ಕಬ್ಬಿನ ಬೆಳೆಯಲ್ಲಿ ಸಮಗ್ರ ಕೀಟಗಳ ವಿಶೇಷ ಗೊಣ್ಣೆ ಹುಳುವಿನ ನಿರ್ವಹಣೆ ವಿಚಾರ ಸಂಕಿರಣ

ಬೆಳಗಾವಿ 30; ಇತ್ತೀಚಿನ ದಿನಗಳಲ್ಲಿ ಎಲ್ಲ ಬೆಳೆಗಳಿಗೆ ತಗಲುವ ಕೀಟಗಳೊಂದಿಗೆ ಸಮರವನ್ನು ಮಾಡುವ ಪರಿಸ್ಥಿತಿ ಒದಗಿ ಬಂದಿರುವುದು ವಿಷಾದನೀಯ ಎಂದು ಹೇಳಿದರು. ಕೀಟಗಳು ಒಂದಿಲ್ಲೊಂದು ರೀತಿಯಲ್ಲಿ ಎಲ್ಲ ಬೆಳೆಗಳಿಗೆ ಮಾರಕವಾಗಿವೆ ಎಂದು ಹೇಳಿದರು. ಆದಷ್ಟು ಬೆಳೆಗಳಿಗೆ ಕೀಟಗಳು ತಗಲುವ ಹಂತದಲ್ಲಿ ಕ್ರಮವನ್ನು ಕೈಗೊಂಡರೆ ಆದಷ್ಟು ಬೇಗ ಹತೋಟಿಯನ್ನು ಮಾಡಬಹುದು ಎಂದು ಬೆಂಗಳೂರು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿದರ್ೆಶಕರ ಕಾಯರ್ಾಲಯ ಆಯುಕ್ತ, ಕೇಂದ್ರ ಸ್ಥಾನಿಕ ಸಹಾಯಕ ಪ್ರಕಾಶರಾವ ಹೇಳಿದರು.

ಬೆಳಗಾವಿಯ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ದಿ. 29 ರಂದು ಕನರ್ಾಟಕದ ಸಕ್ಕರೆ ಕಾಖರ್ಾನೆಗಳ ಕಬ್ಬು ವಿಭಾಗದ ಅಧಿಕಾರಿ/ಸಿಬ್ಬಂದಿಯವರಿಗೆ ಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ "ಕಬ್ಬಿನ ಬೆಳೆಯಲ್ಲಿ ಸಮಗ್ರ ಕೀಟಗಳ ಮತ್ತು ವಿಶೇಷ ಒತ್ತು ಕೊಟ್ಟು  ಗೊಣ್ಣೆ ಹುಳುವಿನ ನಿರ್ವಹಣೆ" ಕುರಿತು ವಿಚಾರ ಸಂಕಿರಣವನ್ನು ಉದ್ಘಾಟಿಸಿ, ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ನಿದರ್ೆಶಕ ಡಾ. ಆರ್. ಬಿ. ಖಾಂಡಗಾವೆ, ಇವರು ಪ್ರಾಸ್ತಾವಿಕವಾಗಿ ಮಾತನಾಡುತ್ತ ಕಬ್ಬು ವಾಷರ್ಿಕ ಬೆಳೆಯಾದ್ದರಿಂದ ಹೆಚ್ಚು ನೀರು ಮತ್ತು ಪೋಷಕಾಂಶಗಳ ಲಭ್ಯತೆ ಬೇಕಾಗಿದ್ದು, ಇವನ್ನು ಸಮಗ್ರವಾಗಿ, ಸಮಯಕ್ಕನುಸಾರವಾಗಿ ಬೆಳೆಗೆ ಬೇಕಾಗುವ ವಿವಿಧ ಸಂಧಿಗ್ಧ ಹಂತಗಳಲ್ಲಿ ಪೂರೈಕೆ ಮಾಡಿದ್ದಲ್ಲಿ ಹೆಚ್ಚಿನ ಕಬ್ಬು ಮತ್ತು ಸಕ್ಕರೆ ಇಳುವರಿ ಪಡೆಯಲು ಸಾಧ್ಯವೆಂದು ತಿಳಿಸಿದರು. ರೈತರಿಗೆ ಹಾಗೂ ಸಕ್ಕರೆ ಕಾಖರ್ಾನೆಯ ಸಿಬ್ಬಂದಿಯವರಿಗೆ ಸಂಸ್ಥೆಯಿಂದ ಹಮ್ಮಿಕೊಳ್ಳುವ ವಿವಿಧ ತಂತ್ರಜ್ಞಾನಗಳ ಕಾರ್ಯಚಟುವಟಿಕೆಗಳ ಬಗ್ಗೆ , ಕಬ್ಬಿನ ಬೆಳೆಯಲ್ಲಿ ಕೀಟಗಳ ನಿರ್ವಹಣೆಯಿಂದ ಆಗುವ ಲಾಭಗಳ ಬಗ್ಗೆ ತಿಳಿಸಿದರು.

