ಅಧ್ಯಯನದ ಜೊತೆಗೆ ಕ್ರೀಡೆಯಲ್ಲಿ ಆಸಕ್ತಿ ಹೆಚ್ಚಿಸಿಕೊಳ್ಳಿ
ಧಾರವಾಡ 18: ವಿದ್ಯಾರ್ಥಿ ಜೀವನದಲ್ಲಿ ಅಧ್ಯಯನದ ಜೊತೆಗೆ ಕ್ರೀಡೆಯಲ್ಲಿ ಆಸಕ್ತಿಯನ್ನು ಹೆಚ್ಚಿಸಿಕೊಂಡು ಉನ್ನತ ಜೀವನ ಮಟ್ಟವನ್ನು ಹೊಂದಬೇಕು ಹಾಗೂ ಒಳ್ಳೆಯ ಕ್ರೀಡಾಪಟು ಆಗಲೂ ಸತತ ಪ್ರಯತ್ನ ಮಾಡಬೇಕೆಂದು ಸಹಾಯಕ ಪೋಲಿಸ್ ಕಮೀಷನರ್ ಎಂ.ಎನ್. ರುದ್ರಪ್ಪ ವಿದ್ಯಾರ್ಥಿ ಗಳಿಗೆ ಕಿವಿಮಾತು ಹೇಳಿದರು.
ಮಾಳಮಡ್ಡಿಯ ಕೆ.ಇ.ಬೋರ್ಡ್ ನ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ವಾರ್ಷಿ ಕ ಕ್ರೀಡಾಕೂಟ ಉದ್ಘಾಟನೆ ಮಾಡಿ ಮಾತನಾಡುತ್ತ ಕ್ರೀಡೆ ಹಾಗೂ ಶಿಕ್ಷಣ ಒಂದೇ ನಾಣ್ಯದ ಎರಡು ಮುಖಗಳು. ನಾನು ಸಹಿತ ನನ್ನ ವಿದ್ಯಾರ್ಥಿ ಜೀವನದಲ್ಲಿ ಸತತ ಪ್ರಯತ್ನದಿಂದ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದೇನೆ. ವಿದ್ಯಾಥರ್ಿಗಳು ಆರೋಗ್ಯದಿಂದ ಬದುಕಬೇಕಾದರೆ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಸೋಲು ಗೆಲವು ಮುಖ್ಯವಲ್ಲ ಎಂದರು.
ಕಲಿತ ವಿದ್ಯೆ ಎಂದಿಗೂ ವ್ಯರ್ಥವಾಗುವುದಿಲ್ಲ ಕಠಿಣ ಪರಿಶ್ರಮವೇ ಸಾಧನೆಯ ಮಾರ್ಗ ವಿದ್ಯಾರ್ಥಿ ಗಳು ಬದ್ಧತೆಯಿಂದ ವಿದ್ಯಾರ್ಜನೆ ಮಾಡಲೇಬೇಕು. ದುಶ್ಚಟಗಳಿಂದ ದೂರವಿರಬೇಕೆಂದು ಕೆ.ಜಿ.ನಾಡಗೀರ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಬಾಹುಬಲಿ ಚೌಗಲಾ ವಿದ್ಯಾರ್ಥಿ ಗಳಿಗೆ ಹಿತನುಡಿದರು.
ಪ್ರಾಚಾರ್ಯ ವಸಂತ ಮುರ್ಡ್ ಶ್ವರ ಅಧ್ಯಕ್ಷತೆ ವಹಿಸಿದ್ದರು. ಎಸ್.ಜಿ.ಕಡಪಟ್ಟಿ, ಎಸ್.ಎಲ್.ಶೇಖರಗೋಳ, ಡಾ. ಸುರೇಶ ಮುಳೆ, ಜಿ.ಸಿ.ಕುಲಕರ್ಣಿ , ಎಸ್.ಎಸ್. ಅಂಗಡಿ, ಮುಂತಾದವರು ಉಪಸ್ಥಿತರಿದ್ದರು. ಹೇಮಲತಾ ಕರಿಗಾರ ನಿರೂಪಿಸಿದರು. ಕೀರ್ತಿ ಮರೆದ ಪರಿಚಯಿಸಿದರು. ಕ್ರೀಡಾ ಪ್ರತಿಜ್ಞಾ ವಿಧಿಯನ್ನು ಸಂಜಯ ಮೂಲಿಮನಿ ಬೋಧಿಸಿದರು. ಮಹೇಶ ಬೈರೂಪಗಾರ ವಂದಿಸಿದರು.
ಕ್ರಿಕೇಟಿಗ್ ಧೋನಿ ಬೆಳಗಾವಿಗೆ ಕರೆಸಿ : ವಿದ್ಯಾರ್ಥಿಗಳಿಂದ ಡಿಸಿಗೆ ವಿಭಿನ್ನ ಮನವಿ
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ 