ಹಸಿರೇಲೆ ಗೊಬ್ಬರ ಬೆಳೆಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಳ: ವಿರೇಶ

ಕೊಪ್ಪಳ 07: ಹಸಿರೇಲೆ ಗೊಬ್ಬರ ಬೆಳೆಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ ಎಂದು ಕೊಪ್ಪಳ ಕೃಷಿ ಇಲಾಖೆ ಉಪ ನಿದರ್ೇಶಕರಾದ ವಿರೇಶ ಹುನಗುಂದ ಹೇಳಿದರು.   

ಆತ್ಮ ಯೋಜನೆ ಕೃಷಿ ಇಲಾಖೆ ಹಾಗೂ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಸಹಯೋಗದಲ್ಲಿ ವಿಶ್ವ ಮಣ್ಣು ಆರೋಗ್ಯ ದಿನಾಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಮನುಷ್ಯನ ಆರೋಗ್ಯ ಕೆಟ್ಟರೆ ಡಾಕ್ಟರ್ ಹತ್ತಿರ ಹೋಗಿ ಔಷದಿ ಮತ್ತು ಮಾತ್ರೆಗಳನ್ನು ತೆಗೆದು ಕೂಡ ಆರೋಗ್ಯ ಸುಧಾರಿಸಿಕೊಳ್ಳುತ್ತೇವೆ. ಅದೇ ರೀತಿ ನಮ್ಮ ಹೊಲಗಳಲ್ಲಿನ ಮಣ್ಣಿನ ಆರೋಗ್ಯ ಕೂಡಾ ದಿನದಿಂದ ದಿನಕ್ಕೆ ಕೆಡತಾ ಇದ್ದು, ಅದಕ್ಕೆ ಚಿಂತನೆ ಮಾಡಬೇಕಾಗಿದೆ.  ರೈತರು ತಮ್ಮ ಹೊಲದಲ್ಲಿನ ಮಣ್ಣು ಪರೀಕ್ಷೆ ಮಾಡಿ ನಂತರ ವಿಜ್ಞಾನಿಗಳ ಸಿಫಾರಸ್ಸು ಮಾಡಿದಷ್ಟು ಮಾತ್ರ ರಾಸಾಯನಿಕ ಗೊಬ್ಬರಗಳ ಬಳಕೆ ಮಾಡಬೇಕು.  ಹಿಂದಿನ ಕಾಲದಲ್ಲಿ ಮನೆಗಳಲ್ಲಿ ಸಾಕು ಜಾನುವಾರುಗಳಾದ ಆಕಳ, ಎಮ್ಮೆ, ಏತ್ತು ಇರುತ್ತಿದ್ದವು.  ಆದ್ದರಿಂದ ಬಂದ ಸಗಣಿಯಿಂದ ಸಾಕಷ್ಟು ಪ್ರಮಾಣದಲ್ಲಿ ಸಾವಯವ ಗೋಬ್ಬರ ಉತ್ಪಾದನೆ ಆಗುತ್ತಿತ್ತು.  ಪ್ರಸ್ತುತ ಮನೆಗಳಲ್ಲಿ ಸಾಕು ಪ್ರಾಣಿಗಳ ಸಂಖ್ಯೆ ಕೂಡ ಕಡಿಮೆಯಾಗಿದೆ.  ಹೀಗಾಗಿ ಹೊಲಗಳಲ್ಲಿ ಹಸಿರೇಲೆ ಗೊಬ್ಬರ ಬೆಳೆಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ.  ಹೀಗೆ ಮಾಡುವುದರಿಂದ ಮಣ್ಣಿನ ಆರೋಗ್ಯ ಕಾಪಾಡಿಕೋಳ್ಳಬಹುದು ಎಂದು ಕೊಪ್ಪಳ ಕೃಷಿ ಇಲಾಖೆ ಉಪ ನಿದರ್ೇಶಕರಾದ ವಿರೇಶ ಹುನಗುಂದ ಹೇಳಿದರು.   

ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ವಿಸ್ತರಣಾ ಮುಂದಾಳು ಡಾ. ಎಮ್.ಬಿ. ಪಾಟೀಲ್ ಮಾತನಾಡಿ, ರೈತರು ಮಣ್ಣಿನ ಆರೋಗ್ಯ ಕಾಪಾಡಿದರೆ ಉತ್ತಮ ಬೆಳೆ ಬರುತ್ತದೆ.  ಕೃಷಿಯ ವಿವಿಧ ಬೆಳೆವಣಿಗೆಗೆ ಮಣ್ಣಿನ ಪ್ರಾಮುಖ್ಯತೆ ಬಗ್ಗೆ ಇದೇ ಸಂದರ್ಭದಲ್ಲಿ ತಿಳಿಸಿ ವರ್ಷವಿಡೀ ಮಣ್ಣಿನ ದಿನಾಚಾರಣೆ ನಡೆಯಬೇಕು ಎಂಬ ಅಭಿಪ್ರಾಯ ಪಟ್ಟರು.   

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿರುಪಣ್ಣ ನವೋದಯ ಅವರು ಮಾತನಾಡಿ, ರೈತರು ತಮ್ಮಲ್ಲಿ ಕೃಷಿ ವಿಷಯ ಹಂಚಿಕೊಂಡು ಉತ್ತಮ ಬೆಳೆ ಬೆಳೆಯಬೇಕು.  ಅಲ್ಲದೇ ಇಸ್ರೇಲ್, ಮಾದರಿ ಕೃಷಿಯಲ್ಲಿ ಮಣ್ಣಿನ ಆರೋಗ್ಯ ಕಾಪಾಡುವ ವಿಧಾನಗಳ ಬಗ್ಗೆ ತಿಳಿಯಬೇಕು ಎಂದರು.  ಬದರಿ ಪ್ರಸಾದ್ ಅವರು ಸಸ್ಯ ಪೀಡೆ ನಿರ್ವಹಣೆಯಲ್ಲಿ ಮಣ್ಣಿನ ಆರೋಗ್ಯ ಮಹತ್ವ ಹಾಗೂ ಮಣ್ಣು ಮಾದರಿ ತೆಗೆಯುವ ವಿಧಾನದ ಬಗ್ಗೆ ಮಾಹಿತಿ ನೀಡಿದರು.  

ಕಾರ್ಯಕ್ರಮದಲ್ಲಿ ರಾಜ್ಯ ಕೃಷಿ ಸಮಾಜದ ಪ್ರತಿನಿಧಿ ಶಂಕರಪ್ಪ ಚೌಡಿ, ಸಹಾಯಕ ಕೃಷಿ ನಿದರ್ೆಶಕ ಮಂಜುನಾಥ ಕನ್ನಾರಿ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ತೋಟಗಾರಿಕಾ ವಿಷಯ ತಜ್ಞ ಪ್ರದೀಪ ಬಿರಾದರ, ಸಹಾಯಕ ಕೃಷಿ ಅಧಿಕಾರಿಗಳಾದ ಗೋಬ್ಬರಗುಂಪಿ, ಜೋಷಿ, ತಾಲೂಕ ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ ಶೋಭಾ ಸೇರಿದಂತೆ ಕೃಷಿ ಇಲಾಖೆಯ ಸಿಬ್ಬಂಧಿ ವರ್ಗದವರು, ರೈತರು ಹಾಗೂ ಮತ್ತಿತರರು ಭಾಗವಹಿಸಿದರು.