ಲೋಕದರ್ಶನ ವರದಿ
ಅಥಣಿ 31: ಭಾರತೀಯ ಪರಂಪರೆಯಲ್ಲಿ ಗಿಡಮೂಲಿಕೆಗಳಿಗೆ ಬಹಳ ಪ್ರಾಶಸ್ಥ್ಯವಿದೆ. ತುಂಬ ಮೌಲಿಕ ಸಸ್ಯಗಳನ್ನು ಸಮೃದ್ಧವಾಗಿ ಹೊಂದಿರುವುದು ನಮ್ಮ ದೇಶದ ಬಹು ದೊಡ್ಡ ಸಂಪತ್ತಾಗಿದೆ. ಅವುಗಳ ಬಳಕೆಯೂ ಕೂಡ ಅನೇಕ ಸಮಸ್ಯೆಗಳಿಗೆ ಪರಿಹಾರೋಪಾಯವಾಗಿದೆ. ಇಂತ ಸಸ್ಯಗಳ ಕುರಿತು ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದು ಜೆ.ಎಸ್.ಎಸ್. ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ವ್ಹಿ ಎಸ್ ಕವಲಾಪೂರ ತಿಳಿಸಿದರು.
ಕೆ.ಎಲ್.ಇ.ಸಂಸ್ಥೆಯ, ಶಿವಯೋಗಿ ಮುರಘೇಂದ್ರ ಸ್ವಾಮೀಜಿ ಮಹಾವಿದ್ಯಾಲಯ ಅಥಣಿಯಲ್ಲಿ ಸಸ್ಯಶಾಸ್ತ್ರ ವಿಭಾಗದಿಂದ ಔಷಧಿಯ ಸಸ್ಯಗಳು ಮತ್ತು ಅವುಗಳ ಮಹತ್ವ ಕುರಿತು ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೊ.ವ್ಹಿ.ಎಸ್.ಕವಲಾಪೂರ, ಆಯುವರ್ೇದ ತಜ್ಞರು ಆಗಮಿಸಿ ವಿದ್ಯಾಥರ್ಿಗಳನ್ನು ಉದ್ದೇಶಿಸಿ ಮೇಲಿನಂತೆ ಮಾತನಾಡಿದರು.
ನಂತರದಲ್ಲಿ ವಿದ್ಯಾಥರ್ಿಗಳೊಂದಿಗೆ ಸಂವಾದ ಏರ್ಪಡಿಸಿ ಪ್ರತಿಯೊಬ್ಬರು ಔಷಧಿಯ ಸಸ್ಯಗಳ ಬಗ್ಗೆ ತಿಳಿದುಕೊಂಡು ಅವುಗಳನ್ನು ಉಳಿಸಿ ಬೆಳೆಸಲು ಕರೆಯಿತ್ತರು. ವಿನಾಶದ ಅಂಚಿನಲ್ಲಿರುವ ಜೀವ ವೈವಿಧ್ಯತೆಯ ಪ್ರಮುಖ ಸಸ್ಯಗಳಾದ ಅಶ್ವಗಂಧ, ಸರ್ಪಗಂಧ, ರಕ್ತಚಂದನ, ಅಂಬೆಹಳದಿ, ಲೋಳಸಾರ ಮುಂತಾದ ಸಸ್ಯಗಳ ಬಗ್ಗೆ ವಿದ್ಯಾಥರ್ಿಗಳಿಗೆ ತಿಳುವಳಿಕೆ ಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಆರ್.ಎಫ್.ಇಂಚಲ ಅಧ್ಯಕ್ಷತೆ ವಹಿಸಿ ಔಷಧಿಯ ಸಸ್ಯಗಳ ಬಗ್ಗೆ ತಿಳಿದುಕೊಂಡು ಅವುಗಳ ಪ್ರಾಯೋಗಿಕ ಮಹತ್ವವನ್ನು ಅರಿತು ಅವುಗಳ ಪ್ರಬೇಧಗಳನ್ನು ಹೆಚ್ಚು ಹೆಚ್ಚು ಉತ್ಪಾದಿಸಲು ಕರೆಯಿತ್ತರು. ಕಾರ್ಯಕ್ರಮದಲ್ಲಿ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಎಸ್.ಕೆ.ಸಜ್ಜನ, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಎಮ್.ಎನ್.ಕುಲ್ಲೋಳ್ಳಿ, ಎಸ್.ಎಸ್.ಮಠದ, ಎಸ್.ಎಸ್.ಗುಂಡಕಲ್ಲಿ, ಭಾಗ್ಯಶ್ರೀ ಶಾಮಣ್ಣವರ, ಪ್ರಿಯಾ ಪಾಟೀಲ ಮತ್ತು ಎಲ್ಲ ವಿದ್ಯಾಥಿ/ವಿದ್ಯಾಥರ್ಿನಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.