'ವಿದ್ಯಾಥರ್ಿಗಳಲ್ಲಿ ಪರಿಸರ ಕುರಿತು ಕಾಳಜಿ ಹೆಚ್ಚಿಸಬೇಕು'

ಲೋಕದರ್ಶನ ವರದಿ

ಅಥಣಿ 23:  ವಿದ್ಯಾಥರ್ಿಗಳಲ್ಲಿ ಪರಿಸರ ಕುರಿತು ಕಾಳಜಿ ಹೆಚ್ಚಿಸಬೇಕು , ಅನವಶ್ಯಕವಾಗಿ ಉಪಯೋಗಿಸುವ ಮೋಬೈಲಗಳಿಂದ ಕೂಡ ಪರಿಸರದ ಮೇಲೆ ಹಾಗೂ ಚಿಕ್ಕ ಚಿಕ್ಕ ಪ್ರಾಣಿ ಪಕ್ಷಿಗಳ ಜೀವದ ಮೇಲೆ ಆಗುವ ದುಷ್ಪರಿಣಾಮವನ್ನು ಅಥಣಿಯ ಖ್ಯಾತ ವೈದ್ಯ ಪಿ ಪಿ ಮೀರಜ ತಿಳಿಸಿದರು, ಗಿಡ ನೆಡುವುದಷ್ಟೇ ಅಲ್ಲ ಆ ಗಿಡಮರಗಳಿಗೆ ನೀರನ್ನು ಎರೆದು ಸಮರ್ಪಕವಾಗಿ ಪೋಷಿಸಬೇಕು ಎಂದು ಕರೆಕೊಟ್ಟರು.

      ಬಳಿಕ  ಏರುತ್ತಿರುವ ಭೂಮಿಯ ಉಷ್ಣತೆಗೆ ಸಸ್ಯ ಸಂಕುಲ ಉಳಿಸಿ ಬೆಳೆಸಿ ಸಂರಕ್ಷಿಸಬೇಕು. ಪಶ್ಚಿಮ ಘಟ್ಟದಲ್ಲಿ ಕೇವಲ ರಸ್ತೆಯ ಬದಿಗಷ್ಟೇ ಅರಣ್ಯ ಸೀಮಿತವಾಗದೇ ಎಲ್ಲ ಪ್ರದೇಶಗಳಲ್ಲಿಯೂ ಅರಣ್ಯೀಕರಣವಾದಾಗ ಮಾತ್ರ ಜೀವ ಸಂಕುಲ ಉಳಿಯಲು ಸಾಧ್ಯವೆಂದು ಉಪನ್ಯಾಸಕ ಎಮ್ ಪಿ ಮೇತ್ರಿ ಅವರು ಕರೆಯಿತ್ತರು.

          ಅವರು ಸ್ಥಳೀಯ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ನಗರದ ಜೆ ಇ ಶಿಕ್ಷಣ ಸಂಸ್ಥೆಯ ಕೆ ಎ ಲೋಕಾಪೂರ ಪದವಿ ಮಹಾವಿದ್ಯಾಲಯವು ವರೆಗೆ ದತ್ತು ಗ್ರಾಮವಾದ ತಾಲೂಕಿನ ನದಿಇಂಗಳಗಾವ ಗ್ರಾಮದಲ್ಲಿ ನಡೆದಂತಹ ಎನ್ ಎಸ್ ಎಸ್ ಶಿಬಿರದಲ್ಲಿ ಹಮ್ಮಿಕೊಂಡಿರುವ ಪರಿಸರ ಹಾಗೂ ಆರೋಗ್ಯ ಸಂರಕ್ಷಣೆ ಎಂಬ ವಿಷಯದ ಉಪನ್ಯಾಸ ಸಮಾರಂಭದಲ್ಲಿ ಅತಿಥಿ ಉಪನ್ಯಾಸಕರಾಗಿ ಆಗಮಿಸಿ ಉಪನ್ಯಾಸ ನೀಡಿದ ಎಮ್ ಪಿ ಮೇತ್ರಿ ಅವರು ಮಾತನಾಡುತ್ತಾ ಅವರು ಓಝೋನ್ ಪದರವು ತೆಳುವಾಗಿ, ರಂದ್ರವಾಗಿ ಕ್ಷಿಣಿಸಲು ಪರಿಸರದ ಮಾಲಿನ್ಯವೇ ಕಾರಣವಾಗಿದ್ದು, ಇದರಿಂದ ಮಾನವನ ಬದಕು ಅಪಾಯದ ಅಂಚಿನಲ್ಲಿದೆ ಎಂದು ತಿಳಿಸಿದರು.

