಿಕಾರದಲ್ಲಿರುವ ಇತರೆ ರಾಜ್ಯದಲ್ಲಿ ಈ ಕಾಯ್ದೆ ಯಾಕೆ ಇಲ್ಲ. ವಿದೇಶಕ್ಕೆ ರಫ್ತಾಗು ಗೋಗಳ ಸಾಗಾಣಿಕೆ ಶೇ. 36ರಷ್ಟು ಇದೆ. ಇಲ್ಲಿ ತಿಂದರೆ ತಪ್ಪು ದುಬೈನಲ್ಲಿ ತಿಂದರೆ ತಪ್ಪಲ್ವಾ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಬಿಜೆಪಿಗೆ ಬಹುಮತವಿಲ್ಲದೆ ಸಕರ್ಾರ ರಚಿಸಿದೆ ನಮ್ಮ ಮಕ್ಕಳನ್ನು ತಗೆದುಕೊಂಡು ಹೋಗಿದ್ದಾರೆ ವ್ಯಂಗ್ಯವಾಡಿದ ಅವರು ಕೇಂದ್ರದ ಸಕರ್ಾರದ ಆಥರ್ಿಕ ನೀತಿಯಿಂದ ವಾಣಿಜ್ಯೋದ್ಯಮಿಗಳು ದೇಶ ಬಿಡುತ್ತಿದ್ದಾರೆ.  ಕಾಫಿ ಡೇ ಮಾಲೀಕ ಸಿದ್ಧಾರ್ಥ ಸಾವಿಗೆ ಕೇಂದ್ರ ಸಕರ್ಾರದ ಆಥರ್ಿಕ ನೀತಿ ಕಾರಣ, ಇದಕ್ಕೆ ಅವರು ಬರೆದ ಪತ್ರ ಹೇಳುತ್ತಿದೆ. ದೇಶದ ಆಥರ್ಿಕ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಕೇಂದ್ರ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ತಿನ ಸದಸ್ಯ ಸಿ.ಎಂ.ಇಬ್ರಾಹಿಂ ತಿಳಿಸಿದರು.