“ಹುಚ್ಚರ ಸಂತೆ” ನಗೆ ನಾಟಕ ಪ್ರದರ್ಶನದ ಉದ್ಘಾಟನೆ
ಧಾರವಾಡ. 23 : ಧಾರವಾಡದ ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಮತ್ತು ಸಂತತ ಟ್ರಸ್ಟ್ ವತಿಯಿಂದ, ಟೂರಿಂಗ್‌ಟಾಕೀಸ್ ಅಭಿನಯಿಸುವ ರಂಗಭೂಮಿ ಮತ್ತು ಕಿರುತೆರೆ ನಟ ಉಮೇಶ ತೇಲಿ ನಿರ್ದೇಶನದ ‘ಹುಚ್ಚರ ಸಂತೆ’ ನಗೆ ನಾಟಕವನ್ನು ಜನೆವರಿ 25 ರಂದು ಶನಿವಾರ ಸಂಜೆ 6:45ಕ್ಕೆ ಧಾರವಾಡದ ಸೃಜನಾ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ವಸತಿ ಶಾಲೆಗಳ ನಿಲಯ ಪಾಲಕರ ಸಂಘದ ರಾಜ್ಯಾಧ್ಯಕ್ಷರಾದ ಸುರೇಶ ಗುಂಡಣ್ಣವರ ನೆರೆವೆರಿಸುವರು. ಅಧ್ಯಕ್ಷತೆಯನ್ನು ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ಅಧ್ಯಕ್ಷರಾದ ಎಮ್ ಎಸ್ ಫರಾಸ್ ವಹಿಸುವರು. ಮುಖ್ಯ ಅತಿಥಿಗಳಾಗಿ ವಾಲ್ಮಿಯ ಹಿರಿಯ ಅಭಿಯಂತರರಾದ ಬಸವರಾಜ ಬಂಡಿವಡ್ಡರ, ಇಂಜಿನಿಯರ್ ಅಸೋಸಿಯೇಷನ್ ಧಾರವಾಡ ಸೆಂಟ್ರಲ್‌ನ ಅಧ್ಯಕ್ಷರಾದ ಸುನಿಲ್ ಬಾಗೇವಾಡಿ ಆಗಮಿಸುವರು. ಇದೇ ಸಂದರ್ಭದಲ್ಲಿ ಹಿರಿಯ ಅಭಿಯಂತರರಾದ ಸಂಜಯ ಕಬ್ಬೂರ, ಕಲಾವಿದರಾದ ವೀರಣ್ಣ ಪತ್ತಾರ ಅವರನ್ನು ಗೌರವಿಸಲಾಗುವುದು ಎಂದು ಪ್ರದಾನ ಕಾರ್ಯದರ್ಶಿ ಮಾತಾಂರ್ಡಪ್ಪ ಕತ್ತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.