 ಸಕ್ಕರೆ ಕಾಖರ್ಾನೆಯ ಸಿಬ್ಬಂದಿಗಳು ಇಂತಹ ವಿಚಾರ ಸಂಕಿರಣಗಳ ಸದುಪಯೋಗ ಪಡೆದು ತಾಂತ್ರಿಕ ವಿಷಯಗಳನ್ನು ರೈತರ ಕೃಷಿಯಲ್ಲಿ ಅಳವಡಿಕೆಗೆ ಹೆಚ್ಚು ಸಹಕರಿಸಬೇಕೆಂದ ಅವರು. ಕಬ್ಬಿನ ಕ್ಷೇತ್ರವಾರು ಹೆಚ್ಚಿನ ಉತ್ಪಾದನೆಗೆ ಮುಖ್ಯವಾಗಿ ಮಣ್ಣು ಫಲವತ್ತತೆ, ಸಮತೋಲನ ಪೋಷಕಾಂಶಗಳ ಪೂರೈಕೆಯ ಜೊತೆಗೆ ಕೀಟ ಮತ್ತು ರೋಗಗಳ ನಿರ್ವಹಣೆಯು  ಪ್ರಮುಖ ಪಾತ್ರ ವಹಿಸುತ್ತದೆ. ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿಯಲ್ಲಿ ಸ್ಥಾಪಿಸಲಾದ ಮಣ್ಣು ಪರೀಕ್ಷೆ ಪ್ರಯೋಗಾಲಯದ ಲಾಭವನ್ನು ಕಾಖರ್ಾನೆಯವರು ಪಡೆಯುವಂತೆ ತಿಳಿಸಿದರು. 

ಧಾರವಾಡ ಕೃಷಿ ವಿಶ್ವವಿದ್ಯಾಲಯ ಕೃಷಿ ಕೀಟಶಾಸ್ತ್ರ ನಿವೃತ್ತ ಪ್ರಾಧ್ಯಾಪಕ ಡಾ. ಆರ್. ಕೆ. ಪಾಟೀಲ್ ಕಬ್ಬಿನ ಬೆಳೆಯಲ್ಲಿ ಸಮಗ್ರ ಕೀಟ ನಿರ್ವಹಣೆ, ಎಫ್.ಎಂ.ಸಿ ಇಂಡಿಯಾ  ಹುಬ್ಬಳ್ಳಿ  ಮಲಕಾಜಪ್ಪಾ ಸಾರವಾಡ ಕೀಟನಾಶಕಗಳ ಬಳಕೆ, ಡಾ.ಮಂಜುನಾಥ ಚೌರಡ್ಡಿ, ಬೆಳಗಾವಿ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಕೃಷಿ ಕೀಟಶಾಸé್ರ ಸಹಾಯಕ ಪ್ರಾಧ್ಯಾಪಕ ಕಬ್ಬಿನ ಬೆಳೆಯಲ್ಲಿ ಸಮಯಾನುಸಾರ ಅನುಸರಿಸಬೇಕಾದ ಗೊಣ್ಣೆ ಹುಳುವಿನ ನಿರ್ವಹಣೆ, ಬೆಳಗಾವಿ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಕೃಷಿ ವಿಭಾಗ ಮುಖ್ಯಸ್ಥ ಎನ್ ಆರ್ ಯಕ್ಕೇಲಿ  ಕೀಟ ನಿರ್ವಹಣೆಯಲ್ಲಿ ಬೇಸಾಯ ಕ್ರಮಗಳು, ಸನ್ ಅಗ್ರೋ ಬಯೋಟೆಕ್ ಚೆನೈ ಕಬ್ಬಿನ ಬೆಳೆಯಲ್ಲಿ ಮೋಹಕ ಬಲೆಗಳಿಂದ ಕಾಂಡ ಕೊರಕಗಳ ನಿರ್ವಹಣೆ ಕುರಿತು ವಿಚಾರ ಸಂಕಿರಣದಲ್ಲಿ ವಿಷಯಗಳನ್ನು ಮಂಡಿಸಿದರು. 

 ಕನರ್ಾಟಕದ ಸಕ್ಕರೆ ಕಾಖರ್ಾನೆಗಳ 120 ಕ್ಕೂ ಹೆಚ್ಚು ಕಬ್ಬು ವಿಭಾಗದ ಅಧಿಕಾರಿ/ಸಿಬ್ಬಂದಿಯವರು ಭಾಗವಹಿಸಿದ್ದರು. ಭಾಗವಹಿಸಿದ ಪ್ರತಿನಿಧಿಗಳಿಗೆ ಸಂಸ್ಥೆಯಿಂದ ಪರಿಣಿತರು ಮಂಡಿಸಿದ ವಿಷಯಗಳ ಕೈಪಿಡಿಯನ್ನಯ ನೀಡಲಾಯಿತು. ಕಾರ್ಯಕ್ರಮವನ್ನು ಸಂಸ್ಥೆಯ ಬೇಸಾಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಆರ್.ಬಿ.ಸುತಗುಂಡಿ ನಿರೂಪಿಸಿ ಸ್ವಾಗತಿಸಿದರು. ಕೀಟಶಾಸ್ತ್ರ  ಸಹಾಯಕ ಪ್ರಾಧ್ಯಾಪಕ ಡಾ. ಮಂಜುನಾಥ ಚೌರಡ್ಡಿ  ವಂದಿಸಿದರು.