ನವದೆಹಲಿ 29: ಪಾಕಿಸ್ತಾನದ ಜನರ ವಿರುದ್ಧ ಭಾರತ ಜಗಳ ತೆಗೆಯುವುದಿಲ್ಲ; ನಮ್ಮ ಹೋರಾಟ ಏನಿದ್ದರೂ ಭಯೋತ್ಪಾದನೆಯ ವಿರುದ್ಧ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ. "ರಿಪಬ್ಲಿಕ್ ಭಾರತ್ ನೊಂದಿಗೆ ಸಂದರ್ಶನ ನೀಡಿದ ಅವರು, ಭಾರತದ ಕಾಳಜಿಯ ಪ್ರಕಾರ, ಪಾಕಿಸ್ತಾನ ಭಯೋತ್ಪಾದನೆಯ ವಿರುದ್ಧ ಹೋರಾಟ ನಡೆಸದೆ ಬೇರೆ ದಾರಿ ಇಲ್ಲ, ಭಯೋತ್ಪಾದಕರ ವಿರುದ್ಧ ನಿದರ್ಿಷ್ಟ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ಪಾಕಿಸ್ತಾನದ ಜನರೊಂದಿಗೆ ನಮಗೆ ಜಗಳವಿಲ್ಲ. ಇಂದಿಗೂ ನಮಗೆ ಅವರೊಂದಿಗೆ ಜಗಳವಿಲ್ಲ ಎಂದು ಮೋದಿ ಹೇಳಿದ್ದಾರೆ. ನಾವು ಎಲ್ಲಾ ಪಟ್ಟಿಗಳನ್ನು ನೀಡಿದ್ದೇವೆ, 26/1ರ ಟೇಪ್ಗಳನ್ನು ನೀಡಿದ್ದೇವೆ, ದಾಳಿಯ ಸೂತ್ರಧಾರಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಅವರನ್ನು ನಮಗೆ ಹಸ್ತಾಂತರಿಸಬೇಕು. ನಾವು ಇದಕ್ಕಾಗಿ ಕಾನೂನು ಪ್ರಕ್ರಿಯೆ ನಡೆಸುತ್ತೇವೆ. ದಾಳಿಯನ್ನು ನಾವೇ ಮಾಡಿದ್ದೇವೆ ಎಂದು ಜೈಷೆ ಇ-ಮುಹಮ್ಮದ್ ಒಪ್ಪಿಕೊಂಡಿದೆ. ಆದರೂ ನೀವು (ಪಾಕಿಸ್ತಾನ) ಕ್ರಮಕೈಗೊಂಡಿಲ್ಲ" ಎಂದು ಪ್ರಧಾನಿ ಹೇಳಿದರು. ಪ್ರತಿಯೊಂದು ಭಯೋತ್ಪಾದಕ ದಾಳಿಯ ಬಳಿಕ ಪಾಕಿಸ್ತಾನ, ಉಗ್ರರ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡುತ್ತದೆ. ಆದರೆ ಬಳಿಕ ಕ್ರಮತೆಗೆದುಕೊಳ್ಳುವುದೇ ಇಲ್ಲ. ಈಗ ಅವರ ಬಲೆಗೆ ಬೀಳಲು ನಾನು ಬಯಸುವುದಿಲ್ಲ ಎಂದು ಮೋದಿ ಹೇಳಿದರು. ಪ್ರಾಕಿಸ್ತಾನದ ಪ್ರಜೆಗಳಿಗೂ ಅಲ್ಲಿನ ಪ್ರಧಾನಮಂತ್ರಿಯವರ ಹೇಳಿಕೆಯ ಮೇಲೆ ವಿಶ್ವಾಸವಿಲ್ಲದಂತಾಗಿದೆ ಎಂದು ಹೇಳಿದರು.
ನರೇಂದ್ರ ಮೋದಿಯವರ ದೇಶಭಕ್ತಿಯ ಬಗ್ಗೆ ದೇಶದ ಯಾವೊಬ್ಬ ಪ್ರಜೆಯೂ ಅನುಮಾನಿಸಬಾರದು. ಅದನ್ನು ಯಾರು ಪ್ರಶ್ನಿಸಬಾರದು ಎಂದು ಪ್ರಶ್ನೆಯೊಂದಕ್ಕೆ ಮೋದಿ ಉತ್ತರಿಸಿದರು, ಹಿಂದಿನ ಎಲ್ಲಾ ಕಾಂಗ್ರೆಸ್ ಸಕರ್ಾರಗಳು, ರಕ್ಷಣಾ ಒಪ್ಪಂದಗಳನ್ನು ಎಟಿಎಂ ತರ ಬಳಸಿಕೊಂಡಿತ್ತು ಎಂದು ಆರೋಪಿಸಿದರು. ರಕ್ಷಣಾ ಒಪ್ಪಂದವನ್ನು ಪಾರದರ್ಶಕವಾಗಿ ನಡೆಸಬಹುದು ಎಂಬ ಕಲ್ಪನೆಯೂ ಅವರಿಗಿರಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದರು.ನಮ್ಮ ರಕ್ಷಣಾ ಒಪ್ಪಂದ ಸಕರ್ಾರ ಮತ್ತು ಸಕರ್ಾರಗಳ ನಡುವೆ ನಡೆದ ಒಪ್ಪಂದವಾಗಿದ್ದು, ಇದರಲ್ಲಿ ಪಾರದರ್ಶಕತೆ ಇದೆ ಎಂದು ಪ್ರಧಾನಿ ಮೋದಿ ಹೇಳಿದರು.