ಧಾರವಾಡ೧೫: ಭಾರತ ದೇಶವು ವಿಶ್ವದ ಮಧುಮೇಹಿಗಳ ರಾಜಧಾನಿಯಾಗಿದೆ ಎಂದು ಔಷದಿಯ ಸಸ್ಯಗಳ ವಿಜ್ಞಾನಿ ಹಾಗೂ ಪರಿಸರ ತಜ್ಞ ಡಾ. ಶ್ರೀಶೈಲ ಬದಾಮಿ ವಿಷಾದ ವ್ಯಕ್ತಪಡಿಸಿದರು.
ಮಲ್ಲಸಜ್ಜನ ವ್ಯಾಯಾಮ ಮತ್ತು ಆರೋಗ್ಯ ಶಿಕ್ಷಣ ಸಂಸ್ಥೆಯ ಜಿ.ಕೆ.ಜೆ ಯೋಗ ಕೇಂದ್ರ, ತುಮಕೂರಿನ ಚೈತನ್ಯ ವಿಕಾಸ ಯೋಗ ಮತ್ತು ನಿಸರ್ಗ ಚಿಕಿತ್ಸಾ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಮರಾಠಾ ಕಾಲನಿಯ ಮಲ್ಲಸಜ್ಜನ ಹೈಸ್ಕೂಲಿನಲ್ಲಿ ನಡೆದ 'ಮಧುಮೇಹ ಮುಕ್ತ ಸಮಾಜ' ಕುರಿತ ಒಂದು ದಿನದ ಕಾಯರ್ಾಗಾರದಲ್ಲಿ ಅವರು ಮಾತನಾಡಿದರು. 2040ರ ವೇಳೆಗೆ ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ 30 ಕೋಟಿಗೆ ಹೆಚ್ಚಲಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಪಾಶ್ಚಾತ್ಯ ಪ್ರಭಾವಕ್ಕೆ ಒಳಗಾಗದಿದ್ದರೆ ಜನರಿಗೆ ಸಕ್ಕರೆ ಖಾಯಿಲೆ ಬರುತ್ತಿರಲಿಲ್ಲ ಎಂದರು. ಆ ವೇಳೆಗೆ ಶೇಕಡಾ 16 ರಷ್ಟು ಮಕ್ಕಳು ಹುಟ್ಟುತ್ತಲೆ ಈ ಖಾಯಿಲೆಯಿಂದ ಬಳಲುತ್ತಾರೆ ಎಂದು ಭವಿಷ್ಯ ನುಡಿದರು.
ಬೆಂಗಳೂರಿನಲ್ಲಿ ಪ್ರತಿ ಐವರಲ್ಲಿ ನಾಲ್ವರು ಮಧುಮೇಹಿಗಳಿದ್ದಾರೆ. ಮಕ್ಕಳಿಗೆ ಹೇಗೆ ಬೆಳೆಸಬೇಕು ಎಂಬುದನ್ನು ನಾವು ಹಿರಿಯರಿಂದ ಕಲಿಯುವಲ್ಲಿ ವಿಫಲವಾಗಿದ್ದು, ಮಕ್ಕಳನ್ನು ನಾವು ಯಾಂತ್ರಿಕ ಬದುಕಿಗೆ ತಳ್ಳುತ್ತಿದ್ದೇವೆ. ಪ್ಲಾಸ್ಟಿಕ್ ಬಳಕೆಯಿಂದ ಬೊಜ್ಜುತನ, ಸಕ್ಕರೆ ಖಾಯಿಲೆ ಹೆಚ್ಚುತ್ತಿದ್ದು, ನಮ್ಮ ಇಡೀ ಜೀವನ ಪದ್ಧತಿಯಲ್ಲಿ ಬದಲಾವಣೆ ತರುವ ಅವಶ್ಯಕತೆ ಎಂದು ಅವರು ವಿವರಿಸಿದರು.
ಇದೇ ವೇಳೆ ಉಪನ್ಯಾಸ ನೀಡಿದ ವೈದ್ಯೆ ಹಾಗೂ ಭಾಷಣಕಾರರಾದ ಡಾ. ಸುಕುಮಾರಿ ಎಚ್.ಯು ಅವರು ಮಾತನಾಡಿ ಅತ್ಯುತ್ತಮ ಆಹಾರ, ವಿಹಾರ, ಆಚಾರ ಹಾಗೂ ವಿಚಾರಗಳಿಂದ ಔಷಧಿ ಸೇವಿಸದೇ ಮದುಮೇಹ ಮುಕ್ತ ಬದುಕು ನಡೆಸಲು ಸಾಧ್ಯ ಎಂದರು.
ಋತುಮಾನಕ್ಕೆ ಅನುಗುಣವಾಗಿ ಆಹಾರ ಸೇವನೆ ಬಗ್ಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದ ಅವರು, ಪದಾರ್ಥಗಳಾದ ಮೆಂತ್ಯೆ, ಬೆಂಡೆಕಾಯಿ, ಮೊಳಕೆಯೊಡೆದ ಕಾಳುಗಳು, ಗೆಣಸು, ನೆಲ್ಲಿಕಾಯಿ, ಸೌತೆಕಾಯಿ ಸೇವನೆ ಮಧುಮೇಹಿಗಳಿಗೆ ಬಹುಮುಖ್ಯವಾಗಿದೆ ಎಂದರು.
ದಿನನಿತ್ಯ ಯೋಗ, ಪ್ರಕೃತಿ ಚಿಕಿತ್ಸೆ, ವ್ಯಾಯಾಮ ಮಧುಮೇಹಿಗಳಿಗೆ ಸಹಕಾರಿ. ಇದಲ್ಲದೇ ನಿತ್ಯ ತಣ್ಣೀರು ಸ್ನಾನದಿಂದ ನಮ್ಮ ನರಮಂಡಲ ಬಲಿಷ್ಠವಾಗಲಿದೆ. ಅಧಿಕ ಇನ್ಸುಲಿನ್ ಬಳಕೆಯಿಂದ ಹೃದಯಾಘಾತ, ಪಾಶ್ರ್ವವಾಯು ಇನ್ನಿತರ ಅಡ್ಡ ಪರಿಣಾಮ ಸಂಭವಿಸಬಹುದು ಎಂದು ಎಚ್ಚರಿಸಿದರು. ಶಾಲೆಯ ಮುಖ್ಯೊಪಾಧ್ಯಾಯ ವಿನಯ ನಾಡಗೀರ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದರು. ಯೋಗ ಶಿಕ್ಷಕ ಮಂಜುನಾಥ ಹೂಗಾರ ಕಾರ್ಯಕ್ರಮ ನಿರೂಪಿಸಿದರು. ಗುತ್ತಿಗೆದಾರ ಮಲ್ಲು ಹಲರ್ಾಪೂರ ಮತ್ತಿತರರು ಇದ್ದರು.