ಬಹದ್ದೂರ ಬಂಡಿ ರಸ್ತೆಯ ಹೆದ್ದಾರಿಗೆ ಕೆಳಸೇತುವೆ ನಿರ್ಮಾಣಕ್ಕೆ ಒತ್ತಾಯ : ಯೋಗಾನಂದ
ಕೊಪ್ಪಳ 17: ಬಹದ್ದೂರಬಂಡಿ ರಸ್ತೆಯಲ್ಲಿರುವ ಹೆದ್ದಾರಿ ಎನ್ಹೆಚ್ 67 ಕ್ಕೆ ಕೆಳಸೇತುವೆ ನಿರ್ಮಾಣಕ್ಕೆ ಸಂಸದರು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ ಎಂದು ಬಹದ್ದೂರ್ ಬಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಯೋಗಾನಂದ ತಿಳಿಸಿದರು. ಅವರು ಸೋಮವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ವೇಶಿಸಿ ಮಾತನಾಡಿ ಕೊಪ್ಪಳದಿಂದ ಬಹದ್ದೂರಬಂಡಿ ಮಾರ್ಗವಾಗಿ ಅಡ್ಡಲಾಗಿ ಹಾದು ಹೋಗಿರುವ ಎನ್.ಹೆಚ್. 67 ಹೆದ್ದಾರಿ ಅದು ಈ ಭಾಗದ ಜನರಿಗೆ ಮೃತ್ಯುವಿನ ಹೆದ್ದಾರಿಯಾಗಿದೆ. ಏಕೆಂದರೆ, ಕೊಪ್ಪಳಕ್ಕೆ ಅನತಿ ದೂರದ ಬಹದ್ದೂರಬಂಡಿ ಅಲ್ಲದೆ ಹೊಸಳ್ಳಿ, ಮುಂಡರಗಿ ಹ್ಯಾಟಿ, ಕುಣಿಕೇರಿ, ಕುಣಿಕೇರಿ ತಾಂಡಾ, ಕರ್ಕಿಹಳ್ಳಿ, ಚಿಕ್ಕಬಗನಾಳ, ಗೊಂಡಬಾಳ, ಮುದ್ದಾಬಳ್ಳಿ, ಚುಕ್ಕನಕಲ್ಲ ಸೇರಿದಂತೆ ಅನೇಕ ಗ್ರಾಮಗಳ ಜನ ಕೆಲಸ ಕಾರ್ಯಗಳಿಗೆ ನಿತ್ಯ ಕೊಪ್ಪಳಕ್ಕೆ ಬರುತ್ತಾರೆ, ಈ ಬೈಪಾಸ್ ದಾಟುವಾಗ ಅಪಘಾತಗಳ ಅಪಾಯ ಹೆಚ್ಚು ಇರುತ್ತದೆ. ಹಾಗೂ ಈ ಹೆದ್ದಾರಿ ದಾಟಿ ಹೋಗಲು ಕೇಂದ್ರೀಯ ವಿದ್ಯಾಲಯದ ಸುಮಾರು 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸಿಸುತ್ತಿದ್ದು ಮತ್ತು ಸರಸ್ವತಿ ವಿದ್ಯಾಮಂದಿರ ಶಾಲೆಯಲ್ಲಿ 450 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು ಈ ಎಲ್ಲ ಮಕ್ಕಳು ಹಾಗೂ ಇದೇ ಹೆದ್ದಾರಿಯನ್ನು ದಾಟಿ ಶಾಲೆಗೆ ಹೋಗಬೇಕು ಈ ಎಲ್ಲ ಪ್ರದೇಶದ ಸಾವಿರಾರು ಜನರು ಈ ಎರಡೂ ಶಾಲೆಗಳ ಸುಮಾರು 950 ಕ್ಕೂ ಹೆಚ್ಚು ಮಕ್ಕಳು ಮತ್ತು ಪಾಲಕರು ಪ್ರತಿನಿತ್ಯ ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ರಸ್ತೆ ದಾಟಲು ಹರಸಾಹಸ ಪಡುತ್ತಿದ್ದಾರೆ. ಈಗಾಲೇ ಸುಮಾರು ಇದು ಒಂದೇ ರಸ್ತೆಯಲ್ಲಿ 200 ರಿಂದ 300 ಜನ ಅಪಘಾತದಲ್ಲಿ ಮೃತಪಟ್ಟಿರುವುದು ತಮಗೆಲ್ಲ ತಿಳಿದಿರುವ ವಿಷಯವಾಗಿದೆ. ಹಾಗಾಗಿ ಇವರುಗಳ ಸುರಕ್ಷತಾ ದೃಷ್ಟಿಯಿಂದ ಸಂಬಂಧಪಟ್ಟ ಜನಪ್ರತಿನಿಧಿಗಳು, ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರು ಹಾಗೂ ಹೆದ್ದಾರಿ ಪ್ರಾಧಿಕಾರದವರು ಶೀಘ್ರವಾಗಿ ಕ್ರಮವಹಿಸಿ, ಈ ರಸ್ತೆಗೆ ಕೆಳಸೇತುವೆ ನಿರ್ಮಾಣ ಮಾಡಿ, ಇಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಹಾಗೂ ಈ ಎರಡೂ ಶಾಲೆಗಳ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಅತೀಶೀಘ್ರವಾಗಿ ಕ್ರಮ ವಹಿಸಿ, ರಸ್ತೆಯ ಕೆಳಸೇತುವೆ ನಿರ್ಮಿಸಿ ಈ ಭಾಗದ ಜನರಿಗೆ ಜೀವ ಅಪಾಯದಿಂದ ಉಳಿಸಬೇಕೆಂದು ಇಲ್ಲದಿದ್ದರೆ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗುತ್ತದೆ ಎಂದು ಈ ಮೂಲಕ ಈ ಭಾಗದ ಎಲ್ಲ ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಮತ್ತು ಗ್ರಾಮ ಪಂಚಾಯತಿಯ ಸರ್ವ ಸದಸ್ಯರ ಒತ್ತಾಯಿಸುವುದಾಗಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಚಾಂದ್ ಪಾಷ ಕಿಲ್ಲೆದಾರ್, ಚಂದ್ರ ಸ್ವಾಮಿ ಹೊಸಮನಿ, ಆರ್. ಎಚ್. ಅತ್ತನೂರ್, ದಾದಾಪೀರ್ ಮಂಡಲಗಿರಿ, ಮಹಮ್ಮದ್ ರಫೀಕ್ ಉಪಸ್ಥಿತರಿದ್ದರು.