ಬೆಳಗಾವಿ 17- ಹಿರಿಯ ಸ್ವತಂತ್ರ್ಯ ಹೋರಾಟಗಾರ ಸೋಮಲಿಂಗ ಮಳಗಲಿಯವರ ನೇತೃತ್ವದಲ್ಲಿದ್ದ ಬೆಳಗಾವಿ ಜಿಲ್ಲಾ ಸ್ವಾತಂತ್ರ್ಯ ಸೇನಿಕರ ಗೃಹ ನಿಮರ್ಾಣ ಸಹಾಕರಿ ಸಂಘದ ಪುನರ್ ಜೀವನ ಹಾಗೂ ಸ್ವಾತಂತ್ರ್ಯ ಸೈನಿಕ ವಿಠ್ಠಲ ಯಾಳಗಿಯವರ ಸನ್ಮಾನ ಕಾರ್ಯಕ್ರಮವನ್ನು ಇದೇ ದಿ. 15 ರಂದು ತಿಳಕವಾಡಿ ಕಾಲೇಜ ರಸ್ತೆಯಲ್ಲಿರುವ ಬೆಳಗಾವಿ ಜಿಲ್ಲಾ ಸ್ವಾತಂತ್ರ್ಯ ಸೈನಿಕ ಹಾಗೂ ಉತ್ತರಾಧಿಕಾರಿಗಳ ಸಂಘದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಬೆಳಗಾವಿ ಜಿಲ್ಲಾ ಸ್ವಾತಂತ್ರ್ಯ ಸೈನಿಕ ಹಾಗೂ ಉತ್ತರಾಧಿಕಾರಿಗಳ ಸಂಘದ ಮಾಜಿ ಅಧ್ಯಕ್ಷ ವಿಠ್ಠಲರಾವ ಯಾಳಗಿ, ನೂತನ ಅದ್ಯಕ್ಷರಾದ ರಾಜೇಂದ್ರ ಕಲಘಟಗಿ ಉಪಾಧ್ಯಕ್ಷರುಗಳಾದ ಕಿರಣ ಬೇಕವಾಡ, ನ್ಯಾಯವಾದಿಗಳಾದ ರಾಮ ಅಪ್ಟೆ, ಇವರಿಗೆ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ಪ್ರಾಚಾರ್ಯ ಆನಂದರಾವ ಮೋಕಾಶಿ, ಪ್ರಾ. ವಿನೋದ ಗಾಯಕವಾಡ, ಕಿಶೋರ ಕಾಕಡೆ, ನ್ಯಾಯವಾದಿ ರಾಮ ಅಪ್ಟೆ, ಮಾಜಿ ಶಾಸಕರಾದ ಪಿ. ಬಿ. ನಂದಿಹಳ್ಳಿ, ಮಾಜಿ ಮಹಾಪೌರರಾದ ನಾಗೇಶರಾವ ಸಾತೇರಿ ಮಾತನಾಡಿ ತಮ್ಮ ತಮ್ಮ ವಿಚಾರಗಳನ್ನು ಹಂಚಿಕೊಂಡರು.
ಜಿಲ್ಲಾ ಸ್ವಾತಂತ್ರ್ಯ ಸೇನಿಕರ ಗೃಹ ನಿಮರ್ಾಣ ಸಹಾಕರಿ ಸಂಘದ ಪುನರಜ್ಜೀವನಗೊಳಿಸುವ ನಿರ್ಧಾ ರ ಮಾಡಿ ಈ ಸಂಸ್ಥೆಯನ್ನು ಮುಂದೆವರಿಸಿ ಕಾರ್ಯಕಲಾಪಗಳನ್ನು ಜರಗಿಸುವ ಕುರಿತಂತೆ ಸುಭಾಷ ಹೊನಗೇಕರ, ಎಸ್. ಕೆ. ಪಾಟೀಲ, ಮಲ್ಲಿಕಾಜರ್ುನ ಧಡೇದ ತಮ್ಮ ಮನದಾಳದ ಮಾತುಗಳನ್ನು ವ್ಯಕ್ತಪಡಿಸಿದರು. ಗೃಹ ನಿಮರ್ಾಣ ಸಂಸ್ಥೆಯ ಎಲ್ಲ ಕಾಗದ ಪತ್ರಗಳನ್ನು ಸೋಮಲಿಂಗ ಮಳಗಲಿಯವರ ಪರವಾಗಿ ಬಂದಿದ್ದ ಮೋಹನ ಸವಣೂರ ಇವರು ಸುಭಾಷ ಎಸ್ ಹೊನಗೇಕರ ಇವರಿಗೆ ಇವರಿಗೆ ಹಸ್ತಾಂತರಿಸಿದರು.
ಜಾಯಿಂಟ್ಸ ಗ್ರುಫ್ಸ ಮತ್ತು ಸಖಿ ಮಹಿಳಾ ಮಂಡಳ, ಸಾಮ್ಯವಾದಿ ಪರಿವಾರ, ಹುತಾತ್ಮಾ ಚೌಕ ಸುಧಾರಣಾ ಮಂಡಳ, ಮಧ್ಯವತರ್ಿ ಕುಸ್ತಿಗರ ಸಂಘಟನೆ, ಪರಿವರ್ತನಾ ಸಂಸ್ಥೆ, ಮರಾಠಿ ಪತ್ರಕರ್ತರ ಸಂಘ, ಕೃಷ್ಣಾ ಮೆಣಸೆ ಪುರೋಗಾಮಿ ವ್ಯಾಸಪೀಠ, ಗ್ರಾಮೀಣ ಮರಾಠಿ ಸಾಹಿತ್ಯ ಸಮ್ಮೇಳನ, ನೇತಾಜಿ ಯುವಕ ಮಂಡಳ, ಸಿದ್ಧಾರ್ಥ ಫ್ರೀ ಬೋಡರ್ಿಂಗ್, ಮರಾಠಾ ಸಮಜಾ ಸುಧಾರಣಾ ಮಂಡಳಿ, ಜೀವನ ವಿವೇಕ ಸಂಸ್ಥೆ, ಅಂಧಾಶ್ರದ್ಧಾ ನಿಮರ್ೂಲನ ಸಮಿತಿ, ನವಹಿಂದ ಸಹಕಾರಿ ಸಂಘ ಮುಂತಾದ ಸಂಘಸಂಸ್ಥೆಗಳಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವು.
ಕಾರ್ಯಕ್ರಮ ಯಶಸ್ವಿಗೊಳ್ಳಲು ಪ್ರತಾಪ ಕಾರೇರು, ಅರುಣ ಚಿವಟೆ, ಪವಿತ್ರಾ ಹಿರೇಮಠ, ಶಿವಾಜಿರಾವ ಕದಮ, ಸಚೀನ ಜಾದವ ಮುಂದಾಗಿ ಶ್ರಮಿಸಿದರು.