     ಅನಂತರ ಮಾತನಾಡಿದ ಜೆ ಇ ಶಿಕ್ಷಣ ಸಂಸ್ಥೆಯ ಕಾಯರ್ಾಧ್ಯಕ್ಷ ಅರವಿಂದರಾವ ದೇಶಪಾಂಡೆ ಮಾತನಾಡುತ್ತಾ ಡಾ ಶಿವಕುಮಾರ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸುತ್ತಾ ನಾವುಗಳೆಲ್ಲರೂ ಶಾಲೆ ಮತ್ತು ದೇವಸ್ಥಾನಗಳ ಆವರಣದಲ್ಲಿ ಸಸಿ ನೇಡುವುದ ಮುಂತಾದ ಕಾರ್ಯಗಳ ಬಗ್ಗೆ ಎಲ್ಲರಿಲ್ಲಿ ಸೂಕ್ತ ಮನೋಭಾವನೆ ಮೂಡಿಸುವುದು ಈ ಶಿಬಿರದ ಉದ್ದೇಶವಾಗಿದೆ ಎಂದು ತಿಳಿಸಿದರು.

         ಈ ಸಂದರ್ಭದಲ್ಲಿ ಸತೀಶ ಕುಲಕಣರ್ಿ, ವಿಜಯ ಕುರೆಣ್ಣವರ, ಮಲ್ಲಪ್ಪಾ ಠಕ್ಕನ್ನವರ, ಎಚ್ ಜಿ ಗಡಕರಿ, ತಮ್ಮಣ್ಣಾ ಕಿತ್ತೂರ, ಪ್ರಿಯಾಂಕಾ ಪಾಟೀಲ, ಪೂಜಾ ರಾಜಮಾನೆ, ಶ್ರದ್ದಾ ಐಗಳಿ, ಶಿಲ್ಪಾ ಕದಮ, ಭಾಗ್ಯಶ್ರೀ ಉತ್ತೂರ, ಪೂಜಾ ಕೋಲಾರ, ಸ್ವಾತಿ ಬಡಿಗೇರ, ಮೇಘಾ ಬಡಿಗೇರ, ರಾಜು ಗಡದೆ, ತೇಜಸ್ವಿನಿ ಗುಂಡಾ, ಬಸವರಾಜ ಗುರುಪಾದಗೊಳ, ಪ್ರಶಾಂತ ತೇಲಿ, ದಾನಮ್ಮಾ ಗುಣದಾಳ, ಚಿದಾನಂದ ಯಳ್ಳೂರ, ಶೀತಲ ಖೋತ, ಸಚಿನ ಬಿದರಿ, ಶಂಕರ ಕದಮ, ಅನೀಲ ಶಿಂಧೆ, ಪ್ರಕಾಶ ಹಾಲೊಳ್ಳಿ, ಆನಂದ ಬಡಿಗೇರ, ಈರಣ್ಣಾ ಕಾವೇರಿ, ಪ್ರವೀಣ ದುರ್ಗನ್ನವರ, ರೋಹಿತ ಬಂಗಾರಿ, ರಾಹುಲ ಪಾಟೀಲ, ಪುತ್ರೇಶಿ ಬೂಸರೆಡ್ಡಿ, ಪೂಣರ್ಿಮಾ ಕಾಮೋಜಿ, ಸುಜಾತಾ, ಆರತಿ ಸಂಕ್ರಟ್ಟಿ, ಲಕ್ಷ್ಮಿ ನಾಂದಣೀಕರ ಹಾಗೂ ಮುಂತಾದವರು ಉಪಸ್ಥಿತರಿದ್ದರು.