ಅಂತರಕಾಲೇಜು ಯುವಜನೋತ್ಸವ: ಕೆಎಲ್‌ಎಸ್ ಆಯ್‌ಎಮ್‌ಇಆರ್ ವಿದ್ಯಾರ್ಥಿಗಳ ತಂಡ ಸಾಧನೆ

Inter-College Youth Festival: Team Performance of KLS AMER Students

 ಅಂತರಕಾಲೇಜು ಯುವಜನೋತ್ಸವ: ಕೆಎಲ್‌ಎಸ್ ಆಯ್‌ಎಮ್‌ಇಆರ್ ವಿದ್ಯಾರ್ಥಿಗಳ ತಂಡ  ಸಾಧನೆ 

ಬೆಳಗಾವಿ 24: ಇಲ್ಲಿನ ರೋಟರಿ ಕ್ಲಬ್ 2024 ರ ಡಿಸೆಂಬರ್ 20 ಮತ್ತು 21 ರಂದು ಆಯೋಜಿಸಿದ ಜೋ ಜೀತಾ ವಹಿ ಸಿಕಂದರ್ ಇಂಟರ್ಕಾಲೇಜಿಯೇಟ್ ಯುವಜನೋತ್ಸವದಲ್ಲಿ ಕೆಎಲ್‌ಎಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಎಜುಕೇಶನ್ ಅಂಡ್ ರಿಸರ್ಚ್‌ (ಏಐಖ ಋಇಖ) ವಿದ್ಯಾರ್ಥಿಗಳು ಸಾಧನೆ ಮೆರೆದಿದ್ದಾರೆ. 

ಕೆಎಲ್‌ಎಸ್ ಆಯ್‌ಎಮ್‌ಇಆರ್ ಎಮ್‌ಬಿಎ 1 ಸೆಮಿಸ್ಟರ್ ವಿದ್ಯಾರ್ಥಿಗಳ ತಂಡ  ಇಂಟರ್ಕಾಲೇಜಿಯೇಟ್ ಯುವಜನೋತ್ಸವದ ವರ್ಚುವಲ್ ಗೇಮಿಂಗ್ ಮತ್ತು ಜಾಹೀರಾತು ಮ್ಯಾಡ್ ಆಕ್ಟ್‌ ಎರಡು ಇವೆಂಟ್‌ಗಳಲ್ಲಿ ರನ್ನರ್‌-ಅಪ್ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಅಸಾಧಾರಣ ಸಾಧನೆಯನ್ನು ಮಾಡಿದೆ. 

ವಿದ್ಯಾರ್ಥಿಗಳ ತಂಡದ ಈ ಗಮನಾರ್ಹ ಸಾಧನೆಗೆ ಆರ್‌.ಎಸ್‌. ಆಡಳಿತ ಮಂಡಳಿಯ ಅಧ್ಯಕ್ಷ ಮುತಾಲಿಕ್ ಮತ್ತು ಕೆಎಲ್‌ಎಸ್ ಆಯ್‌ಎಮ್‌ಇಆರ್‌ನ ನಿರ್ದೇಶಕ ಡಾ. ಆರಿಫ್ ಶೇಖ್ ಅವರು ಅಭಿನಂದನೆಗಳನ್ನು ಸಲ್ಲಿಸಿದರು. ತಂಡಕ್ಕೆ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಜಾರ್ಜ್‌ ರೋಡ್ರಿಗಸ್ ಅವರು ಅಮೂಲ್ಯವಾದ ಮಾರ್ಗದರ್ಶನ ಮತ್ತು ಬೆಂಬಲವನ್ನು ನೀಡಿದ್ದರು.