ಲೋಕದರ್ಶನ ವರದಿ
ತಾಳಿಕೋಟೆ 09: ದೇಶದ ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತಹ ಕಾರ್ಯಕ್ರಮವು ಇದೇ ದಿ.24 ರಿಂದ 31 ರವರೆಗೆ ಜಿಲ್ಲೆಯ ಕಗ್ಗೋಡ ಗ್ರಾಮದಲ್ಲಿ ಭಾರತೀಯ ಸಂಸ್ಕೃತಿ ಉತ್ಸವ ಜರುಗಲಿದ್ದು ಈ ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಭಾಗವಹಿಸಿ ಪ್ರತಿನಿಧಿಯಾಗಿ ಕೆಲಸ ಮಾಡಬೇಕೆಂದು ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ ಅವರು ನುಡಿದರು.
ತಾಳಿಕೋಟೆ ತಾಲೂಕಿನ ಗ್ರಾಮಾಂತರ ಪ್ರದೇಶಗಳಿಗೆ ಪ್ರಚಾರಾರ್ಥವಾಗಿ ಆಗಿಸಿದ ಭಾರತೀಯ ಸಂಸ್ಕೃತಿ ಉತ್ಸವ ಜಾಗೃತಿ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು ಜಿಲ್ಲೆಯ ಕಗ್ಗೋಡ ಗ್ರಾಮದಲ್ಲಿ ಜರುಗಲಿರುವ ಈ ಭಾರತೀಯ ಸಂಸ್ಕೃತಿ ಉತ್ಸವವು 5 ಉತ್ಸವವಾಗಿದೆ ಸುಮಾರು 400 ಏಕರೆ ಭೂ ಪ್ರದೇಶದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸುಮಾರು 20 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರಿಕ್ಷೆಯನ್ನು ಹೊಂದಲಾಗಿದೆ ಈ ಉತ್ಸವದ ಯಶಸ್ವಿಗೆ ಪ್ರತಿಯೊಬ್ಬರು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಬೇಕಾಗಿದೆ ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ(ಯತ್ನಾಳ) ಅವರ ನೇತೃತ್ವದಲ್ಲಿ ನಡೆಯಲಿರುವ ಈ ಉತ್ಸವ ಕಾರ್ಯಕ್ರಮದಲ್ಲಿ ದೇಶದ ಎಲ್ಲ ರಾಜ್ಯದ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ ಅಲ್ಲದೇ ದೇಶದ ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡಾ ಒಂದು ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಈ ಕಾರ್ಯಕ್ರಮದ ವಿಕ್ಷಣೆಗೆ ವಿದೇಶದಿಂದ ಸುಮಾರು 30 ಸಾವಿರ ಜನರು ಪಾಲ್ಗೊಳ್ಳುವ ನಿರಿಕ್ಷೆ ಇದೆ ಈ ಉತ್ಸವದಲ್ಲಿ ಕಲೆ ಸಾಹಿತ್ಯ, ದೇಶದ ಸಂಸ್ಕೃತಿ, ಗೋರಕ್ಷಣಾವಿಧಿ, ಕೃಷಿ ಪದ್ದತಿ, ಗಳನ್ನು ಸಂಬಂದಿಸಿದ ತಜ್ಞರಿಂದ ಮಾರ್ಗದರ್ಶನ, ಮಾಡುವಂತಹ ಕಾರ್ಯನಡೆಯಲಿದೆ ಮತ್ತು ನಮ್ಮ ದೇಶದ ಮೂಲ ಸಂಸ್ಕೃತಿ ಉಳಿಸಿ ಬೆಳೆಸುವಂತಹ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ ಎಂದ ಅವರು ಈ ಕಾರ್ಯಕ್ರಮದಲ್ಲಿ ಜನರಿಗೆ ಉತ್ತರ ಕನರ್ಾಟಕದ ರೀತಿಯಲ್ಲಿ ಹೋಳಿಗೆ, ಬಿಳಿ ಜೋಳ ರೋಟ್ಟಿ, ಸಜ್ಜೆ ರೋಟ್ಟಿ, ಮೊಸರನ್ನಾ, ಒಳಗೊಂಡಂತೆ ವಿವಿಧ ತರಹದ ಪಲ್ಲೆ, ತಯಾರಿಸುವಂತಹ ವ್ಯವಸ್ಥೆ ಮಾಡಲಾಗುತ್ತಿದೆ ಈಗಾಗಲೇ ಸಾಕಷ್ಟು ದಾನಿಗಳು ಮುಂದೆ ಬರುತ್ತಿದ್ದಾರೆ ಬಾಗಲಕೋಟೆಯ ಶ್ರೀ ಬಸವೇಶ್ವರ ವೀರಶೈವ ವಿದ್ಯಾವರ್ದಕ ಸಂಘ, ವಿಜಯಪುರದ ಸಿದ್ದೇಶ್ವರ ಸಂಸ್ಥೆ ವಿಜಯಪುರ ಇವುಗಳ ಸಹಯೋಗದಲ್ಲಿ ಕಾರ್ಯಕ್ರಮ ಸಂಯೋಜಿಸಲಾಗಿದೆ ಎಂದರು.
ಈ ಸಮಯದಲ್ಲಿ ಮುಖಂಡರುಗಳಾದ ಕಾಶಿನಾಥ ಮುರಾಳ, ಎಂ.ಎಸ್.ಸರಶೆಟ್ಟಿ, ರಾಘವೇಂದ್ರ ಚವ್ಹಾಣ, ಮಾನಸಿಂಗ್ ಕೊಟಕನೂರ, ಸುರೇಶ ಹಜೇರಿ, ಮಂಜು ಶೆಟ್ಟಿ, ಬಾಬು ಹಜೇರಿ, ಅಶೋಕ ಜಾಲವಾದಿ, ವಿಠ್ಠಲ ಮೋಹಿತೆ, ಕಾಶಿನಾಥ ಅರಳಿಚಂಡಿ, ರಾಜು ಅಲ್ಲಾಪೂರ, ಕಾಶಿನಾಥ ಬಿದರಕುಂದಿ, ಬಂಡು ದಾಯಪುಲೆ, ಕಾಶಿನಾಥ ಮಬ್ರುಮಕರ, ರಾಘು ವಿಜಾಪೂರ, ಮುದಕಣ್ಣ ಬಡಿಗೇರ, ರೇವಣಸಿದ್ದ ಬಿರಾದಾರ, ರಾಘು ಮಾನೆ, ಮೊದಲಾದವರು ಇದ್ದರು.