ಲೋಕದರ್ಶನ ವರದಿ
ಶಿರಹಟ್ಟಿ 05: ಕೇಂದ್ರ ಸಕರ್ಾರ ಇಷ್ಟು ವರ್ಷಗಳ ಕಾಲ ಜಮ್ಮು-ಕಾಶ್ಮೀರಕ್ಕೆ ನೀಡುತ್ತಿದ್ದ ವಿಶೇಷ ಸ್ಥಾನಮಾನ ಹಾಗೂ ಅಧಿಕಾರವನ್ನು ಕಲಂ 370 ಮತ್ತು 35ಎ ರದ್ದುಗೊಳಿಸಿರುವುದು ಬಹಳ ಸಂತಸದ ವಿಷಯ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸೋಮುವಾರ ಬಿಜೆಪಿ ಕಾರ್ಯಕರ್ತರು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ-ಅಧಿಕಾರದ ಕಾಯ್ದೆಯನ್ನು ರದ್ದುಪಡಿಸಿದ ಹಿನ್ನಲೆ ಸಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚಾರಣೆ ಆಚರಿಸಿ ಮಾತನಾಡಿದರು. ಭಾರತ ದೇಶಕ್ಕೆ ಸೋಮುವಾರ ಎರಡನೇ ಭಾರಿ ಸ್ವಾತಂತ್ರ ಸಿಕ್ಕಂತಾಗಿದೆ. ಅಖಂಡ ಭಾರತದ ಕನಸ್ಸು ಕಂಡ ಪಂಡಿತ್ ದೀನ ದಯಾಳ, ಸದರ್ಾರ್ ವಲ್ಲಭಭಾಯ ಪಟೇಲ್, ನರೇಂದ್ರ ಮೋದಿ ಅವರ ಕನಸ್ಸು ನೆನಸಾಗಿದೆ. ಮತ್ತು ಒಂದೇ ದೇಶ, ಒಂದೇ ಸಂವಿದಾನ, ಒಂದೇ ಪ್ರಧಾನಿ ಆಡಳಿತ ನಡೆಸುವ ದೇಶ ನಿಮರ್ಾಣವಾಗಿದೆ. ದೇಶದ ಎಲ್ಲಾ ರಾಜ್ಯಗಳಿಗೆ ಸಿಗುತ್ತಿದ್ದ ಸ್ಥಾನಮಾನ ಹಾಗೂ ಅಧಿಕಾರ ಜಮ್ಮು-ಕಾಶ್ಮೀರ ರಾಜಕ್ಕೂ ಅನ್ವಯವಾಗಲಿದೆ. ಆದ್ದರಿಂದ ದೇಶವಾಸಿಗಳಿಗೆ ಸಂಪೂರ್ಣ ಸ್ವಾತಂತ್ರ ಸಿಕ್ಕಂತಾಗಿದೆ ಎಂದು ಹೇಳಿದರು.
ನಂತರ ಆರ್ಎಸ್ಎಸ್ ರಾಜ್ಯ ಸಂಚಾಲಕ ಶ್ರೀನಿವಾಸ ನರಗುಂದೆ ಮಾತನಾಡಿ. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ, ಅಧಿಕಾರ ರದ್ದುಗೊಳಿಸಿದ ಆದೇಶಕ್ಕೆ ರಾಷ್ಟ್ರಪತಿ ರಮಾನಥ್ ಕೋವಿಂದ್ ಅಂಕಿತ ಹಾಕಿದ್ದಾರೆ. ಇನ್ಮೂಂದೆ ಭಾರತ ಸಕರ್ಾರದ ಎಲ್ಲ ಕಾನೂನುಗಳು ಜಮ್ಮು-ಕಾಶ್ಮೀರಕ್ಕೂ ಅನ್ವಯವಾಗಲಿದ್ದು, ರಾಜ್ಯದ ಜನರು ಅಲ್ಲಿ ಹೋಗಿ ಬದುಕಲು ಅವಕಾಶ ಇದೆ, ಆಸ್ತಿ, ಪಾಸ್ತಿಯನ್ನು ಖರೀದಿಸಬಹುದು, ಮತ್ತು ಇಷ್ಟು ವರ್ಷಗಳ ಕಾಲ 6ವರ್ಷಕ್ಕೊಂಮೆ ಜಮ್ಮು-ಕಾಶ್ಮೀರದಲ್ಲಿ ಚುನಾವಣೆ ನಡೆಸಲಾಗುತ್ತಿತ್ತು. ಆದರೆ ಇನ್ಮೂಂದೆ 5 ವರ್ಷಕ್ಕೆ ನಡೆಸಲಾಗುತ್ತದೆ. ಅಲ್ಪಸಂಖ್ಯಾತರಿಗೂ ಮೀಸಲಾತಿ ಸಿಗುತ್ತದೆ. ಆದ್ದರಿಂದ ಎಲ್ಲ ರಾಜ್ಯದ ಜನರಂತೆ ಜಮ್ಮು-ಕಾಶ್ಮೀರದ ಜನರು ಸಹ ಸುಖ ಸಂತೋಷದಿಂದ ಜೀವನ ನಡೆಸಬಹುದು ಎಂದು ಹೇಳಿದರು.
ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ರಾಮಣ್ಣ ಡಂಬಳ, ವೀರುಪಾಕ್ಷಪ್ಪ ಅಣ್ಣಿಗೇರಿ, ಗೂಳಪ್ಪ ಕರಿಗಾರ, ನಾಗರಾಜ ಲಕ್ಕುಂಡಿ, ಶಶಿಧರ ರಾನಡೆ, ವೀರಣ್ಣ ಮಜ್ಜಗಿ, ಫಕ್ಕೀರೇಶ ರಟ್ಟಿಹಳ್ಳಿ, ಪರಶುರಾಮ ಡೊಂಕಬಳ್ಳಿ, ಮಹಾದೇವಪ್ಪ ಗಾಣಿಗೇರ, ಶ್ರೀನಿವಾಸ ಬಾರಬಾರ, ಅನಿಲ ಮಾನೆ, ಸುರೇಶ ಅಕ್ಕಿ, ಚಾಂದಸಾಬ ತಹಶೀಲ್ದಾರ, ಅಕ್ಬರ ಯಾದಗೇರಿ, ಯಲ್ಲಪ್ಪ ಇಂಗಳಗಿ, ಈರಣ್ಣ ಕೋಟಿ, ಫಕ್ಕೀರೇಶ ಡಂಬಳ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.