ಗ್ರಾ ಪಂ ಆಯುಕ್ತ ಪವನ್ ಕುಮಾರ್ ರಿಂದ ಅಮೃತ ಸರೋವರ ಕಾಮಗಾರಿಯ ವೀಕ್ಷಣೆ

Inspection of Amrita Sarovar work by Village Commissioner Pawan Kumar

ಗ್ರಾ ಪಂ ಆಯುಕ್ತ ಪವನ್ ಕುಮಾರ್ ರಿಂದ ಅಮೃತ ಸರೋವರ ಕಾಮಗಾರಿಯ ವೀಕ್ಷಣೆ

ಇಂಡಿ 12:  ಪವನ್ ಕುಮಾರ್ ಮಾಲಪಾಟೆ ( ಭಾ. ಆ .ಸೆ ) ಆಯುಕ್ತರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರವರು ಇಂಡಿ ತಾಲೂಕಿನ ಕೋಳುರಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾವಳಸಂಗ ಗ್ರಾಮದ ಅಮೃತ ಸರೋವರ ಕಾಮಗಾರಿಯನ್ನು ವೀಕ್ಷಿಸಿ, ಅಮೃತ ಸರೋವರದ ಉಪಯೋಗ, ಸುತ್ತಳತೆ , ನೀರಿನ ಸಂಗ್ರಹ ಮಟ್ಟ , ಜಾನುವಾರುಗಳಿಗೆ ಅನುಕೂಲವಾಗಿರುವದು ಸೇರಿ ಇತರೆ ವಿಷಯಗಳ ಕುರಿತು ಚರ್ಚಿಸಿ ಮಾಹಿತಿ ಪಡೆದುಕೊಂಡರು.  

ಚೆಕ್ ಡ್ಯಾಂ ಗಳನ್ನು ನಿರ್ಮಿಸುವದರ ಜೊತೆಗೆ ಕೆರೆ ತುಂಬುವ ಕೆಲಸವಾಗಬೇಕು ಎಂದು ಸಹಾಯಕ ನಿರ್ದೇಶಕರಿಗೆ ಮತ್ತು ತಾಂತ್ರಿಕ ಸಹಾಯಕರಿಗೆ ಸೂಚಿಸಿದರು. ಹಾಗೂ ಅಮೃತ  ಸರೋವರದ ಕಾಮಗಾರಿ ಕಡತಗಳನ್ನು ಕೂಲಂಕುಷವಾಗಿ ಪರೀಶೀಲನೆ ಮಾಡಿದರು. 

 ಈ ಸಂದರ್ಭದಲ್ಲಿ ವಿಜಯಪೂರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ, ಉಪ ಕಾರ್ಯದರ್ಶಿಗಳಾದ  ವಿಜಯಕುಮಾರ ಆಜೂರ, ಅರುಣ್ ಕುಮಾರ ದಳವಾಯಿ. ಸಹಾಯಕ ಯೋಜನಾಧಿಕಾರಿಗಳು, ಹಾಗೂ ಜಿಲ್ಲಾ ಪಂಚಾಯತ ವಿಜಯಪುರ, ಅಭಿರಾಮ ತಾಂತ್ರಿಕ ಸಂಯೋಜಕರು ,ಸಿವಿಲ್  ಹಾಗೂ ಆದರ್ಶ ಬಿಡಿ ( ಎಂ ಐ ಎಸ್ ) ರಾಜ್ಯ ಆಯುಕ್ತಕರ ತಂಡದ ಅಧಿಕಾರಿಗಳು, ಎ ಡಿ ಪಿ ಸಿ  ಪ್ರತ್ವಿರಾಜ್ ಪಾಟೀಲ್,ಇಂಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ನಂದೀಪ ರಾಠೋಡ್, ಚಡಚಣ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂಜಯ್ ಕಡಗೆಕರ್, ಹಾಗೂ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ವಿಜಯಪುರ  ಕಾಸಿಮಸಾಬ ಮಸಳಿ, ಅರಣ್ಯ ಇಲಾಖೆ ಅಧಿಕಾರಿಗಳು ದೂಳೆ, ತಾಂತ್ರಿಕ ಸಂಯೋಜಕರಾದ ಶಾಹೀಲ್ ಧನಶೆಟ್ಟಿ , ಹಣಮಂತ ಮೇಟಿ ,ಪ್ರದೀಪ ಕುಮಾರ ಹಾಗೂ , ಐ ಇ ಸಿ ಸಂಯೋಜಕರುಗಳಾದ ಅಣ್ಣಾರಾಯಗೌಡ ಪಾಟೀಲ, ರಾಘವೇಂದ್ರ, ರಾಮಗೌಡ ಸರಬಡಗಿ, ಮತ್ತು ನಿನೋದ ಸಜ್ಜನ ,  ಕೊಳುರಗಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಸಿದ್ದು ಲೋಣಿ , ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಇದ್ದರು.