ಭಾರತ ಭಾವೈಕ್ಯತೆಯ ಬೀಡು : ಶಾಸಕ ಯಶವಂತರಾಯಗೌಡ

ಲೋಕದರ್ಶನ ವರದಿ

ಇಂಡಿ 10: ಭಾರತ ದೇಶ ವಿವಿಧ ಧರ್ಮ ವಿವಿಧ ಭಾಷೆ ಅನೇಕ ಸಂಸ್ಕೃತಿಗಳ ಭಾವೈಕ್ಯತೆಯ ಬೀಡಾಗಿದ್ದು ಇಂತಹ ಭವ್ಯ ಸಂಸ್ಕೃತಿ ಜಗತ್ತಿನ ಯಾವುದೇ ದೇಶದಲ್ಲಿ ಕಾಣಲು ಅಸಾಧ್ಯ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಪಟ್ಟಣದ ಮಿನಿ ವಿಧಾನಸೌಧಾದಲ್ಲಿ ತಾಲೂಕಾ ಆಡಳಿತ ಆಯೋಜಿಸಿದ ಹಜರತ್ ಟಿಪ್ಪು ಸುಲ್ತಾನರ ಜಯಂತೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಕಳೆದ ಕಾಂಗ್ರೆಸ್ ಸರಕಾರದ ಆಡಳಿತ ಅವಧಿಯಲ್ಲಿ ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರು ಅನೇಕ ಮಹಾನ್ ಶರಣರ ಸಂತರ ದಾರ್ಶನಿಕ ಪರುಷರ ಹಾಗೂ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ನಾಯಕರುಗಳ ಜಯಂತಿಗಳನ್ನು ಮಾಡುವ ಮೂಲಕ ಸ್ಮರಿಸುವ ಕಾರ್ಯ ಮಾಡಿರುವದು ಸ್ವಾಗತಾರ್ಹವಾಗಿದೆ. 

ಭಾರತ ದೇಶದ ಸ್ವಾತಂತ್ರ್ಯ ಸಾರ್ವಭೌಮತೆಗಾಗಿ ಅನೇಕ ದೇಶ ಭಕ್ತರು ತಮ್ಮ ಪ್ರಾಣವನ್ನೆ ಮುಡುಪಾಗಿಟ್ಟಿದ್ದಾರೆ. ಭವ್ಯ ಭಾರತ ದೇಶದಲ್ಲಿ ರಾಷ್ಟ್ರನಾಯಕರುಗಳನ್ನು ಒಂದೇ ಸಮುದಾಯದ ಗುಂಪಿಗೆ ಸೇರಿಸಿ ಆಚರಣೆಗಳು ಮಾಡುವದು ಸರಿಯಲ್ಲ ಇಡೀ ಜನ ಸಮುದಾಯ ಕೂಡಿ ಆಚರಿಸಿದಾಗ ಮಾತ್ರ ನಾವೇಲ್ಲರೂ ಒಂದೇ ಎಂಬ ಭಾವ ಮೂಡುತ್ತದೆ. 

ಟಿಪ್ಪು ಸುಲ್ತಾನ ಮೈಸೂರ ಮಹಾರಾಜರು ಸಾರ್ವಜನಿಕರಿಗಾಗಿ ಕೆರೆ, ಕಾಲುವೆಗಳನ್ನು, ರಸ್ತೆಗಳ ನಿಮರ್ಾಣ ಮಾಡಿದ್ದಾರೆ. ಇಂತಹ ಸುಧಾರಣೆಗಳನ್ನು ಮಾಡಿರುವದರಿಂದಲೆ ಇಂದಿಗೂ ಇವರು ಮಾಡಿದ ಜನಪರ ಕಾರ್ಯಗಳು ಶಾಶ್ವತವಾಗಿ ಜನಮಾನಸದಲ್ಲಿ ಉಳಿದಿವೆ. ಮೈಸೂರು ಪ್ರದೇಶ ಇಂದಿಗೂ ಅಭಿವೃದ್ದಿಯತ್ತ ಸಾಗಿದೆ. ಇತಿಹಾಸಕಾರರನ್ನು ಗೌರವಿಸಬೇಕಾಗಿರುವದು ಮಾನವೀಯ ಸಮುದಾಯದ ಕರ್ತವ್ಯ. ಜಗತ್ತಿಗೆ ಈ ದೇಶಕ್ಕೆ ಇಂತಹ ಮಾಹಾನ ಪುರಷರು ಅವರು ನೀಡಿದ ಕೋಡುಗೆ ಏನು ಎಂಬುದನ್ನು ಅರಿಯಬೇಕು. ಕನರ್ಾಟಕ 6 ಕೋಟಿ ಜನತೆಯನ್ನು ಭಾವನೆಗಳಿಗೆ ಸ್ಪಂದಿಸಬೇಕಾಗಿರುವದು ಸರಕಾರದ ಆದ್ಯ ಕರ್ತವ್ಯ ಸಮಾಜದಲ್ಲಿ ಎಲ್ಲ ಜನಾಂಗವನ್ನು ಸರ್ವ ಸಮಾಜವನ್ನು ಗೌರವಿಸಿದ್ದು, ನಮ್ಮ ಸರಕಾರ ಎಂದು ಹೆಮ್ಮೆಯಿಂದ ಹೇಳಿದರು.

