ಲೋಕದರ್ಶನ ವರದಿ
ಕಾರವಾರ 12: ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿವೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ.ಟಿ.ಜಿ.ಶಿವಶಂಕರೇಗೌಡ ಕಳವಳ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಸಹಯೋಗದಲ್ಲಿ ಶುಕ್ರವಾರ ದಿವೇಕರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ ಕಾನೂನು ಕಾಯರ್ಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಹೆಣ್ಣು ಮಕ್ಕಳ ಮೇಲೆ ನಿರಂತರ ದೌರ್ಜನ್ಯ, ಹಲ್ಲೆ ಪ್ರಕರಣಗಳು ನಡೆಯುತ್ತಿದ್ದು ನಾಗರಿಕ ಸಮಾಜ ತಲೆ ತಕ್ಕಿಸುವಂತಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಹೆಣ್ಣು ಮಕ್ಕಳಿಗೆ ಸರಿಸಮಾನ ಹಕ್ಕುಗಳನ್ನು ಕೊಟ್ಟಮೇಲೂ ಹಾಗೂ ಬಲವಾದ ಕಾನೂನುಗಳು ರೂಪುಗೊಂಡರೂ ಹೆಣ್ಣು ಮಕ್ಕಳ ಮೇಲೆ ಹಲ್ಲೆ, ಲೈಂಗಿಕ ಶೋಷಣೆ ನಿರಂತರವಾಗಿ ನಡೆಯುತ್ತಿದೆ. ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ, ಹಲ್ಲೆ, ಮಾನವ ಸಾಗಾಣಿಕೆ, ಹೀಗೆ ನಿರಂತರ ದೌರ್ಜನ್ಯಗಳು ನಡೆಯುತ್ತಿವೆ. ಇಂದಿನ ಯುವ ಪೀಳಿಗೆ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದ ಅವರು ಕರೆ ನೀಡಿದರು.
ಅಪರಾಧ ಪ್ರೇರೇಪಣೆ ಕೂಡ ಯುವಕರನ್ನು ಗುರಿಯಾಗಿಸಿಕೊಂಡೇ ನಡೆಯುತ್ತಿದೆ. ಮಾದಕ ವಸ್ತುಗಳ ವ್ಯಾಪಾರ, ಮೊಬೈಲ್ ಇಂಟರ್ನೆಟ್ನಂತಹ ಸೈಬರ್ ಅಪರಾಧಗಳು ಹೀಗೆ ಸಮಾಜವನ್ನು ದಿಕ್ಕುತಪ್ಪಿಸುವ ಟಚುವಟಿಕೆಗಳು ನಡೆಯುತ್ತಿವೆ. ಈ ಕಾರಣದಿಂದಾಗಿ ಭವಿಷ್ಯದ ಪ್ರಜೆಗಳಾದ ಯುವಕರನ್ನು ಕೇಂದ್ರೀಕರಿಸಿ ಇಂತಹ ಕಾನೂನು ಕಾಯರ್ಾಗಾರಗಳನ್ನು ನಡೆಸಲಾಗುತ್ತಿದೆ. ಇವುಗಳ ಸದುಪಯೋಗಪಡೆದುಕೊಂಡು ದೇಶವನ್ನು ಉತ್ತಮ ದಿಕ್ಕಿನೆಡೆಗೆ ಕೊಂಡೊಯ್ಯಬೇಕು ಎಂದರು.
ಇಂದಿನ ದಿನಗಳಲ್ಲಿ ಕಾನೂನಿನ ಅರಿವು ಮಹತ್ವದ್ದು. ಕಾನೂನಿನ ಅರಿವಿದ್ದರೆ ಅಪರಾಧಗಳು ಕಡಿಮೆಯಾಗುತ್ತವೆ. ವಿಮೆ ನವೀಕರಣವಾಗದ ವಾಹನ ಅಪರಾಧವಾದರೆ ಮತ್ತೆಂದೂ ಆ ವಾಹನ ಮಾಲಿಕನಿಗೆ ಸಿಗುವುದಿಲ್ಲ. ಅಂತಹ ಕಾನೂನು ಬಂದಿದೆ. ಅಂತಹ ಮಾಹನವನ್ನು ಹರಾಜು ಮಾಡಿ ಅಪಘಾತ ಸಂತ್ರಸ್ಥರಿಗೆ ಪರಿಹಾರ ಕೊಡುವ ಕಾನೂನು ಇದೆ. ಈ ಬಗ್ಗೆ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಿದೆ. ಕಾಲ ಕಾಲಕ್ಕೆ ಕಾನೂನುಗಳು ಬದಲಾಗುತ್ತಿವೆ. ಸಾರ್ವಜನಿಕರು ಜಾಗೃತರಾಗಬೇಕಿದೆ. ಈ ದಿಸೆಯಲ್ಲಿಯೇ ಕಾನೂನು ಸೇವೆಗಳ ಪ್ರಾಧಿಕಾರ ಇಂತಹ ಕಾಯರ್ಾಗಾರವನ್ನು ಹಮ್ಮಿಕೊಂಡಿದೆ ಎಂದು ಅವರು ಹೇಳಿದರು.
ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಕೆ.ಪವಾರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೆವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಟಿ.ಗೋವಿಂದಯ್ಯ, ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿದರ್ೇಶಕ ಹಿಮಂತರಾಜು ಜಿ. ನ್ಯಾಯಾಧೀಶರಾದ ವಿಸ್ಮಿತ ಮೂತರ್ಿ, ರಾಜೀವ್ ಗೋಳಸಾರ, ವಿನುತ ಎಸ್, ವೆಂಕಟೇಶ್ ಕೆ.ಎನ್, ನ್ಯಾಯವಾದಿಗಳಾದ ಸಂಧ್ಯಾ ತಳೇಕರ್, ಎ.ಜಿ.ಹಳದೀಪುರಕರ್, ವರದಾ ಡಿ. ನಾಯ್ಕ್, ಎ.ಆರ್.ಬಿ.ಡಿಸೋಜಾ, ದಿವೇಕರ ವಾಣಿಜ್ಯ ಕಾಲೇಜಿನ ಮುಖ್ಯಸ್ಥ ಸುರೇಂದ್ರ ಎನ್.ದಫೇದಾರ್ ಉಪಸ್ಥಿತರಿದ್ದರು.
ಮಕ್ಕಳಿಗೆ ಬಾಲಸ್ನೇಹಿ ಕಾನೂನು ಸೆವೆಗಳು ಮತ್ತು ಅವುಗಳ ಸಂರಕ್ಷಣೆ (ಬಾಲನ್ಯಾಯ ಕಾಯಿದೆ ಪೋಕ್ಸೋ), ಮೋಟಾರು ವಾಹನ ಕಾಯ್ದೆ, ಮಾನವ ಸಾಗಾಣಿಕೆ ಹಾಗೂ ವಾಣಿಜ್ಯಕ ಲೈಂಗಿಕ ಶೋಷಣೆ, ಮಾದಕ ವಸ್ತುಗಳಿಗೆ ಬಲಿಯಾದವರಿಗೆ ಕಾನೂನು ಸೇವೆಗಳು ಮತ್ತು ಮಾದಕ ಔಷಧ ವಿಪತ್ತಿನ ನಿಮರ್ೂಲನೆ ವಿಷಯಗಳ ಕುರಿತು ಉಪನ್ಯಾಸಗಳು ನಡೆದವು.