ಭಾರತ ಸೌದಿ ಅರೇಬಿಯಾ ಹಜ್ ಯಾತ್ರೆ 175,025 ಒಪ್ಪಂದಕ್ಕೆ ಸಹಿ
ಸಿರುಗುಪ್ಪ 15 ಹಜ್ ಯಾತ್ರೆಗೆ ಸಂಬಂಧಿಸಿದಂತೆ ಸೌದಿ ಅರೇಬಿಯಾದೊಂದಿಗೆ ಭಾರತ ಸೋಮವಾರ ಒಪ್ಪಂದಕ್ಕೆ ಸಹಿ ಹಾಕಿದೆ ಈ ಒಡಂಬಡಿಕೆ ಪ್ರಕಾರ ಭಾರತದ ಹಜ್ ಯಾತ್ರಿಕರ ಸಂಖ್ಯೆಯನ್ನು 1,75,025 ಕ್ಕೆ ಅಂತಿಮ ಗೊಳಿಸಲಾಗಿದೆ ಭಾರತ ಸರ್ಕಾರದ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವರಾದ ಕಿರಣ್ ರಿಜಿಜೂ ಮತ್ತು ಸೌದಿ ಅರೇಬಿಯಾದ ಹಜ್ ಸಚಿವರಾದ ತೌಫಿಕ್ ಬಿನ್ ಫೌ ಜಾನ್ ಅಲ್ ರಬೀಯಾ ಜಡ್ಡದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು ನಮ್ಮ ದೇಶದ ಹಜ್ ಯಾತ್ರಿಕರಿಗೆ ಎಲ್ಲಾ ಸೇವೆಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ ಎಂದು ರೀಜೀಜು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಹೇಳಿ ಪ್ರಕಟಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಮಾಜಿ ಬಳ್ಳಾರಿ ಜಿಲ್ಲಾ ಸದಸ್ಯರಾದ ಅಲ್ ಹಾಜ್ ಎ ಅಬ್ದುಲ್ ನಬಿ ಚಿಸ್ತಿ ನಿಜಾಮಿ ಅವರು ತಿಳಿಸಿದ್ದಾರೆ.