ಗದಗ 08: ಬೆಳಗಾವಿ ವಿಭಾಗದ ಬರ ಪೀಡಿತ ಪ್ರದೇಶದ ಅಧ್ಯಯನ ಪರಿಹಾರ ಹಾಗೂ ನಿರ್ವಹಣೆ ಕುರಿತು ರಾಜ್ಯ ಸಚಿವ ಸಂಪುಟದ ಉಪಸಮಿತಿಯು ಕಂದಾಯ ಸಚಿವರಾದ ಆರ್.ವಿ.ದೇಶಪಾಂಡೆಯವರ ನೇತೃತ್ವದಲ್ಲಿ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ರಸ್ತೆಯಲ್ಲಿನ ಗೋನಾಳ ಕೆರೆ, ಲಕ್ಷ್ಮೇಶ್ವರ, ಗದಗ ತಾಲೂಕಿನ ಮುಳಗುಂದ ಹಾಗೂ ಕುರ್ತಕೋಟಿ ಗ್ರಾಮಗಳ ಜಮೀನುಗಳಲ್ಲಿ ಕೃಷಿ ಬೆಳೆ ಹಾನಿ ಹಾಗೂ ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ಪರಿಶೀಲಿಸಿತು.
ಸಚಿವ ಸಂಪುಟದ ಉಪಸಮಿತಿಯಲ್ಲಿ ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ, ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಜೊತೆಗಿದ್ದರು.
ಬರ ಅಧ್ಯಯನ ನಿರ್ವಹಣೆ ಸಚಿವ ಸಂಪುಟ ಉಪಸಮಿತಿಯು ಲಕ್ಷ್ಮೇಶ್ವರ ತಾಲೂಕಿನ ಗೋನಾಳ ಶಿಗ್ಲಿ ರಸ್ತೆಯಲ್ಲಿನ ಕೆರೆಯ ಹೂಳೆತ್ತುವ ಉದ್ಯೋಗ ಖಾತ್ರಿ ಕಾಮಗಾರಿ, ಲಕ್ಷ್ಮೇಶ್ವರ ತಾಲೂಕಿನ ಗುಲಗಂಜಿಕೊಪ್ಪದಲ್ಲಿರುವ ಸವರ್ೇ ನಂ. 29ರ ಶ್ರೀಮತಿ ವೀಣಾ ವೆಣರ್ೇಕರ ಅವರ ಕೃಷಿ ಜಮೀನಿನಲ್ಲಿ ಹಿಂಗಾರು ಜೋಳದ ಬೆಳೆ, ಹಾಗೂ ಬಸ್ತಿಬಣದ ಸವರ್ೇ ಸಂಖ್ಯೆ 14/2 ಬಸವರಾಜ ಹುಳಕಣ್ಣವರ ಜಮೀನಿನಲ್ಲಿ ಮೆಣಸಿನಕಾಯಿ, ಕಡಲೆ, ಜೋಳದ ಬೆಳೆ, ಗದಗ ತಾಲೂಕಿನ ಮುಳಗುಂದದ ಆರ್.ಎನ್.ದೇಶಪಾಂಡೆ ಅವರ ಜಮೀನಿನಲ್ಲಿ ಕಡಲೆ ಬೆಳೆ ವೀಕ್ಷಿಸಿ ರೈತರ ಅಹವಾಲು ಆಲಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ 156 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಸತತ ನಾಲ್ಕು ವರ್ಷಗಳಿಂದ ರಾಜ್ಯ ಬರಗಾಲಕ್ಕೆ ತುತ್ತಾಗಿ ರೈತರು ಕಷ್ಟದಲ್ಲಿದ್ದಾರೆ ಎಂದರು. ಇಂತಹ ಕಠಿಣ ಸಂದರ್ಭದಲ್ಲಿ ನೀರಿನ ತೊಂದರೆ, ಬರ ನಿರ್ವಹಣೆಗಾಗಿ ಸರಕಾರದಿಂದ ಅನುದಾನ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ 10 ವಾರಗಳಿಗೆ ಸಾಕಾಗುವಷ್ಟು ಮೇವಿನ ದಾಸ್ತಾನು ಇದ್ದು ಇನ್ನೂ ಹೆಚ್ಚಿನ ಮೇವಿಗಾಗಿ ಈಗಾಗಲೆ ಟೆಂಡರ ಕರೆಯಲಾಗಿದೆ. ಅಲ್ಲದೇ ಬರಗಾಲದ ಈ ಸಂದರ್ಭದಲ್ಲಿ ರಾಜ್ಯದಿಂದ ಹೊರಗಡೆ ಮೇವು ಸಾಗಾಣಿಕೆಯನ್ನು