ಜಿಲ್ಲಾ ಉಸ್ತುವಾರಿ ಸಚಿವರಿಂದ ಇಂದಿರಾ ಕ್ಯಾಂಟಿನ್ ಉದ್ಘಾಟನೆ

ಕೊಪ್ಪಳ 31: ಕೊಪ್ಪಳ ನಗರದಲ್ಲಿ ನೂತನವಾಗಿ ನಿಮರ್ಾಣಗೊಂಡಿರುವ ಇಂದಿರಾ ಕ್ಯಾಂಟೀನ್ಗೆ ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆರ್. ಶಂಕರ್ ಅವರು ರಿಬ್ಬನ್ ಕತ್ತರಿಸುವುದರ ಮೂಲಕ ಉದ್ಘಾಟಿಸಿದರು

                ಅಲ್ಲದೇ ಸಚಿವರೊಂದಿಗೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಸಹ ಇಂದಿರ ಕ್ಯಾಂಟೀನ್ ಕಟ್ಟಡವನ್ನು ಪರಿಶೀಲಿಸಿದರುನಂತರ ಕ್ಯಾಂಟೀನಿನ ಅಡುಗೆ ತಯಾರಿಕಾ ಕೊಠಡಿಯಲ್ಲಿ ಆಹಾರ ತಯಾರಿಕಾ ಪ್ರಕ್ರಿಯೆ ಹಾಗೂ ಗುಣಮಟ್ಟವನ್ನು ಸ್ವತಹ ಸಚಿವರೇ ಪರಿಶೀಲಿಸುವುದರ ಜೊತೆಗೆ ಕ್ಯಾಂಟೀನಿನ ಬೆಳಿಗ್ಗೆಯ ಉಪಹಾರವಾದ ಸಿರಾ ಮತ್ತು ಉಪ್ಪಿಟ್ಟಿನ ರುಚಿ ಸವಿದರು.   

                ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆರ್. ಶಂಕರ್ ಅವರು ಮಾತನಾಡಿ, ಬಡವರಿಗೆ ಹಾಗೂ ಹಸಿದವರಿಗೆ ಇಂದಿರಾ ಕ್ಯಾಂಟೀನ್ ಅತ್ಯಂತ ಕಡಿಮೆ ವೆಚ್ಚದಲ್ಲಿ ಊಟ-ಉಪಹಾರ ಸಿಗುವಂತೆ ಮಾಡುವಂತಹ ಮಹತ್ತರವಾದ ಯೋಜನೆ ಇದಾಗಿದೆಉಪಹಾರ ಒಂದಕ್ಕೆ ರೂ. 05, ಊಟಕ್ಕೆ ರೂ. 10 ದರವನ್ನು ನಿಗದಿಪಡಿಸಲಾಗಿದೆಒಂದು ದಿನಕ್ಕೆ ಬೆಳಿಗ್ಗೆಯ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ಸೇರಿದಂತೆ ಮೂರು ಹೊತ್ತಿನಲ್ಲಿಯೂ ಸಹ ಸುಮಾರು 500 ಜನರಿಗೆ ಆಹಾರ ಸಿಗುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆಸಕರ್ಾರದಿಂದ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು ಐದು ಕ್ಯಾಂಟೀನ್ಗಳು ಮಂಜೂರಾಗಿದ್ದು, ಸದ್ಯ ಕೊಪ್ಪಳ ನಗರದಲ್ಲಿನ ಇಂದಿರಾ ಕ್ಯಾಂಟೀನ್ ಉದ್ಘಾಟನೆಯಾಗಿದೆಇನ್ನುಳಿದ ನಾಲ್ಕೂ ಕ್ಯಾಂಟೀನ್ಗಳು ಶೀಘ್ರ ಉದ್ಘಾಟನೆಯಾಗಲಿವೆಇದರಿಂದ ಜಿಲ್ಲೆಯ ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ತುಂಬಾ ಅನುಕೂಲವಾಗಲಿದೆ ಎಂದರು. ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಸೇರಿದಂತೆ ನಗರಸಭೆ ಸದಸ್ಯರು ಹಾಗೂ ನಗರದ ಹಲವು ಗಣ್ಯರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.