ತಾಲೂಕಿನ ಸವರ್ಾಂಗೀಣ ಅಭಿವೃದ್ದಿಗೆ ಅನೇಕ ಸಾವಿರಾರು ಕೋಟಿ ಅನುಧಾನವನ್ನು ಹಿಂದಿನ ಕಾಂಗ್ರೇಸ್ ಸರಕಾರದ ಅವಧಿಯಲ್ಲಿ ತಂದು ಸರ್ವವಿಧದ ಸುಧಾರಣೆ ಮಾಡಿ ಸುವಣರ್ಾಕ್ಷರಗಳಿಂದ ಬರೆಯುವಂತೆ ಮಾಡಿರುವೆ ಎಂದರು. 

ಇಂದು ತಾಲೂಕಿನಲ್ಲಿ ಭೀಕರ ಬರಗಾಲ ಸಂಭವಿಸಿ ಜನ ಜಾನುವಾರಗಳಿಗೆ ಕುಡಿಯುವ ನೀರಿನ ಅಭಾವ ಸಂಭವಿಸುವ ನಿರೀಕ್ಷೆ ಇರುವದರಿಂದ ತಾಲೂಕಾ ಆಡಳಿತ ಅಧಿಕಾರಿಗಳಿಗೆ ಯಾವುದೇ ರೀತಿಯಿಂದ ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲು ತಿಳಿಸಿರುವಾಗಿ ಹೇಳಿದರು.

ಡಾ. ವ್ಹಿ.ಎಮ್.ಬಾಗಾಯತ್ ಉಪನ್ಯಾಸ ನೀಡಿದರು.

ತಾ.ಪಂ ಅಧ್ಯಕ್ಷ ಶೇಖರ ನಾಯ್ಕ, ಎ.ಪಿ.ಎಂ.ಸಿ ಅಧ್ಯಕ್ಷ ಎಸ್.ಎಸ್.ಚನಗೊಂಡ, ಉಪ ಕಂದಾಯ ಅಧಿಕಾರಿ ಡಾ. ಆನಂದ ಕೆ. ಪೊಲೀಸ ಉಪವಿಭಾಗಾಧಿಕಾರಿ ಎಮ್.ಬಿ.ಸಂಕದ, ಅಂಜುಮನ್ ಸಂಸ್ಥೆಯ ಅಧ್ಯಕ್ಷ ಅಯೂಬ ಬಾಗವಾನ, ಇಲಿಯಾಸ ಬೋರಾಮಣಿ ವೇದಿಕೆಯಲ್ಲಿದ್ದರು.

ತಹಶೀಲ್ದಾರ ಡಾ.ಸತೀಶ ಉಲ್ಲಾಳ, ತಾಲೂಕಾ ಪಂಚಾಯತ ಅಧಿಕಾರಿ ಡಾ.ವಿಜಯಕುಮಾರ ಆಜೂರ, ಜಿ.ಪಂ ಇಇ ರಾಜಕುಮಾರ ತೋರವಿ, ಬಿ.ಎಫ್.ನಾಯ್ಕರ, ಪಶು ಇಲಾಖೆ ವೈಧ್ಯಾಧಿಕಾರಿ ಸಿ.ಬಿ.ಕುಂಬಾರ, ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ.ಬಿಂಗೇರಿ, ಲೋಕೋಪಯೋಗಿ ಇಲಾಖೆ ಅಧಿಕಾರಿ ಎಸ್.ಎಸ್.ಕತ್ತಿ, ನೌಕರ ಸಂಘದ ಅಧ್ಯಕ್ಷ ಬಸವರಾಜ ರಾವೂರ, ಜಾವೀದ ಮೂಮಿನ, ಪ್ರಥಮ ದಜರ್ೆಯ ಗುತ್ತಿಗೆದಾರ ಅತೀಕ ಮೂಮಿನ್, ಮುಸ್ತಾಕ ಇಂಡಿಕರ್, ಅಯೂಬ ನಾಟಿಕಾರ ರೈಸ ಅಷ್ಠೆಕರ್, ಮುಕ್ತಾರ ಟಾಂಗೆವಾಲೆ, ಅದಂ ಅಗರಖೇಡ, ಬಿ.ಬಿ.ಬಿರಾದಾರ,ಪ್ರಶಾಂತ ಕಾಳೆ, ಕಲ್ಲು ಅಂಜುಟಗಿ, ಪಾಂಡು ರಾಠೋಡ, ಭೀಮಣ್ಣಾ ಕೌಲಗಿ, ಹರೀಶ್ಚಂದ್ರ ಪವಾರ, ಮಹೇಶ ಹೊನ್ನಬಿಂದಗಿ, ಜೈನುದೀನ ಭಾಗವಾನ, ಮುನ್ನಾ ಡಾಂಗೆ, ಯಾಕೂಬ ನಾಟಿಕಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮುಖಂಡರು ಇದ್ದರು.