ಧಾರವಾಡ 28: ವಯಸ್ಸಿಗೆ ಅನುಗುಣವಾಗಿ ವಿವಿಧ ಲಸಿಕೆಗಳನ್ನು ಪಡೆಯದಿರುವ ಜಿಲ್ಲೆಯ 2353 ಮಕ್ಕಳಿಗೆ ಡಿಸೆಂಬರ್ 2 ರಿಂದ 10 ರವರೆಗೆ ಹಮ್ಮಿಕೊಂಡಿರುವ ತೀವ್ರತರ ಇಂದ್ರಧನುಷ್ ಲಸಿಕಾ ಅಭಿಯಾನದಲ್ಲಿ ಲಸಿಕೆ ಹಾಕಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ಅವರು ಇಂದು ಸಂಜೆ ಕಚೇರಿ ಸಭಾಂಗಣದಲ್ಲಿ ಇಂದ್ರಧನುಷ ಲಸಿಕಾ ಅಭಿಯಾನ ಹಾಗೂ ಶಾಲಾ ಲಸಿಕಾ ಅಭಿಯಾನ ಕುರಿತ ಸಭೆ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಹುಟ್ಟಿದ ಮಗುವಿನಿಂದ ಎರಡು ವರ್ಷದೊಳಗಿನ ಮಕ್ಕಳಿಗೆ ವಯೊಮಾನಕ್ಕೆ ಅಗತ್ಯವಿರುವ ವಿವಿಧ ರೋಗನಿರೋಧಕ ಲಸಿಕೆಗಳನ್ನು ಲಸಿಕಾ ಅಭಿಯಾನದಲ್ಲಿ ಹಾಕಲಾಗುತ್ತದೆ. ಆದರೆ ವಲಸೆ, ಕೆಲಸ ಹಾಗೂ ಇತರೆ ಕಾರಣಗಳಿಂದಾಗಿ ಲಸಿಕೆಗಳನ್ನು ಪಡೆಯದಿರುವ 2353 ಮಕ್ಕಳಿಗೆ ಜಿಲ್ಲೆಯ 296 ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುತ್ತದೆ. ಈ ಸಂದರ್ಭದಲ್ಲಿ 153 ಗಭರ್ಿಣಿಯರಿಗೆ ಟಿ.ಡಿ ಲಸಿಕೆ ನೀಡಲಾಗುತ್ತದೆ ಎಂದು ಅವರು ಹೇಳಿದರು.
ತೀವ್ರತರ ಇಂದ್ರಧನುಷ ಲಸಿಕಾ ಅಭಿಯಾನದಲ್ಲಿ ಮಕ್ಕಳಿಗೆ ಝಿರೋ ಪೊಲೀಯೊ, ಬಿಸಿಜಿ, ಹೆಪಟೈಟ್ಸ್ ಬಿ, ಪೆಂಟಾ, ಮಿಸಲ್ಸ್ ಮತ್ತು ರುಬೆಲ್ಲಾ, ಐಪಿವಿ, ರೋಟಾ ಮತ್ತು ಜೆ.ಇ, ಡಿಪಿಟಿ ಹಾಗೂ ಒಪಿವಿ ವರ್ತಕ ಲಸಿಕೆಗಳನ್ನು ವಯೋಮಾನಕ್ಕೆ ಅನುಗುಣವಾಗಿ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಡಿಸೆಂಬರ್ 11 ರಿಂದ 31ರವರೆಗೆ ಜಿಲ್ಲೆಯಲ್ಲಿ ಶಾಲಾ ಲಸಿಕಾ ಅಭಿಯಾನ:
ಡಿಸೆಂಬರ್ 11 ರಿಂದ 31ರವೆರೆಗೆ ಜಿಲ್ಲೆಯಲ್ಲಿ ಶಾಲಾ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ಶಾಲೆ, ಅಂಗನವಾಡಿ ಸೇರಿದಂತೆ ಜಿಲ್ಲೆಯ ಒಟ್ಟು 2020 ಕೇಂದ್ರಗಳಲ್ಲಿ 1,23,847 ಮಕ್ಕಳಿಗೆ ಶಾಲಾ ಲಸಿಕಾ ಅಭಿಯಾನದಲ್ಲಿ (ಡಿಪಿಟಿ-ಡಿಪ್ತಿರಿಯಾ ಪರಟೊಸಿಸ್ ಟೆಟೆನೆಸ್) ಗಂಟಲುಮಾರಿ, ನಾಯಿಕೆಮ್ಮು ಮತ್ತು ಧನರ್ುವಾಯು ಹಾಗೂ ಗಂಟಲುಮಾರಿ, ಧನರ್ುವಾಯು(ಟಿ.ಡಿ- ಟೆಟೆನೆಸ್ ಡಿಪ್ತಿರಿಯಾ) ಲಸಿಕೆ ಹಾಕಲಾಗುತ್ತದೆ.
