ಆಹಾರ ಆಯೋಗದಿಂದ ಅಂಗನವಾಡಿಗಳ ಪರಿಶೀಲನೆ

ಕೊಪ್ಪಳ 21: ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷರು, ಸದಸ್ಯ ಕಾರ್ಯದರ್ಶಿ  ಹಾಗೂ ಸದಸ್ಯರ ತಂಡದಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರದಂದು ಸುದ್ದಿಗೋಷ್ಠಿ ಜರುಗಿತು.  

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013ರ ಅಧಿನಿಯಮ 16ರ ಪ್ರಕಾರ ಕಕರ್ನಾಟಕ  ರಾಜ್ಯ ಆಹಾರ ಆಯೋಗವು ಜೂ. 19 ರಿಂದ 21 ರವರೆಗೆ ಕೊಪ್ಪಳ ಜಿಲ್ಲೆಯ ವಿವಿಧ ತಾಲೂಕುಗಳ ಅಂಗನವಾಡಿ ಕೇಂದ್ರ, ಎಂ.ಎಸ್.ಪಿ.ಟಿ.ಸಿ, ಮದ್ಯಾಹ್ನ ಉಪಹಾರ ಯೋಜನೆ, ಆಹಾರ ಧಾನ್ಯ ಸಗಟು ಮಳಿಗೆ, ನ್ಯಾಯಬೆಲೆ ಅಂಗಡಿ, ಜಿಲ್ಲಾ ತೀವ್ರ ಅಪೌಷ್ಠಿಕ ಮಕ್ಕಳ ಉಪಚಾರ ಘಟಕ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದೆ. ಆಯೋಗವು ಇಂದು ಜಿಲ್ಲಾ ಆಸ್ಪತ್ರೆಯ ಅಪೌಷ್ಠಿಕ ಮಕ್ಕಳ ಘಟಕಕ್ಕೆ ಭೇಟಿ ನೀಡಿ, ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನುಪ್ಠಾನದ ಬಗ್ಗೆ ಸಂಬಂಧಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚೆಸಿದೆ. 

ಕರ್ನಾಟಕ  ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಎನ್. ಕೃಷ್ಣಮೂರ್ತಿ ಅವರು ಸಿದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ 19 ಜಿಲ್ಲೆಗಳಲ್ಲಿ ಆಯೋಗವು ಭೇಟಿ ನೀಡಿದೆ.  ಕೊಪ್ಪಳ ಜಿಲ್ಲೆಯಲ್ಲಿ ಆಯೋಗವು ಭೇಟಿ ನೀಡಿದ್ದು, ಅಂಗನವಾಡಿ ಕೇಂದ್ರಗಳು ಯಾವ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿವೆ.  ಮಕ್ಕಳಿಗೆ ಮತ್ತು ಗರ್ಭಿಣಿ ಮಹಿಳೆಯರಿಗೆ ಪೌಷ್ಠಿಕ ಆಹಾರ ಸಮರ್ಪಕವಾಗಿ ತಲುಪುತ್ತಿದೆ ಎಂಬುದರ ಕುರಿತು ಪರಿಶೀಲಿಸಿದೆ.  ಶಾಲೆಗಳ ಬಿಸಿ ಊಟದಲ್ಲಿ ಮತ್ತು ವಸತಿ ಶಾಲಾ, ಕಾಲೇಜುಗಳ ಊಟದಲ್ಲಿ ಯಾವುದೇ ನ್ಯೂನ್ಯತೆಗಲಿವೆಯೇ ಎಂಬುವುದರ ಬಗ್ಗೆ ಮಾಹಿತಿ ಪಡೆಯಲಾಗಿದೆ.  ಜಿಲ್ಲೆಯ ನ್ಯಾಯ ಬೆಲೆ ಅಂಗಡಿಗಳಲ್ಲಿ ಜನರಿಗೆ ಸರಿಯಾದ ಸೌಲಭ್ಯ ಸಿಗುತ್ತಿದೆಯೇ ಎಂಬುವುದರ ಬಗ್ಗೆ ಪರಿಶೀಲಿಸಲಾಗಿದೆ.  ಜಿಲ್ಲೆಯಲ್ಲಿ ಕೆಲವು ಅಂಗನವಾಡಿ ಕೇಂದ್ರಗಳ ಸ್ಥಿತಿ ಸಮಾದಾನಕರವಿಲ್ಲ.  ಜಿಲ್ಲಾ ಆಸ್ಪತ್ರೆಯಲ್ಲಿ ಅಪೌಷ್ಠಿಕ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ವ್ಯವಸ್ಥೆ ಮಾಡುತ್ತಿಲ್ಲ.  ಭಾರತದಲ್ಲಿ ಮಕ್ಕಳು ಅಪೌಷ್ಠಿಕತೆಯಿಂದ ಮರಣ ಹೊಂದುವಂತಹ ಪ್ರಕರಣಗಳು ಈ ಭಾಗದಲ್ಲಿ ಹೆಚ್ಚಾಗಿವೆ.  ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಗೆ ಸೂಚನೆಗಳನ್ನು ನೀಡಲಾಗಿದೆ.  ಪಡಿತರ ಚೀಟಿ ದಾರರಿಗೆ ಎರಡು, ಮೂರು ತಿಂಗಳುಗಳಿಂದ ತೊಗರಿ ಬೆಳೆ ವಿತರಿಸಲಾಗಿಲ್ಲ ಎಂಬ ಮಾಹಿತಿಯನ್ನು ಪಡೆಯಲಾಗಿದೆ.  ಜಿಲ್ಲೆಯಲ್ಲಿ ಮುಖ್ಯವಾಗಿ ಅಧಿಕಾರಿಗಳ ಹುದ್ದೆ ಖಾಲಿ ಇರುವ ಸಮಸ್ಯೆಯಿಂದಾಗಿ ಸರ್ಕಾರದ  ಕೆಲಸಕ್ಕೆ ತೊಂದರೆ ಉಂಟಾಗುತ್ತಿದೆ ಎಂಬ ಹಾಗೂ ಇನ್ನೂ ಅನೇಕ ಸಮಸ್ಯೆಗಳ ಬಗ್ಗೆ ವರದಿಯನ್ನು ಮಾಡಲಾಗಿದ್ದು, ಈ ಬಗ್ಗೆ ಆಹಾರ ಆಯೋಗದ ರಾಜ್ಯ ಮಟ್ಟದ ಸಭೆಯಲ್ಲಿ ಚಚರ್ಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.  ಅಲ್ಲದೇ ಸಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದರು. 

ಕರ್ನಾಟಕ  ರಾಜ್ಯ ಆಹಾರ ಆಯೋಗದ ಕಾರ್ಯದಶರ್ಿ ಸುಜಾತಾ ಹೊಸಮನಿ, ಸದಸ್ಯರಾದ ಹೆಚ್.ಡಿ. ಶಿವಶಂಕರ, ಡಿ.ಜೆ. ಹಸ್ಬಿ, ಮಂಜುಳಾಬಾಯಿ, ಮಹಮದ ಅಲಿ, ಕೊಪ್ಪಳ ಆಹಾರ ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪ್ರಭಾರಿ ಉಪನಿದರ್ೇಶಕರಾದ ಉಪವಿಭಾಧಿಕಾರಿ ಸಿ.ಡಿ. ಗೀತಾ ಸೇರಿದಂತೆ ಮತ್ತಿತರರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.