ಕೊಪ್ಪಳ 19: ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ ದಿ. ಇಂದಿರಾ ಗಾಂಧಿಯವರ 101 ಜನ್ಮ ದಿನಾಚರಣೆಯ ಅಂಗವಾಗಿ ನಗರದ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಛೇರಿಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ಕೊಪ್ಪಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಇಂದಿರಾ ಬಾವಿಕಟ್ಟಿ, ಉಳುವವನೆ ಒಡೆಯ ಭೂ-ಸುಧಾರಣೆ ಕಾಯಿದೆಯ ಮೂಲಕ ಕೇವಲ ರಾಜವಂಶಸ್ತರ ಹಾಗೂ ಜಮೀಂದಾರ ಹಿಡಿತದಲ್ಲಿದ ಬಹುಪಾಲು ಭೂಮಿಯನ್ನು ದೇಶದ ಹಿಂದುಳಿದ & ದಲಿತ ವರ್ಗದ ಸಾಮನ್ಯ ಜನರಿಗೂ ತಲುಪುವಂತೆ ಮಾಡಿದರು, 1969ರಲ್ಲಿ ಖಾಸಗಿ ಒಡೆತನದಲ್ಲಿದ್ದ ದೇಶದ 14 ಖಾಸಗಿ ಬ್ಯಾಂಕಗಳನ್ನು ರಾಷ್ಟ್ರೀಕರಣ ಮಾಡಿ, ಜನಸಾಮಾನ್ಯರಿಗೂ ಬ್ಯಾಕಿಂಗ್ ಸೇವೆ ಸಿಗುವಂತೆ ಮಾಡಿದ್ದ ಕಿತರ್ಿ ಇವರಿಗೆ ಸಲ್ಲುತ್ತದೆ, ಇವರ ದಿಟ್ಟ ನಿಲುವಿನಿಂದಾಗಿ ಅನೇಕ ಜನಪರ ಯೋಜನೆಯ ಜಾರಿಗೆ ತಂದು ದೇಶದ ಎಲ್ಲಾ ವರ್ಗದ ಜನರ ಹಿತ ಕಾಪಡಿದ ಭಾರತದ ಉಕ್ಕಿನ ಮಹಿಳೆ ಪಂಜಾಬಿನ ಸುವರ್ಣ ಮಂದಿರದಲ್ಲಿ ಅಡಿಗಿದ ಭಯೋತ್ಪಾದಕರ ಹುಟ್ಟು ಅಡಗಿಸಿದ ಧೀಮಂತ ನಾಯಕಿ ಇಂದಿರಾ ಪ್ರೀಯಾದಶರ್ಿನಿ ಎಂದು ಸ್ಮರಿಸಿದರು.
ನಗರ ಬ್ಲಾಕ್ ಕಾಂಗ್ರೆಸ ಪಕ್ಷದ ಅಧ್ಯಕ್ಷ ಕಾಟನ ಪಾಷ ಮಾತನಾಡಿ 1971ರಲ್ಲಿ ಪೂರ್ವ ಪಾಕಿಸ್ತಾನದ ಮೇಲೆ ಯುದ್ದ ಸಾರಿ, ಪೂರ್ವದಲ್ಲಿ ಪಾಕ್ ಹಿಡಿತ ಇಲ್ಲದಂತೆ ಮಾಡಿದರು ಈ ಮೂಲಕ ಬಾಂಗ್ಲಾ ವಿಮೋಚನೆ ಆಗುವಂತೆ ಮಾಡಿದರು, 1974ರಲ್ಲಿ "ಆಪರೇಷನ್ ಸ್ಮೈಲಿಂಗ್ ಬುದ್ಧ" ಹೆಸರಿನಲ್ಲಿ ಪೋಕ್ರಾನ್ಲ್ಲಿ ಅಣು ಶಸ್ತ್ರ ಪ್ರಯೋಗ ಮಾಡುವ ಮೂಲಕ ದಿಟ್ಟತನ ಮೆರೆದರು, ಇವರ ಆಡಳಿತ ಅವದಿಯಲ್ಲಿ ಜಾರಿಗೆತಂದ ಅನೇಕ ಯೊಜನೆಗಳು ಇಂದು ಭಾರತ ಸರ್ವಶಕ್ತವಾಗಿದ್ದೆಎಂದು ಹೇಳಿದ್ದರು.
ನಗರ ಸಭೆಯ ಸದಸ್ಯರಾದ ಬಸಯ್ಯ ಸ್ವಾಮಿ, ಅಕ್ಬರಪಾಷ ಪಲ್ಟನ್, ಜಿಲ್ಲಾ ಎಸ್.ಸಿ ಘಟಕದ ಅಧ್ಯಕ್ಷ ಗಾಳೆಪ್ಪ ಪೂಜಾರ ಐ,ಎನ್,ಯು,ಟಿ,ಸಿ ಕೊಪ್ಪಳ ತಾಲ್ಲೂಕ ಘಟಕದ ಅಧ್ಯಕ್ಷರಾದ ಚಾಂದಪಾಷ ಕಿಲ್ಲೇದಾರ್, ಪ್ರೀಯಾದಶರ್ಿನಿ ಮಹಿಳಾ ಘಟಕಗ ಕುಮಾರಿ ಪ್ರೀಯಾ, ಅಜ್ಜಪ್ಪ ಸ್ವಾಮಿ, ಹನುಮಂತಪ್ಪ ಹೆಚ್.ಬಿ.ಹಳ್ಳಿ, ಶಿಲ್ಪಾ ಹುನಗುಂದ ಉಪಸ್ಥಿತರಿದ್ದರು.