1ನೇ ವರ್ಗದಲ್ಲಿರುವ ಮಕ್ಕಳಿಗೆ (ಡಿಪಿಟಿ-ಡಿಪ್ತಿರಿಯಾ ಪರಟೊಸಿಸ್ ಟೆಟೆನೆಸ್) ಗಂಟಲುಮಾರಿ, ನಾಯಿಕೆಮ್ಮು ಮತ್ತು ಧನರ್ುವಾಯು ಲಸಿಕೆ ಹಾಗೂ 5ನೇ ಮತ್ತು 10ನೇ ವರ್ಗದಲ್ಲಿರುವ ಮಕ್ಕಳಿಗೆ ಗಂಟಲುಮಾರಿ, ಧನರ್ುವಾಯು(ಟಿ.ಡಿ- ಟೆಟೆನೆಸ್ ಡಿಪ್ತಿರಿಯಾ) ಲಸಿಕೆಯನ್ನು ನೀಡಲಾಗುತ್ತದೆ ಎಂದು ಅವರು ಹೇಳಿದರು.
ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಸೇರಿದಂತೆ 1181 ಕೇಂದ್ರಗಳಲ್ಲಿ 1ನೇ ತರಗತಿಯ 5 ರಿಂದ 6 ವರ್ಷದೊಳಗಿನ 43,795 ಮತ್ತು 5ನೇ ತರಗತಿಯ 10 ರಿಂದ 11 ವರ್ಷದೊಳಗಿನ 40,554 ಹಾಗೂ 10ನೇ ತರಗತಿಯ 15 ರಿಂದ 16 ವರ್ಷದೊಳಗಿನ 39,498 ಮಕ್ಕಳು ಸೇರಿ ಅಂಗನವಾಡಿಯ 811 ಕೇಂದ್ರಗಳು, ಕೊಳಚೆ ಪ್ರದೇಶ, ಆದಿವಾಸಿಗಳು, ಇಟ್ಟಂಗಿ ಬಟ್ಟಿ, ಕಟ್ಟಡ ಕಾಮಗಾರಿಗಳಲ್ಲಿ ಮತ್ತು ಗಂಡಾಂತರ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುವ ಜನರಿರುವ 28 ಕೇಂದ್ರಗಳು ಸೇರಿದಂತೆ ಒಟ್ಟು 2020 ಕೇಂದ್ರಗಳಲ್ಲಿ 1,23,847 ಮಕ್ಕಳಿಗೆ ಲಸಿಕೆ ಹಾಕಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಅಭಿಯಾನಕ್ಕೆ ಲಸಿಕೆಗಳು, ಸಿಬ್ಬಂದಿ, ವಾಹನ ಸೇರಿದಂತೆ ಅಗತ್ಯವಿರುವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ರೆಡ್ಕ್ರಾಸ್ ಹಾಗೂ ಶಿಕ್ಷಣ ಸಂಸ್ಥೆಗಳು ಒಟ್ಟಾಗಿ ತೀವ್ರತರ ಇಂದ್ರಧನುಷ ಹಾಗೂ ಶಾಲಾ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಬೇಕು. ಜಿಲ್ಲೆಯ ಯಾವ ಮಗು ಸಹ ಈ ಲಸಿಕಾ ಅಭಿಯಾನದಿಂದ ಹೊರಗುಳಿಯದಂತೆ ಪರಸ್ಪರ ಸಮನ್ವಯತೆಯಿಂದ ಕೂಡಿ ಎಲ್ಲ ಇಲಾಖೆಗಳ ಅಧಿಕಾರಿಗಳು ಕೆಲಸ ಮಾಡಬೇಕೆಂದು ಜಿಲ್ಲಾಧಿಕಾರಿ ದೀಪಾ ಚೊಳನ್ ತಿಳಿಸಿದರು.
ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಶವಂತ ಮದಿನಕರ ಮತ್ತು ಬೆಳಗಾವಿ ವಿಭಾಗ ಮಟ್ಟದ ಸಮಿಕ್ಷಣಾ ವೈದ್ಯಕೀಯ ಅಧಿಕಾರಿ ಡಾ.ಸಿದ್ದಲಿಂಗಯ್ಯ ಎಚ್ ಅವರು ಮಾತನಾಡಿ, ಲಸಿಕಾ ಅಭಿಯಾನದಲ್ಲಿ ಮಕ್ಕಳು ಹೊರಗುಳಿಯದಂತೆ ಸಿಬ್ಬಂದಿ ಜಾಗೃತಿ ವಹಿಸುವ ಕುರಿತು ಮಾರ್ಗದರ್ಶನ ನೀಡಿದರು.
ಜಿಲ್ಲಾ ಸಂತಾನೊತ್ಪತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ.ಎಸ್.ಎಂ.ಹೊನಕೇರಿ ಅವರು ಮಾತನಾಡಿ, ಲಸಿಕಾ ಅಭಿಯಾನ ಯಶಸ್ವಿಗೊಳಿಸಲು ಮಾಡಿರುವ ಸಿದ್ದತೆ ಹಾಗೂ ಯೋಜನೆಯ ಕುರಿತು ಸಭೆಗೆ ವಿವರಿಸಿದರು.
ಸಭೆಯಲ್ಲಿ ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಡಾ.ಶಶಿ ಪಾಟೀಲ, ಡಾ.ಸುಜಾತಾ ಹಸವಿಮಠ, ಡಾ.ಕೆ.ಎನ್.ತನುಜಾ, ಡಾ.ಎಸ್.ಬಿ.ನಿಂಬೆನ್ನವರ, ಜಿಲ್ಲಾ ನಿವೃತ್ತ ಶಸ್ತ್ರಚಿಕಿತ್ಸಕ ಡಾ.ವಿ.ಡಿ.ಕಪರ್ೂರಮಠ, ಜಿಲ್ಲಾ ರೇಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಡಾ. ಕವನ ದೇಶಪಾಂಡೆ, ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ.ರಾಜೇಂದ್ರ ಮಾಳವಾದೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿದರ್ೇಶಕ ಶ್ರೀಕಾಂತ ಕುಲಕಣರ್ಿ ಸೇರಿದಂತೆ ವಿವಿಧ ತಾಲೂಕಾ ವೈದ್ಯಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಣ ಸಂಸ್ಥೆಯ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಸಭೆಯಲ್ಲಿ ಜಿಲ್ಲಾಧಿಕಾರಿಗಳು ಇಂದ್ರಧನುಷ್ ಮತ್ತು ಶಾಲಾ ಲಸಿಕಾ ಅಭಿಯಾನದ ಕರಪತ್ರ, ಪೋಸ್ಟರ್ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆ ಮಾಡಿದರು.