ಬೆಂಗಳೂರು, ನ.23- ದೇಶ, ಶೀಘ್ರ ಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದ್ದು, ಬಲಿಷ್ಠ ಆಥರ್ಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ.ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಶ್ರೀ ಸತ್ಯಸಾಯಿ ಲೋಕಸೇವಾ ಸಂಸ್ಥೆಯಲ್ಲಿಂದು ಆಯೋಜಿಸಿದ್ದ ವಿಶ್ವ ಯುವ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದ ಜನಸಂಖ್ಯೆಯಲ್ಲಿ ಶೇಕಡಾ 65ರಷ್ಟು ಜನರು 35 ವರ್ಷದೊಳಗಿನವರಿದ್ದಾರೆ. ಈ ಯುವ ಜನಾಂಗವೇ ಭಾರತದ ಭವಿಷ್ಯ. ಅವರ ಜ್ಞಾನ, ಪರಿಕಲ್ಪನೆ, ಭರವಸೆ, ಸಮಸ್ಯೆ ಎದುರಿಸುವ ಸಾಮಥ್ರ್ಯ ಮುಂತಾದ ಅಂಶಗಳು ಭಾರತದ ಭವಿಷ್ಯವನ್ನು ಬದಲಾಯಿಸುವುದರೊಂದಿಗೆ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಿದೆ ಎಂದು ಹೇಳಿದರು.ಯುವಕರು ಉನ್ನತ ಗುರಿಗಳನ್ನು ಇಟ್ಟುಕೊಂಡು ಅವುಗಳ ಈಡೇರಿಕೆಗೆ ಪರಿಶ್ರಮ ಪಡಬೇಕು. ಸಕರ್ಾರ ಕೂಡ ಉತ್ತಮ ನೀತಿಗಳನ್ನು ಜಾರಿಗೆ ತರುತ್ತಿದೆ ಎಂದು ಹೇಳಿದರು.
ಏಳು ಮಂದಿ ಸಾಧಕರಿಗೆ ಶ್ರೀ ಸತ್ಯಸಾಯಿ ಅವಾಡರ್್ ಫಾರ್ ಹ್ಯೂಮನ್ ಎಕ್ಸಲೆನ್ಸ್ ಪ್ರಶಸ್ತಿ ನೀಡಿ ಗೌರವಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇಂದು ಪವಿತ್ರ ಕಾತರ್ಿಕ ಪೂಣರ್ಿಮಾ ದಿನವಾಗಿದ್ದು, ಇದು ಕತ್ತಲಿನಿಂದ ಬೆಳಕಿಗೆ ಬರುವುದನ್ನು ಸಂಕೇತಿಸುವ ದಿನವಾಗಿದೆ. ಭಾರತದ ಆಧಾತ್ಮಿಕ ಪರಂಪರೆಯಲ್ಲಿ ಹೆಸರು ಗಳಿಸಿದ ಇಬ್ಬರು ಮಹಾನ್ ವ್ಯಕ್ತಿಗಳ ಜನ್ಮ ದಿನ ಕೂಡ ಇಂದೇ ಆಗಿದೆ. ಮಾನವೀಯತೆ ಸಂದೇಶ ಸಾರಿದ ಶ್ರೀ ಸತ್ಯ ಸಾಯಿ ಬಾಬಾ ಮತ್ತು ಗುರು ನಾನಕ್ ಅವರಿಗೆ ಗೌರವಪೂರ್ಣ ನಮನ ಸಲ್ಲಿಸುತ್ತೇನೆ. ಅವರ ತತ್ವಾದರ್ಶನಗಳು ಇಂದು ಹಾಗೂ ಭವಿಷ್ಯದಲ್ಲೂ ಪ್ರಸ್ತುತವಾಗಿದೆ ಎಂದು ಬಣ್ಣಿಸಿದರು.
ಸಾಯಿ ಬಾಬಾ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾದುದು. ಅವರ ಹೆಸರಿನಲ್ಲಿ ಟ್ರಸ್ಟ್ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಲಕ್ಷಾಂತರ ಜನರಿಗೆ ನೆರವು ನೀಡುತ್ತಿದೆ. ಅಪೌಷ್ಟಿಕತೆ ತೊಲಗಿಸುವ ಕೆಲಸದಲ್ಲೂ ತೊಡಗಿಸಿಕೊಂಡಿದೆ. ಈ ಎಲ್ಲಾ ಸಾಮಾಜಿಕ ಕಾರ್ಯಗಳು ಅಭಿನಂದನೀಯ ಎಂದು ಹೇಳಿದರು.ರಾಜ್ಯಪಾಲ ವಜುಬಾಯಿ ವಾಲಾ, ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ, ಮಾಜಿ ಕ್ರಿಕೆಟಿಗ ಸುನೀಲ್ ಗಾವಸ್ಕರ್ ಮತ್ತಿತರರು ಪಾಲ್ಗೊಂಡಿದ್ದರು.