ಭಾರತೀಯ ಸಂವಿಧಾನ ಅಂಗೀಕಾರ ದಿನಾಚರಣೆ

ಧಾರವಾಡ 27: ವಿವಿಧತೆಯಲ್ಲಿ ಏಕತೆಯನ್ನು ಪ್ರತಿಪಾದಿಸುವ ಶ್ರೇಷ್ಠ ಸಂವಿಧಾನವನ್ನು ನಮ್ಮ ದೇಶ ಹೊಂದಿದೆ. ಸಹೋದರತೆ, ಭ್ರಾತೃತ್ವ, ಹಾಗೂ ಸಮಾನತೆಯನ್ನು ಅಳವಡಿಸಿಕೊಂಡ ನಮ್ಮ ಸಂವಿಧಾನ ಜಗತ್ತಿನಲ್ಲಿಯೇ ಶ್ರೇಷ್ಠ ಹಾಗೂ ಆದರ್ಶ ಸಂವಿಧಾನವಾಗಿದೆ ಎಂದು ಡಿಎಸ್ಎಸ್ ಮುಖಂಡ ನಾರಾಯಣ ಮಾದರ ಅಭಿಪ್ರಾಯಪಟ್ಟರು. 

ಜಗತ್ತಿನ ಅತ್ಯಂತ ಬೃಹತ್ ಸಂವಿಧಾನವನ್ನು 1949 ನ.26ರಂದು ಭಾರತ ಸರಕಾರ ಹಾಗೂ ಭಾರತೀಯ ಜನತೆ ಅಂಗೀಕರಿಸಿದ ಸ್ಮರಣಾರ್ಥ ಡಿ.ಎಸ್.ಎಸ್. ಸಂಘಟನೆ ವತಿಯಿಂದ ಭಾರತೀಯ ಸಂವಿಧಾನ ಅಂಗೀಕಾರ ದಿನಾಚರಣೆ

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸುರೇಶ ನವಲೂರ ಮಾತನಾಡಿ ಭಾರತದ ಸಂವಿಧಾನ ರಚನಾಕಾರರು ಅತ್ಯಂತ ವಿಸ್ತೃತವಾಗಿ ಚಚರ್ಿಸಿ, ಸರ್ವಸಮ್ಮತವಾದ ಸಂವಿಧಾನವನ್ನು ರಚಿಸಿದ್ದಾರೆ. 2 ವರ್ಷ 11 ತಿಂಗಳು 18 ದಿವಸಗಳಷ್ಟು ಸಮಯಾವಕಾಶವನ್ನು ತೆಗೆದುಕೊಂಡು ರಚಿಸಿದ ಈ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ವರ ಕೊಡುಗೆ ಅನನ್ಯವಾದದ್ದು. ಈ ನಿಟ್ಟಿನಲ್ಲಿ ಪ್ರತಿ ವರ್ಷ ನವ್ಹೆಂಬರ್ 26, ರಂದು ಸಂವಿಧಾನ ಅಂಗೀಕಾರ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಬುದ್ಧವಂದನೆಯೊಂದಿಗೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಿ ಸಿಹಿ ಹಂಚಿ ಕಾರ್ಯಕರ್ತರು ಸಂಭ್ರಮಿಸಿದರು.

ಸಂಘಟನೆಯ ಮುಖಂಡರಾದ ಲಕ್ಷ್ಮಣ ಬ. ದೊಡ್ಡಮನಿ, ಲಕ್ಷ್ಮಣ ಈ. ದೊಡಮನಿ, ಶಬ್ಬೀರ ಅತ್ತಾರ, ಹನುಮಂತ ಮೊರಬ, ರಮೇಶ ಅರಳಿಕಟ್ಟಿ, ಪ್ರಕಾಶ ಹೂಗಾರ, ಭಾಸ್ಕರ ಭೋಗಲೆ, ಮಹಾಂತೇಶ ಕಮ್ಮಾರ, ಮಾರುತಿ ಪ್ರಭಾಕರ, ನಾಗರತ್ನಾ ಮ. ಅಥಣಿ, ಸಾಯಿರಾಮ ಕಾಳೆ, ನೀಲಮ್ಮಾ ಮುದಕಣ್ಣವರ, ಮಲ್ಲಿಕಾಜರ್ುನ ಅಥಣಿ, ಮಾರುತಿ ಕುಡಾಳಕರ, ನಾಗನಗೌಡ ಪಾಟೀಲ ಮುಂತಾದವರು ಹಾಜರಿದ್ದರು.