ನಿರ್ಬಂಧಿಸಲಾಗಿದ್ದು ಬರದ ಈ ಪರಿಸ್ಥಿತಿಯಲ್ಲಿ ಜನರು ಗುಳೆ ಹೋಗುವದನ್ನು ತಪ್ಪಿಸಲು ಉದ್ಯೋಗ ಖಾತ್ರಿ ಕಾಮಾಗಾರಿಯ 100 ಮಾನವ ದಿನಗಳಿಂದ 150 ಮಾನವ ದಿನಗಳವರೆಗೆ ಸೃಜಿಸಲಾಗಿದೆ ಎಂದರು. ಅಲ್ಲದೇ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಈಗಾಗಲೇ ಜಿಲ್ಲಾಧಿಕಾರಿಗಳ ಖಾತೆಗೆ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು ಯಾವುದೇ ಪರಿಸ್ಥಿತಿಯಲ್ಲಿಯೂ ನೀರಿನ ಅಭಾವವಾಗದಂತೆ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದರು. ಬೆಳೆ ವಿಮೆ ಕುರಿತಾಗಿ ಮಾತನಾಡಿದ ಸಚಿವರು ರೈತರು ನಿಯಮಿತವಾಗಿ ಬೆಳೆ ವಿಮೆ ಕಟಾಯಿಸಿದ್ದರು ಅವರಿಗೆ ವಿಮೆ ಮೊತ್ತ ಪಾವತಿಯಾಗದೇ ಇರುವ ಕುರಿತ ಅಹವಾಲುಗಳನ್ನು ಸ್ವೀಕರಿಸಿದ್ದು ಈ ಕುರಿತು ವಿಮೆ ಕಂಪನಿಗಳ ಜೊತೆ ಚಚರ್ಿಸಿ ಶೀಘ್ರವೇ ರೈತರ ವಿಮೆ ಪಾವತಿಗಾಗಿ ಕ್ರಮ ಕೈಗೊಳ್ಳಲಾಗುವದು ಎಂದರು. ಬರಗಾಲದ ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಸರಕಾರಕ್ಕೆ ಸಾಕಷ್ಟು ಜವಾಬ್ದಾರಿಗಳಿದ್ದು ಇವುಗಳನ್ನು ನಿಬಾಯಿಸಲು ಸರಕಾರವು ಸರ್ವ ರೀತಿಯ ಕ್ರಮ ಕೈಗೊಂಡಿದ್ದು ಯಾವುದೇ ಸಂದರ್ಭದಲ್ಲಿಯೂ ಜನ-ಜಾನುವಾರುಗಳಿಗೆ ನೀರಿನ ಹಾಗೂ ಮೇವಿನ ತೊಂದರೆಯಾಗದಂತೆ ನೋಡಿಕೊಳ್ಳಲು ಸರಕಾರವು ಪ್ರಯತ್ನಿಸುವುದು ಎಂದು ಸಚಿವ ಆರ್.ವಿ.ದೇಶಪಾಂಡೆ ನುಡಿದರು. ತದನಂತರ ಕುರ್ತಕೋಟಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಗಿರೀಶ ಡಬಾಲಿ ಅವರ ಜಮೀನಿನಲ್ಲಿ ಬದು ನಿಮರ್ಾಣ ವೀಕ್ಷಿಸಿತು.
ಗದಗ ಜಿ..ಪಂ. ಅಧ್ಯಕ್ಷ ಎಸ್.ಪಿ.ಬಳಿಗಾರ, ಶಾಸಕರ ರಾಮಣ್ಣ ಲಮಾಣಿ, ಜಿ.ಪಂ. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಈರಪ್ಪ ನಾಡಗೌಡ್ರ, ಜಿ.ಪಂ. ಸದಸ್ಯ ವಾಸಣ್ಣ ಕುರಡಗಿ ಮಾಜಿ ಶಾಸಕರುಗಳಾದ ಬಿ.ಆರ್.ಯಾವಗಲ್, ರಾಮಕೃಷ್ಣ ದೊಡ್ಡಮನಿ, ಜಿ.ಎಸ್.ಗಡ್ಡದೇವರಮಠ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿ.ಪಂ. ಸಿ.ಇ.ಓ, ಮಂಜುನಾಥ ಚವ್ಹಾಣ, ಉಪ ವಿಭಾಗಾಧಿಕಾರಿ ಪಿ.ಎಸ್.ಮಂಜುನಾಥ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.