ಬೆಂಬಲ ಬೆಲೆ ಯೋಜನೆಯಡಿ ತೋಗರಿ ಖರೀದಿ ಪ್ರಾರಂಭ
ಇಂಡಿ 12 : ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಇಂಡಿ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಯೋಗದಲ್ಲಿ ವತಿಯಿಂದ 2024-25 ನೇ ಸಾಲಿನಲ್ಲಿ ತೋಗರಿ ಖರೀದಿ ಕೇಂದ್ರವನ್ನು ಪ್ರಾರಂಭಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಲಿಂಗದಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಎನ್ ಎಂ ವಾಲಿಕಾರ ಮಾತನಾಡಿ 2024-25ನೇ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ ಖರೀದಿಗೆ ಸಂಭಂಧಿಸಿದಂತೆ, ಕೇಂದ್ರ ಸರ್ಕಾರದ ಬೆಂಬಲ ಬೆಲೆ 7,550 ರೂ. ಜೊತೆಗೆ ರಾಜ್ಯ ಸರ್ಕಾರದ ಪ್ರೋತಾಹಧನ 450 ರೂ. ಪ್ರತಿ ಕ್ವಿಂಟಾಲಗೆ, ಸೇರಿ ಒಟ್ಟು 8,000 ರೂ. ಪ್ರತಿ ಕ್ವಿಂಟಾಲ ರಂತೆ ತೊಗರಿ ಖರೀದಿಸಲಾಗುವುದು ಹಾಗೂ ಪ್ರತಿ ರೈತರಿಂದ ಪ್ರತಿ ಎಕರೆಗೆ ನಾಲ್ಕು ಕ್ವಿಂಟಾಲ್ ನಂತೆ, ಗರಿಷ್ಠ ಎರಡೂ ಹೇಕ್ಟರವರಿಗೆ ಖರೀದಿಸಲಾಗುತ್ತದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಕನ್ನಾಳ ಮಠದ ಭೀಮಾಶಂಕರ ಸ್ವಾಮಿಗಳು,ವೇ!! ಪ್ರಭುಸ್ವಾಮಿಗಳು,ಪಿಕೆಪಿಎಸ್ ಅಧ್ಯಕ್ಷರಾದ ಶಶಿಧರ ಟೆಂಗಳೆ, ತಡವಲಗಾ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ತಮ್ಮಣ್ಣ ಪೂಜಾರಿ, ಭಾರತೀಯ ಕಿಸಾನ್ ಸಂಘದ ಇಂಡಿ ತಾಲೂಕು ಅಧ್ಯಕ್ಷರಾದ ಈರಣ್ಣ ಗೋಟ್ಯಾಳ, ಶ್ರೀಮಂತ ಹಿರೇಕುರಬರ, ಕಾಸು ಜಾಧವ್, ಬಾಬು ಡೊಂಬರ,ಸೋಮನಿಂಗ ತೋರವಿ, ಹಣಮಂತ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.