ಪಂಚಾಯತ್ ರಾಜ್ ಇಲಾಖೆ ಆಯುಕ್ತರಿಂದ ಜಿಲ್ಲೆಯ ನರೇಗಾ ಕಾಮಗಾರಿಗಳ ಪರೀಶೀಲನೆ

Inspection of Narega works of the district by Commissioner of Panchayat Raj Department

ಪಂಚಾಯತ್ ರಾಜ್ ಇಲಾಖೆ ಆಯುಕ್ತರಿಂದ ಜಿಲ್ಲೆಯ ನರೇಗಾ ಕಾಮಗಾರಿಗಳ ಪರೀಶೀಲನೆ 

ವಿಜಯಪುರ 12: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರಾದ ಪವನ್ ಕುಮಾರ್ ಮಾಲಪಾಟಿ ಅವರು ಗುರುವಾರ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಕೈಗೊಂಡಿರುವ ನರೇಗಾ ಕಾಮಗಾರಿಗಳನ್ನು ಪರೀಶೀಲನೆ ನಡೆಸಿದರು.  

ವಿಜಯಪುರ ತಾಲೂಕಿನ ಭೂತನಾಳ ಗ್ರಾಮದ ನರ್ಸರಿ ಕಾಮಗಾರಿ ವೀಕ್ಷಣೆ,  ಸಸಿಗಳನ್ನು ನಾಟಿ ಮಾಡಿರುವ ಕುರಿತು ಪರೀಶೀಲನೆ ನಡೆಸಿದ ಅವರು, ಪ್ರತಿ ದಿನಕ್ಕೆ ( ಬೆಳಿಗ್ಗೆ ಹಾಗೂ ಮದ್ಯಾಹ್ನ ) ಎರಡು ಬಾರಿ ಎನ್ ಎಂ ಆರ್ ಹಾಜರಾತಿಗೆ ಕ್ರಮ ವಹಿಸಬೇಕು. ಮುಂದಿನ ಮೂರು ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆ ಬದಿ ಗಿಡಗಳನ್ನು  ನೆಡುವಂತೆ  ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. 

ವಿಜಯಪುರ ತಾಲೂಕಿನ ತಿಡಗುಂದಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅಡುಗೆ ಕೋಣೆ ಕಾಮಗಾರಿಯನ್ನು ಪರೀಶೀಲಿಸಿದ ಅವರು, ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಉತ್ತಮ ಸಾಮಗ್ರಿಗಳನ್ನು ಬಳಸುವಂತೆ ತಿಳಿಸಿದ ಅವರು ಕಳಪೆ ಮಟ್ಟದ ಕಾಮಗಾರಿಯಾಗದಂತೆ ಎಚ್ಚರಿಕೆ ವಹಿಸುವಂತೆ ಅವರು ಸೂಚನೆ ನೀಡಿದರು.  

ಡೊಮನಾಳ ಎಲ್ ಟಿ ನಂಬರ್ 01 ತಾಂಡಾದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪಂಚಾಯತ್ ರಾಜ್ ಇಲಾಖೆಯಡಿ ಅನುಷ್ಠಾನಗೊಂಡ ಅಂಗನವಾಡಿ ಕೇಂದ್ರವನ್ನು ಪರೀಶೀಲಿಸಿ, ಕಾಮಗಾರಿ ಉತ್ತಮವಾಗಿ ಅನುಷ್ಠಾನವಾಗಿರುವದನ್ನು ಕಂಡು ಪ್ರಶಂಸೆ ವ್ಯಕ್ತಪಡಿಸಿದರು.  

ಇಂಡಿ ತಾಲೂಕಿನ ಕೋಳುರಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾವಳಸಂಗ ಗ್ರಾಮದ ಅಮೃತ ಸರೋವರ ಕಾಮಗಾರಿಯನ್ನು ವೀಕ್ಷಿಸಿ, ಅಮೃತ ಸರೋವರದ ಉಪಯೋಗ, ಸುತ್ತಳತೆ , ನೀರಿನ ಸಂಗ್ರಹ ಮಟ್ಟ , ಜಾನುವಾರುಗಳಿಗೆ ಅನುಕೂಲವಾಗಿರುವದು ಸೇರಿ ಇತರೆ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ, ಚೆಕ್ ಡ್ಯಾಂ ಗಳನ್ನು ನಿರ್ಮಿಸುವದರ ಜೊತೆಗೆ ಕೆರೆ ತುಂಬುವ ಕೆಲಸವಾಗಬೇಕು ಹಾಗೂ ನರೇಗಾ ಯೋಜನೆಯ ಕಾಮಗಾರಿ ಕಡತಗಳನ್ನು ಕಡ್ಡಾಯವಾಗಿ ನಿಯಮಾನುಸಾರ ನಿರ್ವಹಣೆ ಮಾಡಬೇಕು ಎಂದು ಸೂಚಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ, ಇಂಡಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ನಂದೀಪ ರಾಠೋಡ, ಚಡಚಣ ತಾಲೂಕಿನ ಕಾರ್ಯ ನಿರ್ವಾಹಕ ಅಧಿಕಾರಿ ಸಂಜಯ ಖಡಗೇಕರ, ಜಿಲ್ಲಾ ಪಂಚಾಯಿತಿಯ ಸಹಾಯಕ ಯೋಜನಾಧಿಕಾರಿ ಅರುಣ ಕುಮಾರ ದಳವಾಯಿ, ವಿಜಯಪುರ ತಾಲೂಕಿನ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಕಾಸಿಮಸಾಬ ಮಸಳಿ, ರಾಜ್ಯ ಆಯುಕ್ತಾಲಯದ ಅಭಿರಾಮ ( ತಾಂತ್ರಿಕ ಸಂಯೋಜಕರು ,ಸಿವಿಲ್ ) ಹಾಗೂ ಆದರ್ಶ ಬಿಡಿ ( ಎಂ ಐ ಎಸ್ ) , ಜಿಲ್ಲಾ ಪಂಚಾಯಿತಿಯ ಎ ಡಿ ಪಿ ಸಿ ಪ್ರಥ್ವಿರಾಜ್ ಪಾಟೀಲ, ಅರಣ್ಯ ಇಲಾಖೆ ಅಧಿಕಾರಿಗಳು ದೂಳೆ, ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕರು, ಐ ಇ ಸಿ ಸಂಯೋಜಕರುಗಳಾದ ರಾಘವೇಂದ್ರ, ರಾಮಗೌಡ ಸರಬಡಗಿ, ಮತ್ತು ನಿನೋದ ಸಜ್ಜನ , ತಿಡಗುಂದಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಾದ ಮಜುಳಾ ಘಂಟಿ , ಕೊಳುರಗಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಶಿದ್ದು ಲೋಣಿ , ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.