ವೇದವ್ಯಾಸರ ನೂತನ ಮೂರ್ತಿ ಪ್ರತಿಷ್ಠಾಪನೆ
ಬ್ಯಾಡಗಿ 11: ತಾಲೂಕಿನ ಮಾಸಣಗಿ ಗ್ರಾಮದಲ್ಲಿ ಫೆ.13 ರಂದು ನಿಜಶರಣ ಅಂಬಿಗರ ಚೌಡಯ್ಯನವರ 905 ನೇ ತಾಲೂಕಾ ಜಯಂತೋತ್ಸವ ಹಾಗೂ ಶರಣ ವೇದವ್ಯಾಸರ ನೂತನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ಜಿಲ್ಲೆಯಾದ್ಯಂತ ಹೆಚ್ಚಿನ ಜನ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾ ಸಮಾಜದ ಹಿರಿಯ ನಾಯಕ ಚಂದ್ರಣ್ಣ ಮುಳಗುಂದ ಕೋರಿದ್ದಾರೆ.ಗ್ರಾಮದಲ್ಲಿ ಫೆ.12 ರಂದು ಬುಧವಾರ ಸಂಜೆ 6 ಘಂಟೆಗೆ ಸಕಲ ವಾದ್ಯ ವೈಭವ ಗಳೊಂದಿಗೆ ಮೂರ್ತಿಯ ಮೆರವಣಿಗೆಯು ಜರುಗಲಿದೆ.
ಫೆ.13 ರಂದು ಮುಂಜಾನೆ ಬ್ರಾಹ್ಮಿ ಮೂಹೂರ್ತದಲ್ಲಿ ನೂತನ ಮೂರ್ತಿಗಳ ಪ್ರತಿಷ್ಠಾಪನೆ ನೆರವೇರಲಿದೆ. 10 ಘಂಟೆಗೆ ಧಾರ್ಮಿಕ ಸಭೆಗಳು ಜರುಗಲಿವೆ.ದಿವ್ಯ ಸಾನಿಧ್ಯವನ್ನು ನರಸಿಪುರದ ಜಗದ್ಗುರು ಶಾಂತಭಿಷ್ಮ ಚೌಡಯ್ಯ ಶ್ರಿಗಳು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಕೃಷ್ಣದಯಾನಂದ ಶ್ರೀಗಳು, ಕಾಗಿನೆಲೆಯ ಕನಕ ಗುರುಪೀಠದ ನಿರಂಜನಾನಂದ ಪುರಿ ಶ್ರೀಗಳು. ಹಾವೇರಿಯ ಹೊಸಮಠದ ಬಸವಲಿಂಗ ಶ್ರೀಗಳು, ಗಂಗಾಪುರ ಸಿದ್ದಾರೋಡಮಠದ ಮರಳಶಂಕರ ಶ್ರೀಗಳು, ಮಾಸಣಗಿಯ ವೇ. ಸದಾನಂದಯ್ಯ ಹಿರೇಮಠ ಅವರು ಸಾನಿಧ್ಯ ವಹಿಸುವರು.ಉದ್ಘಾಟನೆಯನ್ನು ಶಾಸಕ ಬಸವರಾಜ ಶಿವಣ್ಣನವರ ಮಾಡಲಿದ್ದಾರೆ. ಸಂಸದ ಬಸವರಾಜು ಬೊಮ್ಮಾಯಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ತಾಲೂಕಾ ಅಧ್ಯಕ್ಷ ನಿಂಗಪ್ಪ ಹೆಗ್ಗಣ್ಣನವರ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ, ಮಾಜಿ ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಸುರೇಶಗೌಡ ಪಾಟೀಲ ಸೇರಿದಂತೆ ಹಲವಾರು ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.