ಮಾನಸಿಕ ಹಿಂಸೆ ನೀಡಿ ಆತ್ಮ ಹತ್ಯಗೆ ಪ್ರಚೋದನೆ: ಎಬಿವಿಪಿ ಆರೋಪ

Inciting suicide by inflicting mental torture: ABVP accused

ಮಾನಸಿಕ ಹಿಂಸೆ ನೀಡಿ ಆತ್ಮ ಹತ್ಯಗೆ ಪ್ರಚೋದನೆ: ಎಬಿವಿಪಿ ಆರೋಪ  

ಬಳ್ಳಾರಿ 11: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಳೆದ 75 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಅದೇ ರೀತಿ ಬಳ್ಳಾರಿ ಮಹಾನಗರದಲ್ಲಿರುವ ವಿಜಯನಗರ ಶ್ರೀ ಕೃಣದೇವರಾಯ ವಿಶ್ವವಿದ್ಯಾಲಯದಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕವಾಗಿದ್ದ ಗ್ರಂಥಾಲಯದ ಅಟೆಂಡರ್ ಬಾಲಚಂದ್ರರವರು ಡೆತ್‌ನೋಟ್ ಬರೆದು ಕಲಬುರಗಿಯ ಸಮೀಪದ ರೈಲು ನಿಲದ್ದಾಣದ ಸಮೀಪದ ಅಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಬಾಲಚಂದ್ರರವರ ಪತ್ನಿ ಹೇಳಿದ ಹಾಗೆ ಇವರ ಸಾವಿಗೆ ಮೂಲ ಕಾರಣ ಫ್ರೊಪೇಷರ್ ಮೋಹನ್‌ದಾಸ್ ಬಳಿ ಮೂರು ವರ್ಷಗಳ ಹಿಂದೆ ರೂ. 1,00,000/- ಸಾಲ ಪಡೆದಿರುತ್ತಾರೆ. ಸದರಿ ಮೊತ್ತಕ್ಕೆ ಬಡ್ಡಿ ಸೇರಿ ರೂ. 3,00,000/- ಆಗಿರುತ್ತದೆ. ಮೇರಿ ಎಂಬುವವರ ಬಳಿ ಚೀಟಿಯು ಸಹ ಹಾಕಿರುತ್ತಾರೆ. ಸದರಿ ಚೀಟಿಯ ಹಣವನ್ನು ಮೋಹನ್‌ದಾಸ್‌ರವರು ವಸೂಲಿ ಮಾಡಿ ಸಾಲದ ಮೊತ್ತವನ್ನು ತೀರಿಸಬೇಕೆಂದು ಕಿರುಕುಳ ನೀಡುತ್ತಾ ಅವರಿಗೆ ಮಾನಸಿಕವಾಗಿ ಹಿಂಸೆ ನೀಡಿರುತ್ತಾರೆ. ಇದರಿಂದಾಗಿ ಬಾಲಚಂದ್ರರವರು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಅಟೆಂಡರ್ ಬಾಲಚಂದ್ರರವರಿಗೆ ಮಾನಸಿಕ ಹಿಂಸೆ ನೀಡಿ ಅವರ ಸಾವಿಗೆ ಮೂಲ ಕಾರಣರಾದ ಮೋಹನ್‌ದಾಸ್ ಈ ಕೂಡಲೇ ಅಮಾನತ್ತು ಮಾಡಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಆಗ್ರಹಿಸುತ್ತದೆ. ಮತ್ತು ಬಾಲಚಂದ್ರ ರವರ ಕುಟುಂಬಕ್ಕೆ ಆರ್ಥಿಕ ಸಹಾಯ ಮಡಬೇಕೆಂದು ಕುಲಪತಿಗಳಿಗೆ ಮನವಿ ಸಲ್ಲಿಸಲಾಯಿತು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ಪರಿಷತ್ ದೊಡ್ಡ ಮಟ್ಟದ ಹೋರಾಟ ಕೈಗೊಳ್ಳಲಿದೆ ಎಂದು ತಿಳಿಸಲಾಯಿತು.  

ಈ ಹೋರಾಟ. ಎಬಿವಿಪಿಯ ರಾಜ್ಯ ಸಹಕಾರದರ್ಶಿಯಾದ ವಿನೋದ್ ಅವರು ಮಾತನಾಡುತ್ತಾ ಮೋಹನ್ ದಾಸ್ ಎಂಬಾತ ಈ ಹಿಂದೆ ಬಳ್ಳಾರಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಮಾರ್ಕ್ಸ ಕಾರ್ಡ್‌ ಪಿಜಿನ ವಿಷಯದಲ್ಲಿ ಹೆಚ್ಚುವರಿ  ತೆಗೆದುಕೊಂಡು ಕೊಳ್ಳುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿರುತ್ತಾರೆ ಮತ್ತು ಇವರು ಟಿ.ಎಚ್‌.ಡಿ ವಿದ್ಯಾರ್ಥಿಗಳಿಗೆ ನನಗೆ ಹಣ ಕೊಟ್ಟರೆ ಮಾತ್ರ ನಿಮ್ಮ ಪಿ.ಎಚ್‌.ಡಿ ಸರ್ಟಿಫಿಕೇಟ್ ಬರುತ್ತದೆ ಇಲ್ಲವಾದಲ್ಲಿ ಬರುವುದಿಲ್ಲ ಎಂದು ಎದುರಿಸಿರುತ್ತಾರೆ ಎಂದು ಇವರ ವಿರುದ್ಧ ಆರೋಪಿಸಿರುತ್ತಾರೆ ಇಂಥ ಪವಿತ್ರವಾದ ವಿಶ್ವವಿದ್ಯಾಲಯ ಬಡ್ಡಿ   ವ್ಯಾಪಾರ ಮಾಡಿ ಒಬ್ಬ ಅಮಾಯಕನ ಸಾವಿಗೆ ಕಾರಣರಾದ ಮೋಹನ್ ದಾಸ್ ಅವರನ್ನು ಈ ಕೂಡಲೇ ಅಮಾನತ್ತು ಮಾಡಬೇಕೆಂದು ಆಗ್ರಹಿಸಿದರು ಇಲ್ಲವಾದಲ್ಲಿ ಉಗ್ರ ಹೋರಾಟ ಕೈಗೊಳ್ಳುವುದೆಂದು ಕರೆ ನೀಡಿದರು 

 ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಅರವಿಂದ್, ಕಾರ್ಯಕರ್ತರಾದ ದೀಲೀಪ್, ದರ್ಶನ್, ಆದರ್ಶ, ಮಾರುತಿ, ಬಸವ, ನಗರ ಸಂಘಟನಾ ಕಾರ್ಯದರ್ಶಿ ಟಿ.ಭರತ್, ಗಂಗಾಧರ ಹಾಗೂ ಮತ್ತಿತರರು ಉಪಸ್ಥಿತಿರಿದ್ದರು.