ಹುಬ್ಬಳ್ಳಿ-ಧಾರವಾಡ ಪಶ್ಚಿಮ ಮತ್ತು ಧಾರವಾಡ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಕೊಳಚೆ ಪ್ರದೇಶಗಳ ಪರೀವೀಕ್ಷಣೆ
ಧಾರವಾಡ 20: ಕರ್ನಾಟಕ ಕೊಳಚೆ ಪ್ರದೇಶಗಳ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಅಬ್ಬಯ್ಯ ಪ್ರಸಾದ ಅವರು ಇಂದು (ಫೆ.20) ಬೆಳಿಗ್ಗೆ 11 ಗಂಟೆಗೆ ಧಾರವಾಡ ನಗರದ ಚಂದ್ರಕಾಂತ ಬೆಲ್ಲದ ನಗರಕ್ಕೆ ಭೇಟಿ ನೀಡಿ, ಕೊಳಚೆ ಪ್ರದೇಶಗಳ ಪರೀವೀಕ್ಷಣೆ ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆಗಳ ಕಾಮಗಾರಿ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿಗಳ ಪರೀವೀಕ್ಷಣೆ ಮತ್ತು ಸಾರ್ವಜನಿಕರ ಕುಂದು ಕೊರತೆಗಳನ್ನು ಸ್ವೀಕರಿಸಿದರು. ಸಾರ್ವಜನಿಕರು ಕುಡಿಯುವ ನೀರು, ವಿದ್ಯತ್ ಹಾಗೂ ಒಳ ಚರಂಡಿಗಳ ಸಮಸ್ಯೆಗಳನ್ನು ತಿಳಿಸಿದರು. ನಂತರ ಅವರು ಅಧಿಕಾರಿಗಳಿಗೆ ಎಲ್ಲ ಸಮಸ್ಯೆಯನ್ನು ಬಗೆಹರಿಸುವಂತೆ ಹೇಳಿದರು. ಈ ಸಂದರ್ಭದಲ್ಲಿ ಮಂಡಳಿಯ ಆಯುಕ್ತರು ಹಾಗೂ ಅಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.