ಅನುಮಾನಾಸ್ಪದ ರೀತಿಯಲ್ಲಿ ರಸಗೊಬ್ಬರ ಸಾಧಿಸುತ್ತಿರುವ ಲಾರಿ ಅಧಿಕಾರಿಗಳಿಗೆ ಮಾಹಿತಿ
ಬೀಳಗಿ 07 : ಅನುಮಾನಾಸ್ಪದ ರೀತಿಯಲ್ಲಿ ರಸಗೊಬ್ಬರ ಸಾಧಿಸುತ್ತಿರುವ ಲಾರಿ ಕಂಡು ಸ್ಥಳೀಯರು, ಕೃಷಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ, ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಪಟ್ಟಣದ ಎಪಿಎಂಸಿಯ ಗೋದಾಮಿಗೆ ಭೇಟಿ ನೀಡಿ ಪರೀಶೀಲಿಸಿದರು.
ಬೀಳಗಿ ಪಟ್ಟಣಕ್ಕೆ ಒಟ್ಟು 20 ಟನ್ ತೂಕದ ರಸಗೊಬ್ಬರು ಹೋತ್ತು ಬಂದಿದ್ದ ಲಾರಿ, ಬೀಳಗಿ ಸಿದ್ದೇಶ್ವರ ಅಗ್ರೋ ಕೇಂದ್ರಕ್ಕೆ 10 ಟನ್, ಬಾಗಲಕೋಟೆ ತಾಲೂಕಿನ ಕಲಾದಗಿ ಕೇಂದ್ರಕ್ಕೆ 10 ಟನ್ ರಸಗೊಬ್ಬರ ಬಂದಿತ್ತು, ಸಿದ್ದೇಶ್ವರ ಅಗ್ರೋ ಕೇಂದ್ರದ ಎಪಿಎಂಸಿ ಗೋದಾಮಿನಲ್ಲಿ 15 ಟನ್ ರಸಗೊಬ್ಬರ ಇಳಿಸಲಾಗಿತ್ತು. ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸ ಪಾಟೀಲ ದಾಖಲಾತಿ ಪರೀಶೀದಾಗ ಲಾರಿಯಲ್ಲಿ 5 ಟನ್ ಹೆಚ್ಚುವರಿಯಾಗಿ ಕಂಡು ಬಂದಿದೆ.
ಇತ್ತಿಚ್ಚೇಗೆ ಜಿಎಸ್ಟಿ ನೀಡಬೇಕಾಗುತ್ತದೆ ಎಂದು ತಿಳಿದು ವ್ಯಾಪಾರಿಗಳು ಅವರು ಖರೀದಿ ಮಾಡುವಲ್ಲಿ ಸಾಮಗ್ರಿಗಳು, ವಸ್ತುಗಳು ಸೇರಿದಂತೆ ಯಾವುದೇ ಖರೀದಿಸುವ ಮಾಲು ಇನ್ವಯ್ಸಿಗೆ ಮತ್ತು ಮಾಲಿಗೆ ಹೊಂದಾಣಿಕೆ ಇರೋದೆ ಇಲ್ಲ. ಕಾರಣ ಜಿಎಸ್ಟಿ ತುಂಬಬೇಕಾಗುತ್ತದೆ. ಇದೇ ರೀತಿ ಇರಬಹುದೆಂದು ಅನುಮಾನಾಸ್ಪದವಾಗಿ ಪರೀಶೀಲಿಸಲಾಯಿತು ಎಂದು ಹೇಳಲಾಗುತ್ತಿದೆ.
ಲಾರಿ ಚಾಲಕನ ಎಡವಟ್ಟು:
ಲಾರಿ ನಿಲ್ಲಿಸಿ ಚಾಲಕ ಉಪಹಾರಕ್ಕೆ ಹೋಗಿದ್ದಾನೆ ಹೋಗುವಾಗ ಹಮಾಲರಿಗೆ ಲೋಡ್ ಇಳಿಸಿ ಎಂದು ಹೇಳಿದ್ದಾನೆ. ಈ ಅಗ್ರೋ ಕೇಂದ್ರಕ್ಕೆ 10ಟನ್ ಇಳಿಸಬೇಕಾಗಿತ್ತು ಹಮಾಲರು 15ಟನ್ ಇಳಿಸಿದ್ದಾರೆ. ಹಮಾಲರು ಗೊತ್ತಿಲ್ಲದೆ ಇಳಿಸಿದ್ದಾರೆೆಂದು ಲಾರಿ ಚಾಲಕ ಹೇಳಿದ್ದಾನೆ. ಈಗ ವಾಪಸ್ ಲೋಡ್ ಮಾಡಿಕೊಂಡು ಹೋಗಿತ್ತೇನೆ ಎಂದು ಲಾರಿ ಚಾಲಕ ಹೇಳಿ ಜಾರಿಕೊಂಡಿದ್ಧಾನೆ.
ಹಮಾಲರು ನಮಗೆ 15 ಟನ್ ಇಳಿಸು ಎಂದು ಲಾರಿ ಚಾಲಕ ಹೇಳಿದ್ದರು ಅದಕ್ಕಾಗಿ ಇಳಿಸಿದ್ದೇವೆ ಈಗ ವಾಪಸ್ ಲೋಡ್ ಮಾಡಿ ಎಂದು ಹೇಳುತ್ತಿದ್ದಾರೆ ಎಂದು ಹಮಾಲರು ಹೇಳಿದರು.
ರಸಗೊಬ್ಬರದಲ್ಲಿ ಕಲಬೆರಕೆಯ ಅನುಮಾನ:
ಲಾರಿಯಲ್ಲಿ ಬಂದ ರಸಗೊಬ್ಬರದಲ್ಲಿ ಕಲಬೆರಿಕೆ ಇರಬಹುದೆಂದು ಅನುಮಾನಾಸ್ಪದವಾಗಿ ತಿಳಿದಾಗ ಬಂದ ರಸಗೊಬ್ಬರದ ಬ್ಯಾಗ್‌ನಿಂದ ಅರ್ಧ ಕೆಜಿ ಅಷ್ಟು ಗೊಬ್ಬರವನ್ನ ತೆಗೆದುಕೊಂಡಿದ್ದೇವೆ ಧಾರವಾಡದ ಸಂಶೋಧನಾ ಕೇಂದ್ರಕ್ಕೆ ಕಳುಹಿಸಲಾಗುತ್ತದೆ.