ಲಿಂಗರಾಜಗೆ ‘ಇನ್ಫೋಸಿಸ್ ರೈಸ್ ಪ್ರಶಸ್ತಿ

Infosys Rice Award to Lingaraj

ಲಿಂಗರಾಜಗೆ ‘ಇನ್ಫೋಸಿಸ್ ರೈಸ್ ಪ್ರಶಸ್ತಿ’  

ಧಾರವಾಡ 05 : ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರತಿಷ್ಠಿತ ಸಂಸ್ಥೆಯಾಗಿರುವ ‘ಇನ್ಫೋಸಿಸ್‌’ ಹುಬ್ಬಳ್ಳಿ ಘಟಕದಲ್ಲಿ ಕಳೆದ 3 ವರ್ಷ 6 ತಿಂಗಳಿಂದ ಸೇವೆಸಲ್ಲಿಸುತ್ತಿರುವ ಲಿಂಗರಾಜ ವೀರಭದ್ರಯ್ಯ ಮಂಟೂರಮಠ ಅವರಿಗೆ ನಿರ್ದಿಷ್ಟ ಯೋಜನಾ ತಂಡದಿಂದ ಕೊಡಮಾಡುವ ‘ಇನ್ಫೋಸಿಸ್ ರೈಸ್ ಪ್ರಶಸ್ತಿ’ ಲಭಿಸಿದೆ.  

ಲಿಂಗರಾಜ ಅವರು ‘ಇನ್ಫೋಸಿಸ್‌’ ಹುಬ್ಬಳ್ಳಿ ಘಟಕದ ಡಿಸಿಟಲ್ ಅನುಭವ ಘಟಕ(ಡಿಸಿಟಲ್ ಎಕ್ಸ್‌ಪೀರಿಯನ್ಸ್‌ ಯುನಿಟ್)ದಲ್ಲಿ ಕೆಲಸ ಮಾಡುತ್ತಿದ್ದು, ಇವರು ತಮ್ಮ ಕೆಲಸದಲ್ಲಿ ತೋರಿದ ಅಸಾಧಾರಣ ಕಾರ್ಯಕ್ಷಮತೆಯನ್ನು ವಿಶೇಷವಾಗಿ ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.  

ಇತ್ತೀಚೆಗೆ ಮೈಸೂರು ‘ಇನ್ಫೋಸಿಸ್‌’ ಘಟಕದಲ್ಲಿ ಜರುಗಿದ ಸಮಾರಂಭದಲ್ಲಿ ಡೆಲಿವರಿ ಮ್ಯಾನೇಜರ್ ಸತೀಶ್ ಸಿಂದಿರಿ ಪ್ರಶಸ್ತಿ ಪ್ರದಾನ ಮಾಡಿದರು. ಇನ್ನೋರ್ವ ಡೆಲಿವರಿ ಮ್ಯಾನೇಜರ್ ಮೆಹಬೂಬ್‌ಬಾಷಾ ಪಲಗಿರಿ ಇದ್ದರು. ನಗರದ ಮದಿಹಾಳ ಸಿಂಧೆ ಪ್ಲಾಟ್ ನಿವಾಸಿಯಾಗಿರುವ ಲಿಂಗರಾಜ ಅವರು ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯಾಧ್ಯಾಪಕ ವ್ಹಿ. ಎನ್‌. ಮಂಟೂರಮಠ ಅವರ ಸುಪುತ್ರ.