ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್‌ಗೆ ಅವಮಾನಿಸುವುದು ಫಾಸಿಸ್ಟ್‌ ಮನಸ್ಥಿತಿ- ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ

Insulting Constitution architect Dr. Ambedkar is a fascist mentality- Welfare Party of India

ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್‌ಗೆ ಅವಮಾನಿಸುವುದು ಫಾಸಿಸ್ಟ್‌ ಮನಸ್ಥಿತಿ- ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ 

ಕೊಪ್ಪಳ 21: ಅಂಬೇಡ್ಕರ್ ರವರ ಹೆಸರು ಹೆಚ್ಚು ಹೆಚ್ಚು ಬಾರಿ ಹೇಳುವುದು ವ್ಯಸನವಾಗಿದೆ ಎಂದು ಸಂವಿಧಾನದ ಕರ್ತೃ ಬಾಬಾ ಸಾಹೇಬ್ ಅಂಬೇಡ್ಕರ್ ರನ್ನು ನಿಂದಿಸುವ ಮೂಲಕ ಗೃಹ ಮಂತ್ರಿ ಅಮಿತ್‌ಶಾ ತನ್ನ ಫ್ಯಾಸಿಸ್ಟ್‌ ಮನಸ್ಥಿತಿಯನ್ನು ಬಹಿರಂಗ ಪಡಿಸಿದ್ದಾರೆ ಎಂದು ವೆಲ್ಫೇರ್ ಪಾರ್ಟಿಯ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಅಡ್ವೋಕೇಟ್ ತಾಹೇರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಮಾತನಾಡುತ್ತಾ ಗೃಹ ಮಂತ್ರಿಗಳ ಈ ಹೇಳಿಕೆ ಅತ್ಯಂತ ಖಂಡನೀಯ, ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರು ಹೇಳುವುದು ಭಾರತೀಯರೆಲ್ಲರಿಗೆ ಹೆಮ್ಮೆಯ ವಿಚಾರವಾಗಿದೆ. ಅವರು ಈ ದೇಶಕ್ಕೆ ಒಂದು ಮಾದರಿಯಾಗಿದ್ದಾರೆ. ಸಂವಿಧಾನ ರೂಪಿಸಿದವರು ಹಿಂದುಳಿದ, ಅಲ್ಪಸಂಖ್ಯಾತರ ಧ್ವನಿಯಾಗಿದ್ದವರು ಅವರ ಬಗ್ಗೆ ಇಷ್ಟು ಕೀಳು ಭಾವನೆ ಇಟ್ಟುಕೊಳ್ಳುವುದು ಈ ದೇಶದಗೃಹ ಮಂತ್ರಿಗೆ ಶೋಭೆ ತರುವಂತಹುದ್ದಲ್ಲ. 

ಬಾಬಾ ಸಾಹೇಬ್‌ರವರ ಹೆಸರನ್ನು ಕೇಳಲು ಕೋಮು ವ್ಯಸನಿಗಳಿಗೆ ಕರ್ಕಶವಾಗಬಹುದು. ಆದರೆ ಇಲ್ಲಿನ ದಲಿತರ, ಹಿಂದುಳಿದವರ, ದುರ್ಬಲರ ಹಕ್ಕುಗಳಿಗೆ ಹೋರಾಡಿದ ಮಹನೀಯರಾದ ಅಂಬೇಡ್ಕರ್ ರವರ ಸೇವೆ ಸ್ಮರಣೀಯ. ಆ ಹೆಸರು ನಾವು ಎಂದಿಗೂ ಸ್ಮರಿಸಿ ಹೇಳುತ್ತಿರುವುದು ನಿಮಗೆ ವ್ಯಸನದಂತೆ ಕಂಡರೆ ಅದು ನಿಮ್ಮ ಮಾನಸಿಕ ಸಮಸ್ಯೆಯಾಗಿದೆ. ಆ ಹೆಸರನ್ನು ಭಾರತೀಯರು ಎಂದೆಂದಿಗೂ ಹೇಳುತ್ತಿರುವುದು ನಿಮಗೆ ವ್ಯಸನದಂತೆ ಕಂಡರೆ ಅದು ನಿಮ್ಮ ಮಾನಸಿಕ ಸಮಸ್ಯೆಯಾಗಿದೆ. ಆ ಹೆಸರನ್ನು ಭಾರತೀಯರು ಎಂದೆಂದಿಗೂ ಹೇಳುತ್ತಿರುತ್ತಾರೆ. ಬಡವರ ದಲಿತರ ದೀನ ದುರ್ಬಲರ ಹಕ್ಕುಗಳಿಗೆ ಹೋರಾಡಿದ ಮಹಾನ್ ವ್ಯಕ್ತಿಯನ್ನು ನಿಂದಿಸುವ ಮೂಲಕ ಇಡೀ ದೇಶದ ನಾಗರಿಕರ ಮನಸ್ಸಿಗೆ ಘಾಸಿಯುಂಟು ಮಾಡಿರುವ ಗೃಹ ಮಂತ್ರಿಗಳು ಕೂಡಲೇ ಕ್ಷಮೆಯಾಚನೆ ಮಾಡಬೇಕು ಮತ್ತು ತಮ್ಮ ಶಬ್ದಗಳನ್ನು ವಾಪಾಸ್ ಪಡೆಯಬೇಕು. ಇದನ್ನು ಒಕ್ಕೊರಿನಿಂದ ಎಲ್ಲರೂ ಖಂಡಿಸಬೇಕೆಂದು ಅವರು ಆಗ್ರಹಿಸಿದ್ದಾರೆ. 

ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಆಸಿಫ್ ಬಿಳೆಕುದ್ರಿ, ರಾಜ್ಯ ಮಾಧ್ಯಮ ಕಾರ್ಯದರ್ಶಿ ರಿಜ್ವಾನ್ ತಾಜ್, ಜಿಲ್ಲಾ ಅಧ್ಯಕ್ಷರು ಆದಿಲ್ ಪಟೇಲ್ ಮತ್ತು ಪಕ್ಷದ ಸದಸ್ಯರು ಇದ್ದರು.