ಪ್ಯಾರಿಸ್: 2017 ರ ವರ್ಷಾಂತ್ಯಕ್ಕೆ ಭಾರತದ ಜಿಡಿಪಿ 2.597 ಟ್ರಿಲಿಯನ್ ಡಾಲರ್ ನಷ್ಟಾಗಿದ್ದು, 2.582 ಟ್ರಿಲಿಯನ್ ಜಿಡಿಪಿ ಹೊಂದಿರುವ ಫ್ರಾನ್ಸ್ ನ್ನು ಹಿಂದಿಕ್ಕುವ ಮೂಲಕ ವಿಶ್ವದ 6 ನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ.
ವಿಶ್ವ ಬ್ಯಾಂಕ್ ನ ಅಪ್ಡೇಟೆಡ್ ಅಂಕಿ ಅಂಶಗಳ ಪ್ರಕಾರ ಜಿಡಿಪಿ ಲೆಕ್ಕದಲ್ಲಿ ಫ್ರಾನ್ಸ್ ನ್ನು ಹಿಂದಿಕ್ಕಿರುವ ಭಾರತದ ಜಗತ್ತಿನ 6 ನೇ ಬಲಿಷ್ಠ ಆರ್ಥಿಕತೆಯಾಗಿ ಹೊರಹೊಮ್ಮಿದ್ದರೆ, ನಂತರದ ಸ್ಥಾನದಲ್ಲಿ ಫ್ರಾನ್ಸ್ ಇದೆ.
ಹಲವು ತ್ರೈಮಾಸಿಕಗಳಲ್ಲಿ ಕುಂಠಿತವಾಗಿದ್ದ ಭಾರತದ ಜಿಡಿಪಿ 2017 ರ ಜುಲೈ ನಂತರ ಚೇತರಿಕೆ ಕಂಡಿದೆ. ಕೇವಾ 67 ಮಿಲಿಯನ್ ಜನಸಂಖ್ಯೆಯುಳ್ಳ ಫ್ರಾನ್ಸ್ ನ ಜಿಡಿಪಿ 2.582 ಟ್ರಿಲಿಯನ್ ಡಾಲರ್ ನಷ್ಟಿತ್ತು, ಭಾರತದ ತಲಾದಾಯಕ್ಕಿಂತ 20 ರಷ್ಟು ಹೆಚ್ಚಾಗಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ. ಕಳೆದ ವರ್ಷ ಜಿಡಿಪಿಗೆ ಉತ್ಪಾದನಾ ವಲಯ ಹಾಗೂ ಕನ್ಸೂಮರ್ ಸ್ಪೆಂಡಿಂಗ್ (ಗ್ರಾಹಕ ಖರ್ಚು) ಹೆಚ್ಚು ಪರಿಣಾಮ ಬೀರಿದ್ದು, ಜಿಎಸ್ ಟಿ ಹಾಗೂ ನೋಟು ನಿಷೇಧವನ್ನು ದೂಷಿಸಲಾಗಿತ್ತು.
ಕಳೆದ 10 ವರ್ಷಗಳಲ್ಲಿ ಭಾರತ ಜಿಡಿಪಿ ದ್ವಿಗುಣಗೊಂಡಿದ್ದು, ಏಷ್ಯಾದಲ್ಲಿ ಪ್ರಮುಖ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವ ಸಾಮರ್ಥ್ಯವಿದೆ ಎಂದು ವಿಶ್ಲೇಷಿಸಲಾಗುತ್ತಿದೆ.