ಇಂಚಲ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ರಥೋತ್ಸವ

ಲೋಕದರ್ಶನ ವರದಿ

ಬೈಲಹೊಂಗಲ,2: ಸುಕ್ಷೇತ್ರ ಇಂಚಲ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿಯವರ 79 ನೇ ಹುಟ್ಟುಹಬ್ಬದಂಗವಾಗಿ ಬುಧವಾರ ನಡೆದ ರಜತ  ರಥೋತ್ಸವ ಮತ್ತು ಮಹಾರಥೋತ್ಸವ ಅದ್ದೂರಿಯಿಂದ ಜರುಗಿತು. ಸಹಸ್ರಾರು ಭಕ್ತಾದಿಗಳೆಲ್ಲ ಕೂಡಿ ಬುಧವಾರ ಸಮಾರೋಪಗೊಂಡ ಜಾತ್ರಾ ಮಹೋತ್ಸವದಲ್ಲಿ ರಜತ ರಥ ಮತ್ತು ಮಹಾರಥೋತ್ಸವವನ್ನು ಹರ ಹರ ಮಹಾದೇವ,ಶ್ರೀ ಶಿವಾನಂದ ಭಾರತಿ ಮಹಾರಾಜಕೀ ಜೈ ಘೋಷ ಮುಗಿಲು ಮುಟ್ಟುವಂತೆ ಜೈಕಾರ ಕೇಳಿ ಬಂದಿತು. 

       ಹಂಪಿ ಹೇಮಕೂಟದ ವಿದ್ಯಾನಂದ ಭಾರತಿ ಸ್ವಾಮಿಗಳು, ಕುಳ್ಳೂರಿನ ಬಸವಾನಂದ ಸ್ವಾಮಿಜಿ, ಚಿಕ್ಕೂರಿನ ಅಲ್ಲಮಪ್ರಭು, ಪೂಣರ್ಾನಂದ ಸ್ವಾಮಿಗಳು, ಮಲ್ಲಾಪೂರದ ಚಿದಾನಂದ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು.  ಭಕ್ತರು ಉತ್ತತ್ತಿ, ಬಾಳೇಹಣ್ಣು ಎಸೆದು ಭಕ್ತಿಯ ಪರಾಕಾಷ್ಠೆ ಮೆರೆದರು. ಮಕ್ಕಳ ಮಾರಾಟ ಮಳಿಗೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು,ಮಕ್ಕಳು ಮಕ್ಕಳ ಆಟಿಕೆ ಕೊಳ್ಳು ಮುಗಿಬಿದ್ದಿರುವುದು ಕಂಡು ಬಂದಿತು.

          ರಥೋತ್ಸವದಲ್ಲಿ  ಶಿವಯೋಗಿಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ.ಬಿ.ಮಲ್ಲೂರ, ಎಸ್.ಎಂ.ರಾಹುತನವರ,  ಪುರಸಭೆ ಸದಸ್ಯ ಬಸವರಾಜ ಜನ್ಮಟ್ಟಿ, ಇಂಜನೀಯರ್ ವಿಜಯಕುಮಾರ, ಬೇವಿನಕೊಪ್ಪ, ಎಸ್.ಎನ್.ಕೊಳ್ಳಿ, ಎಸ್.ಎಮ್.ದಿನ್ನಿಮನಿ ಹಾಗೂ   ಮಹಾರಾಷ್ಟ್ರ, ಆಂದ್ರಪ್ರದೇಶ, ಕೇರಳ, ಗೋವಾ, ದೆಹಲಿ ಸೇರಿದಂತೆ ಸಹಸ್ರಾರು ಭಕ್ತಾಧಿಗಳು ಉಪಸ್ಥಿತರಿದ್ದರು.